ಪಾಕ್​ ಪ್ರಧಾನಿಯಾಗಿ ಇಮ್ರಾನ್ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್

ಇಸ್ಲಾಮಾಬಾದ್​: ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್​ ಯಾವಾಗ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಸಾಕಷ್ಟು ಊಹಾಪೋಹಗಳ ನಡುವೆ ಪಿಟಿಐ(ಪಾಕಿಸ್ತಾನ್​ ತೆಹ್ರಿಕ್​ ಎ ಇನ್​ಸಾಫ್​) ಸಂಸದ ಫೈಸಲ್​ ಜಾವೆದ್​ ಪ್ರಮಾಣ ವಚನದ ದಿನಾಂಕ ಘೋಷಿಸಿದ್ದಾರೆ.

ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ನಾಲ್ಕು ದಿನಗಳ ನಂತರ ಅಂದರೆ ಆಗಸ್ಟ್​ 18ರಂದು ಇಮ್ರಾನ್​ ಖಾನ್​ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೂ (ಆ.14) ಮುಂಚೆ ಇಮ್ರಾನ್​ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು. ಆದರೆ ಪಾಕಿಸ್ತಾನ ಮಾಧ್ಯಮಗಳು ಕೂಡ ಇಮ್ರಾನ್​ ಪ್ರಮಾಣ ವಚನ ಸ್ವೀಕರಿಸುವ ದಿನಾಂಕದ ಬಗ್ಗೆ ಮಾಹಿತಿ ಬಿತ್ತರಿಸಿವೆ. ಆ.18ರಂದೇ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತ ಎಂದು ಶುಕ್ರವಾರ ಹೇಳಿದೆ.

ಪ್ರಮಾಣ ವಚನ ಸ್ವೀಕರಿಸುವ ದಿನ ಪಾಕ್​ ನೂತನ ಪ್ರಧಾನಿಗೆ ಪ್ರಮಾಣ ವಚನ ಬೋಧಿಸಲು ಅಧ್ಯಕ್ಷರ ಉಪಸ್ಥಿತಿ ಅಗತ್ಯ. ಹಾಗಾಗಿ ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್​ ಹುಸೇನ್​ ತಮ್ಮ ವಿದೇಶ ಪ್ರವಾಸವನ್ನು ಮುಂದೂಡಿದ್ದಾರೆ ಎಂದು ಸ್ಥಳೀಯ ಜಿಯೊ ಟಿವಿ ವರದಿ ಮಾಡಿದೆ. (ಏಜೆನ್ಸೀಸ್​)

ಇದನ್ನೂ ಓದಿ:

ಪಾಕ್​ ಪ್ರಧಾನಿ ಗದ್ದುಗೆಗೆ ಇಮ್ರಾನ್​ ಖಾನ್​ ಗೂಗ್ಲಿ