ಅರಟಾಳದಲ್ಲಿ ಶಿವಾಜಿ ಜಯಂತಿ

ಅರಟಾಳ: ಬಾಲ್ಯದಿಂದಲೇ ರಾಮಾಯಣ, ಮಹಾಭಾರತವನ್ನು ತಾಯಿ ಜೀಜಾಬಾಯಿಯಿಂದ ತಿಳಿದ ಶಿವಾಜಿ ಮಹಾರಾಜರು ತನ್ನ 15 ನೇ ವರ್ಷದಲ್ಲಿ ಅಧಿಪತ್ಯ ಸಾಧಿಸಿದ ಮಹಾನ್ ಶಕ್ತಿ ಎಂದು ಪಿಕೆಪಿಎಸ್ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದ್ದಾರೆ.

ಗ್ರಾಪಂ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಪಂ ಕಾರ್ಯಾಲಯದಲ್ಲಿ ತಾಪಂ ಸದಸ್ಯ ಶಿವಪ್ಪ ಹಟ್ಟಿ ಮತ್ತು ಮನೋಹರ ಸಾಳುಂಕೆ ಭಾವಚಿತ್ರದ ಪೂಜೆ ನೆರವೇರಿಸಿದರು. ಪಿಡಿಒ ಎ.ಜಿ. ಎಡಕೆ, ಎಂ.ಪಿ.ಪಾಟೀಲ, ರಮೇಶ ಜಾಧವ, ದತ್ತಾತ್ರೇಯ ನಿಂಬಳಕರ, ಮಾಳಪ್ಪ ಕಾಂಬಳೆ, ಲಕ್ಷ್ಮಣ ರೇಡೆಕರ್, ಅರುಣ ನಿಂಬಳಕರ, ಕಾಸಪ್ಪ ಮಾದರ, ಮಹಾದೇವ ಮಾದರ ಇದ್ದರು.