More

    ಆಸ್ಸಾಂನಲ್ಲಿ 644 ಉಗ್ರರು ಪೊಲೀಸರಿಗೆ ಶರಣು; ರಾಜ್ಯದ ಅಭಿವೃದ್ಧಿಗಾಗಿ ಮುಖ್ಯವಾಹಿನಿಗೆ ಬಂದ ಇವರೆಲ್ಲರ ಬಗ್ಗೆ ಸಂತೋಷವಿದೆ ಎಂದ್ರು ಸಿಎಂ

    ಗುವಾಹಟಿ: ಆಸ್ಸಾಂನಲ್ಲಿ ಇಂದು ಎಂಟು ಉಗ್ರ ಸಂಘಟನೆಗಳ ಒಟ್ಟು 644 ಉಗ್ರರು ಶರಣಾಗಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ಔಪಚಾರಿಕವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಯುಎಲ್​ಎಫ್​ಎ(ಐ), ಎನ್​ಡಿಎಫ್​ಬಿ, ಆರ್​ಎನ್​ಎಲ್​ಎಫ್​, ಕೆಎಲ್​ಒ, ಸಿಪಿಐ(ಮಾವೋವಾದಿ), ಎನ್​ಎಸ್​ಎಲ್​ಎ, ಎಡಿಎಫ್​ ಮತ್ತು ಎನ್​ಎಲ್​ಎಫ್​ಬಿ ಸಂಘಟನೆಗಳ ಉಗ್ರರು ಇಂದು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್​ ಸಮ್ಮುಖದಲ್ಲಿ ಶರಣಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಿಎಂ, ಆಸ್ಸಾಂನ ಅಭಿವೃದ್ಧಿಗಾಗಿ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವ ಈ ಉಗ್ರಸಂಘಟನೆಗಳ ಸದಸ್ಯರ ಬಗ್ಗೆ ಇಲ್ಲಿನ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ. ಇವರಂತೆಯೇ ಉಳಿದ ಉಗ್ರ, ಮಾವೋವಾದಿ ಸಂಘಟನೆಗಳೂ ಹೆಚ್ಚೆಚ್ಚು ಹೊರಬರಬೇಕು. ಶರಣಾಗುವ ಮೂಲಕ ಮುಖ್ಯವಾಹಿನಿಗೆ ಬಂದು ಈ ದೇಶವನ್ನು ಬಲಿಷ್ಠಗೊಳಿಸಬೇಕು ಎಂದು ಹೇಳಿದರು.

    ಶರಣಾಗಿರುವ ಉಗ್ರರ ಪುನವರ್ಸತಿ, ಜೀವನಕ್ಕಾಗಿ ಸರ್ಕಾರ ಸಂವಿಧಾನ ಬದ್ಧವಾಗಿ ಕ್ರಮ ಕೈಗೊಳ್ಳಲಿದೆ. ಇವರೆಲ್ಲ ಸರ್ಕಾರದ ಯೋಜನೆಗಳ ಲಾಭವನ್ನು ಇನ್ನು ಮುಂದೆ ಪಡೆಯಬಹುದು ಎಂದರು.
    ಶರಣಾದ 644 ಮಂದಿ ಉಗ್ರರಲ್ಲಿ ಅತಿಹೆಚ್ಚು ಅಂದರೆ 301 ಉಗ್ರರು ಎನ್​ಎಲ್​ಎಫ್​ಬಿ (ನ್ಯಾಷನಲ್​ ಲಿಬರೇಶನ್​ ಫ್ರಂಟ್​ ಆಫ್​ ಬೆಂಗಾಲ್​) ಗೆ ಸೇರಿದವರು ಎನ್ನಲಾಗಿದೆ. (ಪಿಟಿಐ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts