ಘಟಪ್ರಭಾ: ಪ್ರಸ್ತುತ ದಿನಗಳಲ್ಲಿ ಎಲ್ಲ ಬ್ಯಾಂಕ್‌ಗಳಲ್ಲಿ ಸಿಸಿ ಕ್ಯಾಮರಾ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದರ ಜತೆಗೆ ಅತ್ಯಾಧುನಿಕ ಸುರಕ್ಷತೆ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ಸಿಪಿಐ ಎಚ್.ಡಿ.ಮುಲ್ಲಾ ತಿಳಿಸಿದರು.
ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಂಕ್ ವ್ಯವಸ್ಥಾಪಕರ ಜಾಗೃತಿ ಸಭೆಯಲ್ಲಿ ಮಾತನಾಡಿ, ಬ್ಯಾಂಕ್ ಭದ್ರತೆ ವಿಷಯದಲ್ಲಿ ವ್ಯವಸ್ಥಾಪಕ ಪಾತ್ರ ಪ್ರಮುಖವಾಗಿದೆ. ಬ್ಯಾಂಕ್ ಪ್ರವೇಶ ದ್ವಾರಗಳಲ್ಲಿ ಸ್ಟ್ರಾಂಗ್ ಲಾಕ್ ಅಳವಡಿಸುವ ಜತೆಗೆ ಬ್ಯಾಂಕ್ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು. ಎಲ್ಲ ಬ್ಯಾಂಕ್‌ಗಳಲ್ಲಿ ಅಗತ್ಯ ಆಯುಧಗಳೊಂದಿಗೆ ಮಾಜಿ ಸೈನಿಕರು ಹಾಗೂ ಸುರಕ್ಷತಾ ಗಾರ್ಡ್ ನೇಮಿಸಬೇಕು. ತುರ್ತು ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಪಿಎಸ್‌ಐ ಎಸ್.ಆರ್.ಕಣವಿ, ಸಿಬ್ಬಂದಿಗಳಾದ ರಾಜು ಧುಮ್ಮಾಳೆ, ಬಿ.ಎಸ್.ನಾಯಕ, ರಾಮಕೃಷ್ಣ ಗಿಡ್ಡಪ್ಪಗೋಳ, ಬಿ.ಎಂ.ತಳವಾರ, ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಹಾಗೂ ಸಹಕಾರಿಗಳ ವ್ಯವಸ್ಥಾಪಕರು ಪಾಲ್ಗೊಂಡಿದ್ದರು.