ಇಮ್ರಾನ್​ಗೆ 2018 ಪಾಕ್ ಎಲೆಕ್ಷನ್ ಕಪ್

Latest News

ಪ್ರತಿ ಎಕರೆ ಭೂಮಿಗೆ ರೂ.5ಲಕ್ಷ ಪರಿಹಾರ

ಜಾವಗಲ್: ಬಯಲು ಸೀಮೆ ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಭೂಮಿ ನೀಡುವ ಭಾಗದ ರೈತರಿಗೆ ಪ್ರತಿ ಎಕರೆಗೆ 5...

ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಕೂಟ, ಮತದಾರರ ಬಗೆಯುವ ನಂಬಿಕೆ ದ್ರೋಹ: ಸುಪ್ರೀಂಗೆ ಅರ್ಜಿ

ನವದೆಹಲಿ: ಮಹಾರಾಷ್ಟ್ರದಲ್ಲಿ ಅವಕಾಶವಾದಿ ರಾಜಕಾರಣ ನಡೆಯುತ್ತಿದೆ. ಅಧಿಕಾರದಾಹದ ಹಿನ್ನೆಲೆಯಲ್ಲಿ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಅನೈತಿಕ ಮೈತ್ರಿ ಮಾಡಿಕೊಳ್ಳುತ್ತಿವೆ. ಇದು ಮತದಾರರಿಗೆ ಬಗೆಯುತ್ತಿರುವ...

ಉಪಚುನಾವಣೆಯಲ್ಲಿ ಜಾ.ದಳ, ಬಿಜೆಪಿಗೆ ಗೆಲುವು

ಸಕಲೇಶಪುರ: ತಾಲೂಕಿನ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಮಲಾ 73...

ಸ್ವಸ್ಥ ಸಮಾಜಕ್ಕೆ ರೆಡ್‌ಕ್ರಾಸ್‌ನಿಂದ ಕೊಡುಗೆ

ಹಾಸನ: ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ ವಿಷಯಗಳಲ್ಲಿ ಫೇಲ್​ ಆದರೂ ವಿಮಾನ ಮಾದರಿಗಳನ್ನು ತಯಾರಿಸಿದ ಹುಡುಗ!

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​...

ಇಸ್ಲಾಮಾಬಾದ್: ಮಾಜಿ ಪ್ರಧಾನಿ ನವಾಜ್ ಷರೀಫ್ ಬಂಧನ, ಚುನಾವಣೆ ದಿನ ಉಗ್ರ ದಾಳಿಯಂಥ ಬೆಳವಣಿಗೆಯಿಂದ ಕುತೂಹಲ ಕೆರಳಿಸಿದ್ದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಶೇಕಡ 49 ಮತಗಟ್ಟೆಗಳ ಮತ ಎಣಿಕೆ ಮುಗಿದಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಕಳೆದೊಂದು ದಶಕದಿಂದ ತೀವ್ರ ಕಸರತ್ತು ನಡೆಸಿದ್ದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಏ ಇನ್​ಸಾಫ್(ಪಿಟಿಐ)ಅತಿದೊಡ್ಡ ಪಕ್ಷವಾಗುವತ್ತ ಮುನ್ನುಗ್ಗುತ್ತಿದೆ. ನವಾಜ್ ಷರೀಫ್ ನೇತೃತ್ವದ ಪಿಎಐಎಲ್-ಎನ್, ಪಿಪಿಪಿಯನ್ನು ಹಿಂದಿಕ್ಕಿ ಪಿಟಿಐ ಸೆಂಚುರಿಯತ್ತ ಮುನ್ನುಗ್ಗಿದೆ. ಈಗಾಗಲೇ 98 ಸ್ಥಾನಗಳನ್ನು ಗೆದ್ದುಕೊಂಡಿರುವ ಪಿಟಿಐ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತಕ್ಕೆ 17 ಸ್ಥಾನಗಳ ಕೊರತೆ ಇದ್ದರೂ ಇಮ್ರಾನ್ ಪ್ರಧಾನಿ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿದೆ.

ಸರ್ಕಾರ ರಚನೆ ಲೆಕ್ಕಾಚಾರ

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಒಟ್ಟು 342 ಸ್ಥಾನಗಳಿದ್ದು, 272 ಸ್ಥಾನಗಳಿಗೆ ಜನರಿಂದಲೇ ನೇರ ಆಯ್ಕೆ ನಡೆಯುತ್ತದೆ. ಉಳಿದ 60 ಸ್ಥಾನಗಳು ಮಹಿಳೆಯರು ಮತ್ತು 10 ಧಾರ್ವಿುಕ ಅಲ್ಪಸಂಖ್ಯಾತರಿಗೆ ಮೀಸಲು. ಇವುಗಳನ್ನು ಪಕ್ಷಗಳ ಸ್ಥಾನ ಆಧರಿಸಿ ಹಂಚಿಕೆ ಮಾಡಲಾಗುತ್ತದೆ. ನಾಮ ನಿರ್ದೇಶಿತ ಸ್ಥಾನಗಳು ಸೇರಿ 172 ಸಂಖ್ಯಾ ಬಲ ಇದ್ದರೆ ಸರ್ಕಾರ ರಚಿಸಬಹುದು. 272ರ ಪೈಕಿ ಬಹುಮತಕ್ಕೆ 137 ಸ್ಥಾನಗಳಲ್ಲಿ ಗೆಲುವು ದಾಖಲಿಸಬೇಕು.

ಉಗ್ರರಿಗೆ ಮುಖಭಂಗ

ಮುಂಬೈ (26/11) ದಾಳಿ ಸಂಚುಕೋರ ಉಗ್ರ ಹಫೀಜ್ ಸಯೀದ್ ಬೆಂಬಲಿತ ಅಲ್ಲಾಹ್ ಓ ಅಕ್ಬರ್ ತೆಹ್ರೀಕ್ ಸೇರಿ ನಿಷೇಧಿತ ಉಗ್ರ ಸಂಘಟನೆಗಳು ಈ ಸಲದ ಚುನಾವಣೆ ಯಲ್ಲಿ ಮುಖಭಂಗ ಅನುಭವಿಸಿವೆ.

ಭಾರತದೊಂದಿಗೆ ಹೆಜ್ಜೆ ಹಾಕುವೆ

ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುವೆ. ಬಡತನವನ್ನು ನಿಮೂಲಗೊಳಿಸಬೇಕು ಎನ್ನುವುದಾದರೆ ಭಾರತದೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಸಿಕೊಳ್ಳಬೇಕು. ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಒಂದು ಹೆಜ್ಜೆ ಇಟ್ಟರೆ, ನಾವು ಎರಡು ಹೆಜ್ಜೆ ಮುಂದಿಡುತ್ತೇವೆ.

| ಇಮ್ರಾನ್ ಖಾನ್ ಪಿಟಿಐ ಮುಖ್ಯಸ್ಥ


ಕಾಶ್ಮೀರ ಬಿಕ್ಕಟ್ಟು ಪರಿಹಾರಕ್ಕೆ ಮಾತುಕತೆಯೇ ಸೂಕ್ತ

ಹಲವು ನಾಟಕೀಯ ಬೆಳವಣಿಗೆ ಕಂಡ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಬುಧವಾರ ರಾತ್ರಿ ಆರಂಭವಾಗಿದ್ದು, ಗುರುವಾರ ರಾತ್ರಿ 10 ಗಂಟೆ ವೇಳೆಗೆ ಶೇಕಡ 49 ಪ್ರಗತಿಯನ್ನಷ್ಟೇ ಸಾಧಿಸಿತ್ತು. ಇದರಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಮುನ್ನಡೆ ಕಂಡಿದ್ದು, ಆಡಳಿತ ಚುಕ್ಕಾಣಿ ಇಮ್ರಾನ್ ಕೈ ಸೇರುವ ಸಾಧ್ಯತೆ ನಿಚ್ಚಳವಾಗಿದೆ. ಹೀಗಾಗಿ ಅವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ‘ನವ ಪಾಕಿಸ್ತಾನ ’ ನಿರ್ವಣದ ಕನಸನ್ನು ಜನರ ಎದುರು ತೆರೆದಿಟ್ಟರು.

ಮತ ಎಣಿಕೆ ವಿಳಂಬಕ್ಕೆ ಆಕ್ಷೇಪ

ಬುಧವಾರ ಮತದಾನ ನಡೆದು, ರಾತ್ರಿಯೇ ಎಣಿಕೆ ಆರಂಭಿಸಿದರೂ ಗುರುವಾರ ಮತ ಎಣಿಕೆ ವಿಳಂಬವಾಗುತ್ತಿರುವ ಬಗ್ಗೆ ಪಿಎಂಎನ್​ಎಲ್ ಸೇರಿ ಹಲವು ಪಕ್ಷಗಳಿಂದ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ. ಪಿಟಿಐಗೆ ಸೇನೆಯ ಬೆಂಬಲ ಇರುವ ಕಾರಣ ಮತ ಎಣಿಕೆಯಲ್ಲೂ ಅಕ್ರಮ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಮತ ಚಲಾಯಿಸಿದ ಮಹಿಳೆಯರು

ಪಾಕಿಸ್ತಾನದ ಚುನಾವಣಾ ಇತಿಹಾಸದಲ್ಲೇ ಮೊದಲ ಸಲ ಕೈಬರ್ ಪಖ್ತುನ್​ಖ್ವಾ ಮತ್ತು ಪಂಜಾಬ್ ಪ್ರಾಂತ್ಯದ ಕೆಲವು ಸಂಪ್ರದಾಯವಾದಿ ಪ್ರದೇಶಗಳಲ್ಲಿ ಮಹಿಳೆಯರು ಸಾರ್ವತ್ರಿಕ ಚುನಾವಣೆಯಲ್ಲಿ ಮತಚಲಾವಣೆ ಮಾಡಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗೆ ಸಿಕ್ಕ ಮತ ಮಾನ್ಯವಾಗಬೇಕಾದರೆ ಕನಿಷ್ಠ ಶೇಕಡ 10 ಮಹಿಳೆಯರ ಮತ ಬಿದ್ದಿರಬೇಕು ಎಂಬ ನಿಯಮವೇ ಈ ಬದಲಾವಣೆಗೆ ಕಾರಣ. ಕಟ್ಟುನಿಟ್ಟಿನ ಬಲೂಚಿಸ್ತಾನದಲ್ಲೂ ಉಗ್ರ ದಾಳಿ ಹೊರತಾಗಿಯೂ ಮಹಿಳೆಯರು ಭಾರಿ ಪ್ರಮಾಣದಲ್ಲಿ ಮತಚಲಾಯಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಕ್ರಿಕೆಟ್​ನಿಂದ ರಾಜಕೀಯಕ್ಕೆ

 • ಇಮ್ರಾನ್ ಅಹ್ಮದ್ ಖಾನ್ ನಿಯಾಝಿ
 • ಜನನ- 05.10.1952
 • ಹುಟ್ಟೂರು – ಲಾಹೋರ್
 • ತಂದೆ – ಇಕ್ರಮುಲ್ಲಾ ಖಾನ್ ನಿಯಾಝಿ
 • ತಾಯಿ – ಶೌಕತ್ ಖನ್ನುಮ್
 • ವೃತ್ತಿ – ಮಾಜಿ ಕ್ರಿಕೆಟಿಗ, ರಾಜಕಾರಣಿ, ಸಮಾಜಸೇವಕ
 • ಶಿಕ್ಷಣ – ಲಾಹೋರ್​ನ ಐಚಿಸನ್ ಕಾಲೇಜ್, ಇಂಗ್ಲೆಂಡ್​ನ ರಾಯಲ್ ಗ್ರಾಮರ್ ಸ್ಕೂಲ್ ವರ್ಸ್​ಸ್ಟರ್, ಆಕ್ಸ್​ಫರ್ಡ್​ನ ಕೆಬ್ಲ್ ಕಾಲೇಜ್

 

ಕ್ರಿಕೆಟ್ ವೃತ್ತಿ ಜೀವನ:

 • 1971ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ
 • 1974ರಲ್ಲಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ
 • 1992ರ ವಿಶ್ವಕಪ್ ಗೆದ್ದ ಪಾಕಿಸ್ತಾನ ತಂಡದ ಕ್ಯಾಪ್ಟನ್
 • 2010ರಲ್ಲಿ ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ೆ ಸೇರ್ಪಡೆ

 

ರಾಜಕೀಯ ಬದುಕು

 • 1996 ಪಾಕಿಸ್ತಾನ್ ತೆಹ್ರೀಕ್ ಏ ಇನ್​ಸಾಫ್ (ಪಿಟಿಐ) ಸ್ಥಾಪನೆ
 • 1997 ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿ ಕ್ಷೇತ್ರಕ್ಕೆ ಸ್ಪರ್ಧಿಸಿ ಸೋಲು
 • 1999 ಮುಷರಫ್ ಅವರ ಸೇನಾ ಕ್ರಾಂತಿಗೆ ಬೆಂಬಲ
 • 2002-07 ಪಾಕ್ ಸಂಸತ್​ನಲ್ಲಿ ಮಿಯಾನ್ವಾಲಿ ಕ್ಷೇತ್ರ ಪ್ರತಿನಿಧಿಸಿದ ವಿಪಕ್ಷ ಸದಸ್ಯ
 • 2013 – ಸಂಸತ್​ಗೆ ಮರು ಆಯ್ಕೆ
 • 2018 – ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐಗೆ ಮುನ್ನಡೆ

 

ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತದ ಸನಿಹ ಬಂದಿರುವ ಪಾಕಿಸ್ತಾನ್ ತೆಹ್ರೀಕ್ ಏ ಇನ್​ಸಾಫ್(ಪಿಟಿಐ)ನ ಮುಖ್ಯಸ್ಥ ಇಮ್ರಾನ್ ಖಾನ್ ಗುರುವಾರ ಸುದ್ದಿಗೋಷ್ಠಿ ನಡೆಸಿ ಭಾರತ ಮತ್ತು ಪಾಕಿಸ್ತಾನಗಳ ಸಂಬಂಧ ಸುಧಾರಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ಅವರ ಮಾತಿನ ಸಾರ ಇಷ್ಟು-

 • ಉಭಯ ದೇಶಗಳು ಪರಸ್ಪರ ದೋಷಾರೋಪ ಮಾಡುವುದು ಬಿಟ್ಟು ಮಾತುಕತೆಗೆ ಮುಂದಾಗಬೇಕು.
 • ಕ್ರಿಕೆಟ್ ವೃತ್ತಿಜೀವನದ ದಿನಗಳಿಂದಲೂ ಭಾರತದ ಜನರಿಗೆ ನನ್ನ ಬಗ್ಗೆ ಗೊತ್ತೇ ಇದೆ. ಆಗ್ನೇಯ ಏಷ್ಯಾದ ಬಡತನ ಬಿಕ್ಕಟ್ಟನ್ನು ಕೂಡ ನಾವು ಪರಿಹರಿಸಬಹುದು. ಈ ವಲಯದಲ್ಲಿ ಕಾಶ್ಮೀರದ ವಿಚಾರವೇ ಬಹುದೊಡ್ಡ ಸಮಸ್ಯೆ.
 • ಎರಡೂ ದೇಶಗಳ ನಡುವೆ ಕಾಶ್ಮೀರ ‘ಪ್ರಮುಖ’ ವಿಚಾರವಾಗಿದ್ದು, ದ್ವಿಪಕ್ಷೀಯ ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಬಹುದು.
 • ಭಾರತದ ಜತೆಗಿನ ಬಾಂಧವ್ಯ ಸುಧಾರಿಸಬೇಕೆಂಬುದು ನಮ್ಮ ಇಚ್ಛೆ. ಕಾಶ್ಮೀರದ ವಿಚಾರದಲ್ಲಿ ಪರಸ್ಪರ ದೋಷಾರೋಪ ಮಾಡುವುದರ ವ್ಯತಿರಿಕ್ತ ಪರಿಣಾಮ ಪಾಕಿಸ್ತಾನದ ಬಲೂಚಿಸ್ತಾನದಲ್ಲಾಗುತ್ತಿದೆ. ಅದಕ್ಕೆ ಕಾರಣ ಭಾರತ. ಹೀಗಾಗಿ ನಾವು ಮತ್ತೆ ಒಂದೇ ವೇದಿಕೆಗೆ ಬಂದಿದ್ದೇವೆ.
 • ಈ ಬೆಳವಣಿಗೆ ನಮ್ಮ ಈ ಉಪಖಂಡಕ್ಕೆ ಕೇಡನ್ನು ಉಂಟುಮಾಡುವುದೇ ಹೊರತು ಒಳಿತನ್ನಲ್ಲ. ನಾವು ಬೆಳೆಯಬೇಕಾದ್ದು ಈ ರೀತಿಯಲ್ಲಲ್ಲ.

 

ಇಮ್ರಾನ್ ಚುನಾವಣಾ ಭರವಸೆ

 • ಸಾಮಾನ್ಯ ಜನರಿಗೆ ಅನುಕೂಲವಾಗುವ ನೀತಿಗಳು
 • ತೆರಿಗೆ ಆದಾಯ ರಕ್ಷಣೆ
 • ಸರ್ಕಾರಿ ವೆಚ್ಚ ಕಡಿತ
 • ಸರ್ಕಾರಿ ಸಂಸ್ಥೆಗಳ ಬಲವರ್ಧನೆ
 • ಎಲ್ಲೆಡೆ ಬದ್ಧತೆ ಖಾತ್ರಿಗೊಳಿಸುವುದು
 • ಯುವ ಜನರ ಉದ್ಯೋಗ ಹೆಚ್ಚಿಸುವುದು
 • ಕೃಷಿಕರು, ವಾಣಿಜ್ಯೋದ್ಯಮಿಗಳಿಗೆ ನೆರವು
 • ಅಭಿವೃದ್ಧಿಗಾಗಿ ಹಣ ವ್ಯಯಿಸುವುದು
 • ಚೀನಾ, ಆಫ್ಘನ್, ಇರಾನ್, ಅಮೆರಿಕ, ಭಾರತದ ಜತೆಗಿನ ಬಾಂಧವ್ಯ ವೃದ್ಧಿ

 

‘ಮಗನ ತಂದೆ ಪಾಕ್​ನ ಮುಂದಿನ ಪ್ರಧಾನಿ’

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್(65) ಪಕ್ಷ ಮುನ್ನಡೆ ಸಾಧಿಸಿದ ಬೆನ್ನಲ್ಲೇ, ಅಧಿಕೃತ ಫಲಿತಾಂಶ ಪ್ರಕಟಿಸುವ ಮೊದಲೇ ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್(44) ಅಭಿನಂದನೆ ಸಲ್ಲಿಸಿದ್ದಾರೆ. ಸರಣಿ ಟ್ವೀಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿರುವ ಜೆಮಿಮಾ, 1997ರ ಚುನಾವಣೆ ಸಂದರ್ಭದಲ್ಲಿ ಇಮ್ರಾನ್ ಹೇಳಿದ ಮಾತುಗಳನ್ನು ನೆನಪಿಸಿಕೊಂಡು, ‘22 ವರ್ಷದ ಬಳಿಕ ಸಾಕಷ್ಟು ಅವಮಾನ, ಅಡ್ಡಿ ಆತಂಕಗಳನ್ನು ಎದುರಿಸಿ ನನ್ನ ಮಗನ ತಂದೆ ಪಾಕಿಸ್ತಾನದ ಮುಂದಿನ ಪ್ರಧಾನಮಂತ್ರಿಯಾಗುತ್ತಿದ್ದಾರೆ. ಸೋಲನ್ನು ಸ್ವೀಕರಿಸದಿರುವ ಮತ್ತು ನಂಬಿಕೆಯೊಂದಿಗೆ ಮುಂದಡಿ ಇರಿಸುವ ನಿಟ್ಟಿನಲ್ಲಿ ಇದೊಂದು ಪಾಠ. ಅಭಿನಂದನೆಗಳು’ ಎಂಬ ಸಂದೇಶ ಹಂಚಿಕೊಂಡಿದ್ದಾರೆ.

ಉಗ್ರ ಗುಂಪುಗಳಿಗೆ ಸೋಲು

ಮುಂಬೈ (26/11) ದಾಳಿ ಸಂಚುಕೋರ ಉಗ್ರ ಹಫೀಜ್ ಸಯೀದ್ ಬೆಂಬಲಿತ ಅಲ್ಲಾಹ್ ಓ ಅಕ್ಬರ್ ತೆಹ್ರೀಕ್ ಸೇರಿ ನಿಷೇಧಿತ ಉಗ್ರ ಸಂಘಟನೆಗಳು ಈ ಸಲದ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿವೆ. ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಅನೇಕರು ಚುನಾವಣೆಯಲ್ಲಿ ಸ್ಪರ್ಧಿಸಿ, ಭಾರಿ ಪ್ರಚಾರವನ್ನೇ ಮಾಡಿದ್ದರು. ಆದರೆ ಫಲಿತಾಂಶ ಮಾತ್ರ ಶೂನ್ಯ. ಉಗ್ರ ಪಟ್ಟಿಯಲ್ಲಿರುವ ಹಫೀಜ್ ಸಯೀದ್ ಪುತ್ರ ಹಫೀಜ್ ತಲ್ಹಾ ಸಯೀದ್ ಸಂಸತ್ತಿಗೆ ಸರ್​ಗೋಧಾದಿಂದ ಸ್ಪರ್ಧಿಸಿದರೆ, ಅಳಿಯ ಖಾಲಿದ್ ವಲೀದ್ ಪ್ರಾಂತ್ಯ ಸಭೆಗೆ ಸ್ಪರ್ಧಿಸಿದ್ದ. ಮತ್ತೋರ್ವ ಉಗ್ರ ಮೌಲಾನಾ ಮುಹಮ್ಮದ್ ಅಹ್ಮದ್ ಲುಧಿಯಾನ್ವಿ ಸೋಲು ಅನುಭವಿಸಿದ್ದಾನೆ. ಅದೇ ರೀತಿ, ತೆಹ್ರೀಕ್ ಏ ಲಬೈಕ್ ಪಾಕಿಸ್ತಾನ್(ಟಿಎಲ್​ಪಿ) 100ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಯಾರೂ ಗೆಲುವು ಕಾಣುವ ನಿರೀಕ್ಷೆ ಇಲ್ಲ. ಮುತಾಹಿದ ಮಜ್ಲಿಸ್ ಏ ಅಮ್್ಲ(ಎಂಎಂಎ) ಹಲವು ಪಕ್ಷಗಳ ಒಕ್ಕೂಟವಾಗಿದ್ದು, ಕೇವಲ 8 ಸಂಸತ್ ಕ್ಷೇತ್ರದಲ್ಲಿ ಮುನ್ನಡೆ ಕಂಡಿದೆ.

ಸೋತ ಪ್ರಮುಖರು

 • ಶಾಹಿದ್ ಕಾಖನ್ ಅಬ್ಬಾಸಿ-ಮಾಜಿ ಪ್ರಧಾನಿ (ಕರಾಚಿ, ಸ್ವಾತ್- ಎರಡು ಕ್ಷೇತ್ರಗಲಲ್ಲಿ ಸೋಲು- ಲಾಹೋರ್​ನಲ್ಲಿ ಮುನ್ನಡೆ)
 • ಪಿಎಂಎನ್​ಎಲ್​ನ ಅಧ್ಯಕ್ಷ, ನವಾಜ್ ಷರೀಫ್ ಸೋದರ ಶಾಬಾಜ್ ಷರೀಫ್
 • ಜಮಾತ್ ಈ ಇಸ್ಲಾಮಿ ಮುಖ್ಯಸ್ಥ ಸಿರಾಜುಲ್ ಹಖ್
- Advertisement -

Stay connected

278,463FansLike
562FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...