More

  ಕರೊನಾ ಹರಡುವುದರಲ್ಲಷ್ಟೇ ಅಲ್ಲ, ದೆಹಲಿ ಗಲಭೆಯಲ್ಲೂ ತಬ್ಲಿಘಿಗಳ ಕೈವಾಡ…!

  ನವದೆಹಲಿ: ತಬ್ಲಿಘ್​ ಜಮಾತ್​, ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ, ಪಿಂಜ್ರಾ ತೋಡ್​ ಗ್ರೂಪ್​, ಜಾಮಿಯಾ ಕೋ-ಆರ್ಡಿನೇಷನ್​ ಕಮಿಟಿ, ಹಜರತ್​ ನಿಜಾಮುದ್ದೀನ್​ ಮರ್ಕಜ್​…..

  ಕಳೆದ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಂಭವಿಸಿದ ಗಲಭೆಯಲ್ಲಿ ಪ್ರಮುಖ ಆರೋಪಿಯಾಗಿರುವ ಫೈಸಲ್​ ಫಾರೂಖ್​ ಮೇಲಿನ ಎಲ್ಲ ಸಂಘಟನೆಗಳ ಪ್ರಮುಖರೊಂದಿಗೆ ನಂಟು ಹೊಂದಿದ್ದ. ಗಲಭೆ ನಡೆದಿದ್ದ ಸಂದರ್ಭದಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದ ಎಂದು ಪೊಲಿಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

  ಇದನ್ನೂ ಓದಿ; ‘ಯಾವುದಕ್ಕೂ ಜತೆಗೊಂದು ಸುತ್ತಿಗೆಯಿರಲಿ…’ ಜನರಿಗೆ ಮುಂಬೈ ಪಾಲಿಕೆ ಸಲಹೆ…..!

  ಗಲಭೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ 18 ಜನರ ಪೈಕಿ ಪ್ರಮುಖನಾಗಿರುವ ಫಾರೂಖ್​, ದೆಹಲಿಯ ದಯಾಳ್​ಪುರದಲ್ಲಿರುವ ರಾಜಧಾನಿ ಪಬ್ಲಿಕ್​ ಸ್ಕೂಲ್​ನ ಮಾಲೀಕನೂ ಆಗಿದ್ದಾನೆ. ದೆಹಲಿಯ ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಮಹಮ್ಮದ್​ ಸಾದ್​ ಆಪ್ತನೆಂದೇ ಹೇಳಲಾಗಿರುವ ಅಬ್ದುಲ್​ ಅಲೀಂ ಜತೆಗೆ ಫಾರೂಖ್​ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿರುವುದು ಪೊಲೀಸ್​ ತನಿಖೆಯಿಂದ ಗೊತ್ತಾಗಿದೆ.

  ಶಾಲೆ ಮೇಲೆ ದಾಳಿಗೆ ಷಡ್ಯಂತ್ರ: ಗಲಭೆಕೋರರು ಆರಂಭದಲ್ಲಿ ಫಾರೂಖ್​ನ ರಾಜಧಾನಿ ಸ್ಕೂಲ್​ ಸಮೀಪವಿದ್ದ ಡಿಆರ್​ಪಿ ಕಾನ್ವೆಂಟ್​ ಸ್ಕೂಲ್​ ಮೇಲೆ ದಾಳಿ ನಡೆಸಿದ್ದರು. ಇದು ಫಾರೂಖ್​ ಅಣತಿ ಮೇರೆಗೆ ನಡೆದಿತ್ತು. ಇದಕ್ಕಾಗಿ ಷಡ್ಯಂತ್ರ ರಚಿಸಿ ಶಾಲೆ ಮೇಲೆ ದಾಳಿ ನಡೆಸಿದ್ದ ಎನ್ನುವುದು ಕೂಡ ತನಿಖೆಯಲ್ಲಿ ಬಯಲಾಗಿದೆ.

  ಇದನ್ನೂ ಓದಿ; ವಿಲೀನ ಕಾಲವೂ ಮುಗೀತು… ಶುರುವಾಗಿದೆ ಖಾಸಗೀಕರಣ ಪ್ರಕ್ರಿಯೆ; ಮಾರಾಟಕ್ಕಿವೆ ಮೂರು ಸರ್ಕಾರಿ ಬ್ಯಾಂಕ್​ಗಳು…!

  ಇನ್ನೊಂದೆಡೆ, ಫಾರೂಖ್​ ತಬ್ಲಿಘ್​ನ ಅಬ್ದುಲ್ ಅಲೀಂ ಜತೆ ನಂಟು ಹೊಂದಿರುವುದು ತಬ್ಲಿಘ್​ ಮುಖ್ಯಸ್ಥರಿಗೆ ಕುತ್ತಾಗಿ ಪರಿಣಮಿಸಿದೆ. ಕರೊನಾ ಕಾರಣದಿಂದಾಗಿ ಕುಖ್ಯಾತಿಗೆ ಒಳಗಾಗಿದ್ದ ತಬ್ಲಿಘ್​ ಜಮಾತ್​ನ ನಿಜಾಮುದ್ದೀನ್​ ಮರ್ಕಜ್​ ಮತ್ತೊಮ್ಮೆ ಪೊಲೀಸರ ನಿಗಾಕ್ಕೆ ಬಂದಂತಾಗಿದೆ.

  ‘ನನ್ನ ಮಕ್ಕಳನ್ನ ಈ ವರ್ಷ ಶಾಲೆಗೆ ಕಳುಹಿಸಲ್ಲ’….. ಪಾಲಕರಿಗೆ ಇರುವ ಆಯ್ಕೆಗಳೇನು?

  ರಾಜ್ಯೋತ್ಸವ ರಸಪ್ರಶ್ನೆ - 29

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts