ಪಾಕ್ ಪ್ರಧಾನಿಯಾಗಿ ಇಮ್ರಾನ್ 18ರಂದು ಪ್ರಮಾಣವಚನ

ಇಸ್ಲಾಮಾಬಾದ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್, ಆ. 18ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಖಾನ್ ಪ್ರಮಾಣವಚನ ಸಮಾರಂಭ 18ಕ್ಕೆ ನಡೆಯಲಿದೆ ಎಂದು ಪಿಟಿಐ ಸಂಸದ ಫೈಸಲ್ ಜಾವೇದ್ ಶುಕ್ರವಾರ ಟ್ವೀಟ್ ಮಾಡಿ ಖಾತ್ರಿಪಡಿಸಿದ್ದಾರೆ. ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ಮೊದಲ ಸಂಸತ್ ಅಧಿವೇಶನ 13ರಂದು ನಡೆಯಲಿದೆ. ಹೊಸ ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ.

ಭಾರತ ರಾಯಭಾರಿ ಭೇಟಿ: ಪಾಕಿಸ್ತಾನಕ್ಕೆ ಭಾರತದ ರಾಯಭಾರಿಯಾಗಿರುವ ಅಜಯ್ ಬಿಸಾರಿಯಾ ಶುಕ್ರವಾರ ಇಮ್ರಾನ್ ಖಾನ್​ರನ್ನು ಭೇಟಿ ಮಾಡಿದ್ದಾರೆ. ಅವರನ್ನು ಅಭಿನಂದಿಸಿ ಬ್ಯಾಟನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಎಲ್ಲ ಆಟಗಾರರು ಬ್ಯಾಟ್ ಮೇಲೆ ಸಹಿ ಮಾಡಿ ಶುಭಾಶಯ ಕೋರಿದ್ದಾರೆ.