ಕಂಪ್ಲಿ: ಆಚಾರದಿಂದ ಮಹತ್ತರವಾದದ್ದನ್ನು ಸಾಧಿಸಲು ಸಾಧ್ಯ ಎಂದು ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಸ್ವಾಮಿ ಹೇಳಿದರು.
ಪಟ್ಟಣದ ಲಿಂ.ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಲ್ಲಿ ಗುರುವಾರ ಲಿಂ.ಓದ್ಸೋ ರುದ್ರಯ್ಯ ಸ್ಮರಣಾರ್ಥ ಹಮ್ಮಿಕೊಂಡಿದ್ದ 242ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಬಾಲ್ಯದಲ್ಲಿಯೇ ಆಚಾರ, ವಿಚಾರ, ಸಂಸ್ಕಾರ, ಮಾನವೀಯತೆ, ಪ್ರಾಮಾಣಿಕತೆ ಕಲಿಸಿದಲ್ಲಿ ಮಾತ್ರ ಸಾರ್ಥಕ ಜೀವನ ಸಾಗಿಸಬಲ್ಲರು. ನಿಸ್ವಾರ್ಥ, ಪರೋಪಕಾರಯುಕ್ತ ಜೀವನ ಸಾಗಿಸುವ ಚಿಂತನೆಯೇ ಶಿವಾನುಭವ ಎಂದರು.
ಕನ್ನಡ ಹಿತರಕ್ಷಕ ಸಂಘದ ನಿರ್ದೇಶಕ ಕಣೇಕಲ್ ಯಂಕಾರೆಡ್ಡಿ ಮಾತನಾಡಿದರು. ಪ್ರಮುಖರಾದ ಕೆ.ಎಂ.ಚಂದ್ರಶೇಖರಸ್ವಾಮಿ, ಸಜ್ಜೇದ ವೀರಭದ್ರಪ್ಪ ಮಾತನಾಡಿದರು. ವೀರಶೈವ ಸಂಘದ ನಿರ್ದೇಶಕ ಎಸ್.ಡಿ.ಬಸವರಾಜ, ಪ್ರಮುಖರಾದ ಸಂತೋಷ ಕೊ.ಸೋಗಿ, ಟಿ.ತಿಪ್ಪೇಸ್ವಾಮಿ, ಎಸ್.ಬಂಡೆಯ್ಯಸ್ವಾಮಿ, ಕೆ.ಎಂ.ವಾಗೀಶ, ಕಲ್ಗುಡಿ ನಾಗರತ್ನಾ, ಕೆ.ಎಂ.ಸೌಮ್ಯಾ, ಎಚ್.ಎಂ.ಜಗದೀಶ, ಯೋಗೇಶಾಚಾರ್ ಇತರರಿದ್ದರು.