ಸರ್ಕಾರದಲ್ಲಿ ಹಣದ ಅಭಾವ ಇಲ್ಲ

blank

ಬೈಲಹೊಂಗಲ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತತ್ವದ ಕಾಂಗ್ರೆಸ್ ಸರ್ಕಾರದಿಂದ ಇಲಾಖೆಗಳಿಗೆ ಸೇರಬೇಕಿದ್ದ ನಿಗದಿತ ಹಣ ಸರಿಯಾಗಿ ತಲುಪಿಸಲಾಗುತ್ತಿದ್ದು, ಹಣದ ಅಭಾವ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಹೇಳಿದರು.

ಪಟ್ಟಣದ ಹೊಸೂರು ರಸ್ತೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಮಂಗಳವಾರ ನೂತನ ಕಟ್ಟಡ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಕಾಲೇಜು ಅಭಿವದ್ಧಿಗಾಗಿ ಮಹಾಂತೇಶ ಕೌಜಲಗಿ ಅವರ ಪ್ರಯತ್ನದ ಲವಾಗಿ 4 ಕೋಟಿ ರೂ. ಅನುದಾನ ಒದಗಿಸಿದ್ದೇವೆ. ಆರ್ಥಿಕ ಶಿಸ್ತು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗೆ ನಿಗದಿಯಾಗಿರುವ ಹಣವನ್ನು ತಲುಪಿಸಿ ಅಧಿಕ ಹೆಚ್ಚುವರಿ ಸಂಪನ್ಮೂಲವನ್ನು ಬಳಸಿಕೊಂಡು ನಾಡಿನ ಜನತೆಗೆ ಕೊಟ್ಟಿರುವ ಮಾತಿನಂತೆ ಪಂಚಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿ ರಾಜ್ಯದ ಕೆಳ ವರ್ಗದ ಜನತೆಯ ಸಮಗ್ರ ಅಭಿವದ್ಧಿಗೆ ಯೋಜನೆ ರೂಪಿಸಿದ್ದಾರೆ ಎಂದರು.

ಶೈಕ್ಷಣಿಕ ಕ್ಷೇತ್ರದಲ್ಲಿಯೂ ನೂತನ ಪ್ರಯೋಗಗಳನ್ನು ನಡೆಸಲಾಗಿದ್ದು, ಪ್ರಸ್ತುತ ಸಾಲಿನಲ್ಲಿ ಪದವಿ
ಕೋರ್ಸ್‌ನಲ್ಲಿ ಹೊಸದಾದ ಎಇಡಿಪಿ ಎಂಬ ಕೋರ್ಸ್ ಪ್ರಾರಂಭಿಸಲಾಗಿದೆ. ಇದರಿಂದಾಗಿ ಶಾಪಿಂಗ್ ಮಾಲ್‌ಗಳಲ್ಲಿ, ಸೇಲ್ಸ್ ವತ್ತಿ ರಂಗದಲ್ಲಿ ಕಾರ್ಯ ನಿರ್ವಹಿಸಲು ಯುವತಿಯರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಅದರಂತೆ ಈ ಕಾಮರ್ಸ್,ಲಾಜಿಸ್ಟಿಕ್ಸ್ ಹಾಗೂ ಬಿ.ಕಾಂ ಮಾಡಿದ ವಿದ್ಯಾರ್ಥಿಗಳಿಗೆ ಬಿಎ್ಎಸ್‌ಐ ಹೀಗೆ ನಾಲ್ಕು ವಿಭಾಗಗಳಲ್ಲಿ ಕೌಶಲಕ್ಕೆ ಹೆಚ್ಚು ಉತ್ತೇಜನ ನೀಡುವ ದಷ್ಟಿಯಿಂದ ಪ್ರತ್ಯೇಕ ಪದವಿ
ಕೋರ್ಸ್‌ಗಳನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಜಾರಿಗೆ ತರಲಾಗಿದ್ದು, ಸುಮಾರು 45 ಕಾಲೇಜುಗಳಲ್ಲಿ 1,400 ದಾಖಲಾಗಿದ್ದಾರೆ. ಸಭಾಂಗಣ ಸೇರಿದಂತೆ ವಿವಿಧ ಸೌಕರ್ಯಗಳಿಗೆ ಶಾಸಕ ಮಹಾಂತೇಶ ಕೌಜಲಗಿ ಬೇಡಿಕೆಯಂತೆ ನಾಲ್ಕು ಕೊಠಡಿ ಮಂಜೂರು ಮಾಡಲಾಗಿದೆ ಎಂದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಚಿವರು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ನಮ್ಮ ಕಾಲೇಜಿನ ಅಭಿವದ್ಧಿಗೆ ಅನುದಾನ ನೀಡಿದಕ್ಕೆ ಕತಜ್ಞತೆ ಸಲ್ಲಿಸಿದರು.
ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾದ ಶೋಭಾ ಜಿ., ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸಮನಿ, ಪ್ರಾಶುಪಾಲ ಪ್ರೊ.ಬಿ. ಕೆ. ಮಧುವಾಲ ಇತರರು ಇದ್ದರು.

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …