ರಾಯಬಾಗ: ಬೆಂಗಳೂರಿನಲ್ಲಿ 1ರಿಂದ ಚಿತ್ರಕಲಾ ಪ್ರದರ್ಶನ

ರಾಯಬಾಗ: ದಾಕಹವಿಸ ಸಂಘ ಬೆಂಗಳೂರು ವತಿಯಿಂದ ಸೋಮವಾರದಿಂದ ಏ. 7 ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಗುಂಪು ಕಲಾ ಪ್ರದರ್ಶನ ಏರ್ಪಡಿಸಲಾಗಿದ್ದು, ಪಟ್ಟಣದ ಚಿತ್ರ ಕಲಾವಿದ ಬಾಬುರಾವ್ ನಿಡೋಣಿ ಅವರ ಕಲಾಕೃತಿಗಳು ಪ್ರದರ್ಶನಕ್ಕೆ ಆಯ್ಕೆಗೊಂಡಿವೆ. ನಾಡಿನ ಹೆಸರಾಂತ 30 ಚಿತ್ರಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಪ್ರದರ್ಶನವನ್ನು ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಆಗಮಿಸಲಿದ್ದಾರೆ.