ಸಂಬರಗಿ: ಪಾಂಡೇಗಾಂವದಲ್ಲಿ ಶಿವಾಜಿ ಜಯಂತಿ

ಸಂಬರಗಿ: ಶಿವಾಜಿ ಮಹಾರಾಜರ ಆಚಾರ-ವಿಚಾರಗಳ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೆಂಪವಾಡ ಸಕ್ಕರೆ ಕಾರ್ಖಾನೆ ಕಾರ್ಯಕಾರಿ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದ್ದಾರೆ. ಸಮೀಪದ ಪಾಂಡೇಗಾಂವ ಗ್ರಾಮದಲ್ಲಿ ಶಿವಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಶಿವಾಜಿ ಮಹಾರಾಜರು ಯಾವ ಜಾತಿಗೂ ಸೀಮಿತವಲ್ಲ. ಬದಲಾಗಿ ಇಡೀ ಮಾನವ ಜಾತಿಗೆ ಮಾದರಿಯಾಗಿದ್ದಾರೆ ಎಂದರು.

ಶಿರೂರ ಗ್ರಾಮದ ಕೊಂಡಿಬಾ ಮಹಾರಾಜರು ಆಶೀರ್ವಚನ ನೀಡಿದರು. ಕಾಂಗ್ರೆಸ್ ಮುಖಂಡ ಆರ್.ಎಂ.ಪಾಟೀಲ, ಮಹಾದೇವ ಕೋರೆ, ಈಶ್ವರ ಕುಂಬಾರೆ, ಅಶೋಕ ಗಡದೆ, ಮಹಾದೇವ ಪಾಟೀಲ, ಅಮೂಲ ಪಾಟೀಲ, ಚಿದಾನಂದ ಕಾಗಲೆ, ಸಚಿನ ಸೋಲನಕರ, ಜಗನ್ನಾಥ ಚೌಗಲೆ, ಸಖಾರಾಮ ಪಾಟೀಲ ಇದ್ದರು. ಜಗನ್ನಾಥ ಚೌಗಲೆ ಸ್ವಾಗತಿಸಿದರು. ಮಹಾದೇವ ಪಾಟೀಲ ನಿರೂಪಿಸಿ, ವಂದಿಸಿದರು.