
ಬೆಳಗಾವಿ: ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭವಾಗಿದ್ದು, ಬುಧವಾರ ಬೆಳಗ್ಗ 7ಗಂಟೆಗೆಮತಗಟ್ಟೆಯ ಮುಂದೆ ಜನರು ಸರತಿ ಸಾಲಿನಲ್ಲಿ ಮತದಾನ ಮಾಡಿದರು.
ಜಿಲ್ಲೆಯ 4434ಮತಗಟ್ಟೆಗಳಲ್ಲಿ ಬೆಳಗ್ಗೆ 6ಗಂಟೆಗೆ ಮತದಾನದ ಅಣುಕು ಪ್ರದರ್ಶನ ನಡೆಯಿತು. ಜಿಟಿಜಿಟಿ ಮಳೆ ಹಿನ್ನೆಲೆ ಬಳಿಕ 7 ಗಂಟೆಗೆ ಜನರು ಮತದಾನ ಮಾಡಿದರು.ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿಶ್ವೇಶ್ವರಯ್ಯ ನಗರದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಬೆಳಿಗ್ಗೆಯೇ ತಮ್ಮ ಮತವನ್ನು ಚಲಾಯಿಸಿದರು.