ರಾಮದುರ್ಗ: ಅಥಣಿಯ ಕೆ.ಎ.ಲೋಕಾಪುರ ಮಹಾವಿದ್ಯಾಲಯ ಈಚೆಗೆ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕ ವಲಯ ಪುರುಷ ಹಾಗೂ ಮಹಿಳೆಯರ ಚೆಸ್ ಪಂದ್ಯಾವಳಿಯಲ್ಲಿ ಪಟ್ಟಣದ ಸಿ.ಎಸ್.ಬೆಂಬಳಗಿ ಕಲಾ, ಶಾ.ಎಂ.ಆರ್.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಮಲ್ಲಮ್ಮ ಕೊನೇರಿ, ಭೀಮಮ್ಮ ಕೊನೇರಿ ಹಾಗೂ ಪುರುಷರ ವಿಭಾಗದಲ್ಲಿ ಅ್ರೋಜ ಮಕಾನದಾರ, ಶ್ರೇಯಸ್ ಕಂಬಾರ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ.ದಾಮೋದರ, ಉಪಾಧ್ಯಕ್ಷ ಎಸ್.ಎಸ್.ಮುದೇನೂರ, ಗೌರವ ಕಾರ್ಯದರ್ಶಿ ಎಸ್.ಎಸ್.ಸುಲ್ತಾನಪುರ, ಕಾಲೇಜು ಆಡಳಿತ ಮಂಡಳಿ ಕಾರ್ಯಧ್ಯಕ್ಷ ಎಸ್.ಬಿ.ಕಲಹಾಳ, ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಬಿ.ಬಿ.ಕಬಾಡಗಿ, ಆಡಳಿತ ಮಂಡಳಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.