ಗೋಕಾಕ: ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ 21ನೇ ಸತೀಶ ಶುಗರ್ಸ್ ಅವಾರ್ಡ್ಸ್ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಅಂತಿಮ ಹಂತದ ಸ್ಪರ್ಧೆಯಲ್ಲಿ ಕಾಲೇಜು ವಿಭಾಗದ ಜನಪದ ಗಾಯನ ಸ್ಪರ್ಧೆಯಲ್ಲಿ ನಗರದ ಎಸ್‌ಎಸ್‌ಎ ಪಿಯು ಕಾಲೇಜಿನ ಕಿರಣ ವಗ್ಗನ್ನವರ ಪ್ರಥಮ, ಕಲ್ಲೊಳ್ಳಿಯ ಎನ್.ಆರ್. ಪಾಟೀಲ ಪಿಯು ಕಾಲೇಜಿನ ಸುಪ್ರಿಯಾ ಮಠಪತಿ ದ್ವಿತೀಯ, ನಗರದ ಕೆಎಲ್‌ಇ ಬಿಸಿಎ ಕಾಲೇಜಿನ ಸೌಂದರ್ಯ ಭೂತಿ ತತೀಯ ಸ್ಥಾನ ಪಡೆದಿದ್ದಾರೆ.
ಗಾಯನದಲ್ಲಿ ನಗರದ ಕೆಎಲ್‌ಇ ಸಿಎಸ್ ಅಂಗಡಿ ಪಿಯು ಕಾಲೇಜಿನ ಪೂಜಾ ಮಿಲ್ಕೆ ಪ್ರಥಮ, ಎಸ್‌ಎಸ್‌ಎ ಪಿಯು ಕಾಲೇಜಿನ ಸುದರ್ಶನ ರೆಬ್ಬನ್ನವರ ದ್ವಿತೀಯ, ಎನ್‌ಆರ್ ಪಾಟೀಲ ಪಿಯು ಕಾಲೇಜಿನ ಸುಪ್ರೀಯಾ ಮಠಪತಿ ತತೀಯ ಸ್ಥಾನ ಪಡೆದರು. ಅನುಕ್ರಮವಾಗಿ ವಿಜೇತರಿಗೆ 15, 10, 7 ಸಾವಿರ ರೂ. ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಮುಕ್ತ ಸೋಲೋ ಡಾನ್ಸ್‌ನಲ್ಲಿ ರಿಷಬ್ ಗೊಡಚಿ ಪ್ರಥಮ, ಬೆಳಗಾವಿಯ ಪ್ರೀತಂ ಡೊಂಗರೆ ದ್ವಿತೀಯ, ಬೆಳಗಾವಿಯ ಸಮ್ಮೇದ್ ಚೌಗಲೆ ತತೀಯ ಸ್ಥಾನ ಗಳಿಸಿದರು. ಅನುಕ್ರಮವಾಗಿ 20, 15, 10 ಸಾವಿರ ರೂ. ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಪ್ರೌಢಶಾಲಾ ವಿಭಾಗದ ಜನಪದ ನತ್ಯದಲ್ಲಿ ನಗರದ ಶಂಕರಲಿಂಗ ಪ್ರೌಢಶಾಲೆಯ ಶ್ರಾವಣಿ ಬಾಣಕಾರಿ ತಂಡ ಪ್ರಥಮ, ಮೂಡಲಗಿಯ ಎಂಎಂಡಿಆರ್‌ಎಸ್‌ನ ತಸ್ಮೀಯಾ ತಂಡ ದ್ವಿತೀಯ, ನಾಗನೂರಿನ ಚೈತನ್ಯ ಆಶ್ರಮ ಆಂಗ್ಲ ಮಾಧ್ಯಮ ಶಾಲೆಯ ಶೀಪಾ ಇನಾಮದಾರ ತಂಡ ತತೀಯ ಸ್ಥಾನ ಪಡೆದಿದೆ. ಪ್ರಾಥಮಿಕ ವಿಭಾಗದ ಸಮೂಹ ನತ್ಯದಲ್ಲಿ ನಗರದ ಆಕ್ಸ್‌ರ್ಡ್ ಶಾಲೆಯ ಭೂಮಿಕಾ ನಾಯಕ ತಂಡ ಪ್ರಥಮ, ಘಟಪ್ರಭಾದ ಶಿವಾನಂದ ಸ್ವಾಮೀಜಿ ಶಾಲೆಯ ಶ್ರೇಯಸ ತೇರಣಿ ತಂಡ ದ್ವಿತೀಯ, ಕೊಣ್ಣೂರಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಅರ್ಪಿತಾ ಮುನವಳ್ಳಿ ತಂಡಕ್ಕೆ ತತೀಯ ಸ್ಥಾನ ಲಭಿಸಿದೆ. ಅನುಕ್ರಮವಾಗಿ ವಿಜೇತರಿಗೆ 50, 30, 20ಸಾವಿರ ರೂ. ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
ಸಾಧಕರಾದ ಸಾಹಿತಿ ಅಶೋಕ ನೀಲಗಾರ, ಕುಸ್ತಿಪಟು ಅಮೂಲ್ಯ ಕುಂದರಗಿ, ಶಿಕ್ಷಕ ಶಾಂತಪ್ಪ ಬೆಳ್ಳೂರಗಿ, ಅಂಗವಿಕಲ ಕ್ರೀಡಾಪಟು ಹನುಮಂತ ಹಾವನ್ನವರ ಅವರನ್ನು ಸನ್ಮಾನಿಸಲಾಯಿತು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಕುಲಗುಡೆ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ನಿವತ್ತ ಕಷಿ ಅಧಿಕಾರಿ ವೈ ಬಿ. ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ ಮನ್ನಿಕೇರಿ, ಜಿ.ಬಿ. ಬಳಗಾರ, ಹೆಸ್ಕಾಂ ಅಧಿಕಾರಿ ಸುಭಾಸ ವರಾಳೆ ವಿಜೇತರಿಗೆ ಬಹುಮಾನ