ಹೆರಿಗೆ ವೇಳೆ ತುಂಡಾದ ತಲೆಯನ್ನು ತಾಯಿಯ ಹೊಟ್ಟೆಯಲ್ಲೇ ಬಿಟ್ಟು ಯಾಮಾರಿಸಿದ ನರ್ಸ್​!

ರಾಮಗಢ: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯ ಮೇಲ್​ ನರ್ಸ್​ವೊಬ್ಬರು ಹೆರಿಗೆ ಸಮಯದಲ್ಲಿ ಅಜಾಗರೂಕತೆ ತೋರಿಸಿದ್ದರಿಂದ ಮಗುವಿನ ತಲೆ ದೇಹದಿಂದ ಬೇರ್ಪಟ್ಟು ತಾಯಿಯ ಹೊಟ್ಟೆಯೊಳಗೇ ಉಳಿದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಮಗುವಿನ ತಲೆ ತಾಯಿಯ ದೇಹದೊಳಗಿರುವುದನ್ನು ಮುಚ್ಚಿಟ್ಟು ಕುಟುಂಬದವರಿಗೆ ಮಗುವಿನ ಮುಖವನ್ನೂ ತೋರಿಸದೇ ಸಹೋದ್ಯೋಗಿಗಳ ನೆರವಿನೊಂದಿಗೆ ಶವಾಗಾರಕ್ಕೆ ರವಾನಿಸಿದ್ದಾನೆ. ಘಟನೆ ನಡೆದ ನಂತರ ತಾಯಿಯ ಆರೋಗ್ಯವೂ ಗಂಭೀರವಾಗಿದ್ದು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಕುಟುಂಬದವರಿಗೆ ಸೂಚಿಸಿದ್ದಾನೆ.

ಕುಟುಂಬದವರು ತಕ್ಷಣ ಬಾಣಂತಿಯನ್ನು ಹೆಚ್ಚಿನ ಚಿಕಿತ್ಸೆಗೆ ಜೋಧ್​ಪುರದ ಉಮೈದ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾವು ಹೆರಿಗೆ ಮಾಡಿಸಿದ್ದೇವೆ. ಆದರೆ, ಗರ್ಭಕೋಶದಲ್ಲಿ ಕರಳು ಬಳ್ಳಿ ಹಾಗೆ ಉಳಿದುಬಿಟ್ಟಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗೆ ರೋಗಿಯನ್ನು ಬೇರೆ ಆಸ್ಪತ್ರೆಗೆ ರವಾನಿಸುತ್ತಿದ್ದೇವೆ ಎಂದು ರಾಮಗಢದ ಆಸ್ಪತ್ರೆಯವರು ತಿಳಿಸಿದ್ದಾರೆ.

ಆದರೆ, ಉಮೈದ್​ ಆಸ್ಪತ್ರೆಯ ವೈದ್ಯರ ತಂಡ ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದಾಗ ಅಚ್ಚರಿಯಂತೆ ಮಗುವಿನ ತಲೆ ಕಂಡುಬಂದಿದೆ. ತಕ್ಷಣ ವೈದ್ಯರು ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಮಹಿಳೆಯ ಪತಿ ಪ್ರಕರಣದ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಸಂಬಂಧ ಪೊಲೀಸರು ಇನ್ನೂ ಯಾರನ್ನು ಬಂಧಿಸಿಲ್ಲ.

ಮಹಿಳೆ ಗಂಭೀರ ಸ್ಥಿತಿಯಲ್ಲಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *