ತೆಲಸಂಗ: ಕನ್ನಡ ಭಾಷೆಯನ್ನು ಹೆತ್ತ ತಾಯಿಯಂತೆ ಆರಾಧಿಸುವ ಮೂಲಕ ಭಾಷೆಯ ಹಿರಿಮೆ ಹಾಗೂ ಮಹತ್ವವನ್ನು ಜಗತ್ತಿಗೆ ಸಾರಬೇಕು ಎಂದು ನೌಕಾಪಡೆಯ ಹುಕ್ಕೇರಿ ಯೋಧ ಶಿವಾನಂದ ಹಂಜಿ ಹೇಳಿದರು.
ಗುಜರಾತ್ ರಾಜ್ಯದ ಏರ್‌ೆರ್ಸ್ ಸ್ಟೇಶನ್ ಜಾಮ್ನಗರದಲ್ಲಿ ಕರ್ನಾಟಕದ ನೌಕಾಪಡೆಯ ಯೋಧರ ಕನ್ನಡ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಂಘದ ನೌಕಾಪಡೆಯ ಹಿರಿಯ ಯೋಧ ನವೀನ್ ಮಾತನಾಡಿದರು. ಕರ್ನಾಟಕದ ನೌಕಾಪಡೆ ಯೋಧರಾದ ಶಿವಮೊಗ್ಗದ ಅಜಿತ್ ಕುಮಾರ, ಹುಬ್ಬಳ್ಳಿಯ ಸಂತೋಷ ಪಾಟೀಲ, ಗದಗದ ವಿಜಯ ಪಾಟೀಲ, ವಿಜಯಪುರದ ಪ್ರಶಾಂತ ಹಿರೇಮಠ, ರಾಘವೇಂದ್ರ, ಮಂಡ್ಯದ ಉಮೇಶ, ಚಂದ್ರಶೇಖರ, ಭರತಗೌಡ, ಸಂದೀಪ್ ಶೆಟ್ಟಿ, ಸಾಯಿನಾಥ, ಆನಂದ ಹನಗಂಡಿ, ಮಹಾಂತೇಶ ಕಳಸಗೊಂಡ ಇತರರಿದ್ದರು.