ಪಾಕ್​ನ್ನು ಏಷ್ಯಾ ಹುಲಿಯನ್ನಾಗಿ ಮಾಡುವ ಸಾಮರ್ಥ್ಯ ಇಮ್ರಾನ್​​ಗಿದೆ: ಶೋಯೆಬ್ ಅಖ್ತರ್

ಕರಾಚಿ: ಇಮ್ರಾನ್​ ಖಾನ್​ ಪಾಕಿಸ್ತಾನವನ್ನು ಏಷಿಯಾದ ಹುಲಿಯನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಪಾಕ್​ ವೇಗಿ ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನವನ್ನು ಏಷಿಯನ್​ ಟೈಗರ್​ ಆಗಿಸಲು ಇಮ್ರಾನ್​ ಖಾನ್​ ನೆರವಾಗಲಿದ್ದಾರೆ. ಆದರೆ, ಇದರಲ್ಲಿ ನಾವು ಯಶಸ್ವಿಯಾಗಬೇಕಿದ್ದರೆ, ರಾಷ್ಟ್ರವೂ ಅವರ ಪರವಾಗಿ ನಿಲ್ಲಬೇಕು ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಪಾಕ್​ ಲೆಜೆಂಡರಿ ಕ್ರಿಕೆಟರ್​ ಇಮ್ರಾನ್​ ಖಾನ್​ ನೇತೃತ್ವದ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಫ್ ಪಕ್ಷವು ಪಾಕ್​ ಸಾರ್ವತ್ರಿಕ ಚುನಾವಣೆಯಲ್ಲಿ 117 ಸ್ಥಾನ ಗಳಿಸುವುದರೊಂದಿಗೆ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಾಕ್​ನ ಸಂಭಾವ್ಯ ಪ್ರಧಾನಿಯಾಗಿರುವ ಇಮ್ರಾನ್​ ಖಾನ್​ಗೆ ಅಭಿನಂದನೆ ಸಲ್ಲಿಸಿರುವ ಅಖ್ತರ್​, ಖಾನ್​ ಜನರಿಗೆ ಉತ್ತಮ ಫಲಿತಾಂಶ ನೀಡಲಿದ್ದಾರೆ ಎಂಬ ಭರವಸೆಯನ್ನು ಹೊಂದಿದ್ದಾರೆ.

ನಾನು ಇಡೀ ರಾಷ್ಟ್ರ ಹಾಗೂ ಪಿಟಿಐ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಇಚ್ಚಿಸುತ್ತೇನೆ. ಇಮ್ರಾನ್​ ಬ್ರದರ್​ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಫಲಿತಾಂಶ ನೀಡಲಿದ್ದಾರೆ ಎಂಬ ನಂಬಿಕೆ ಇಟ್ಟಿದ್ದೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)