ಸುಧಾರಣೆಯೇ ಬದಲಾವಣೆಗಿರುವ ಏಕೈಕ ಮಾರ್ಗ

| ಡಿ.ಮುರಳೀಧರ

ಇದು ‘ದಾವೋಸ್ ಸಮಯ’ ಎನ್ನಲಡ್ಡಿಯಿಲ್ಲ! ಕಾರಣ ಎಲ್ಲ ರಾಷ್ಟ್ರಗಳ ಮುಖ್ಯಸ್ಥರು ಹಾಗೂ ಉದ್ಯಮ ವಲಯದ ಅತಿರಥ-ಮಹಾರಥರು ಜನವರಿ 22ರಿಂದ 25ರವರೆಗೆ ಸ್ವಿಜರ್ಲೆಂಡಿನ ಆಲ್ಪ್್ಸ ಪರ್ವತದ ಮಡಿಲಲ್ಲಿ ನಡೆದ ದಾವೋಸ್ ಶೃಂಗದಲ್ಲಿ ಪಾಲ್ಗೊಂಡಿದ್ದರು. ಜಾಗತಿಕ ಆರ್ಥಿಕ ವ್ಯವಹಾರಗಳ ಕುರಿತಾಗಿ ಚರ್ಚೆಯ ಜತೆಗೆ ಪರಸ್ಪರ ಕಾರ್ಯಾಚರಣೆಗೆ ಸಂಪರ್ಕಜಾಲ ರೂಪಿಸುವಿಕೆಗೂ ಆದ್ಯತೆ ನೀಡಲಾಯಿತು. ವಿವಿಧ ರಾಷ್ಟ್ರಗಳು ಮತ್ತು ವಾಣಿಜ್ಯಕೂಟಗಳು/ಸಂಘಟಿತ ವ್ಯಾಪಾರಸಂಸ್ಥೆಗಳು ತಂತಮ್ಮ ಆರ್ಥಿಕ ಸಾಮರ್ಥ್ಯವನ್ನು ಜಗತ್ತಿನೆದುರು ಬಿಂಬಿಸಿದವು. ಹಾಗಾಗಿ, ಜಾಗತಿಕ ಆರ್ಥಿಕ ಪರಿಸರದ ಕುರಿತಾದ ಒಳನೋಟಗಳನ್ನು ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಇದು ವಿಶ್ಲೇಷಕರಿಗೂ ಪತ್ರಕರ್ತರಿಗೂ ಸೂಕ್ತ ಸಮಯವೂ ಹೌದು. ಭಾರತವು ಒಳ್ಳೆಯ ಕಾರಣಗಳಿಗಾಗಿ ಸುದ್ದಿಯ ಮುಂಚೂಣಿಯಲ್ಲಿದೆ ಎಂಬುದು ಉತ್ಸಾಹಕರ ಬೆಳವಣಿಗೆಯೂ ಹೌದು. ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಭಾರತವನ್ನು 2019 ಮತ್ತು 2020ರ ವರ್ಷಾವಧಿಯ ವಿಶ್ವದ ‘ಠಠಿಚ್ಟ ಟಛ್ಟಿ್ಛ್ಟಛ್ಟಿ’ ಆಗಿ ಆಯ್ಕೆಮಾಡಿವೆ. ಜಾಗತಿಕ ಆರ್ಥಿಕತೆ ಬೆಳವಣಿಗೆ ಶೇಕಡ 3.5ರ ಮಟ್ಟಕ್ಕೆ ತಗ್ಗಬಹುದು ಎಂಬ ನಿರೀಕ್ಷೆಯಿದ್ದರೂ, ಈ ಬಾಬತ್ತಿನಲ್ಲಿ ಶೇ. 7.5ರ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಭಾರತ ತೋರಿದ ಸಮಚಿತ್ತತೆ ಇಡೀ ವಿಶ್ವದಲ್ಲೇ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ.

ಬೆಳವಣಿಗೆಯ ಸಾಧ್ಯತೆ-ಸಾಮರ್ಥ್ಯ ಅಗಾಧವಾಗಿದೆ ಎಂಬುದು ಬೇರೆಯದೇ ಕತೆ; ನನ್ನ ಹಿಂದಿನ ಅಂಕಣಬರಹದಲ್ಲಿ ಈ ವಿಷಯದ ಕುರಿತಾಗಿ ರ್ಚಚಿಸಿರುವೆ. ಬೆಳವಣಿಗೆ ಗತಿಯನ್ನು ಮತ್ತಷ್ಟು ವರ್ಧಿಸುವ ನಿಟ್ಟಿನಲ್ಲಿ ನಿರಂತರ ಸುಧಾರಣೆಯ ಅಗತ್ಯವಿರುವುದನ್ನೂ ಅದರಲ್ಲಿ ಒತ್ತಿ ಹೇಳಿರುವೆ. ಆದರೆ ಮುಂಬರಲಿರುವ ಸಾರ್ವತ್ರಿಕ ಚುನಾವಣೆಗಳು ಮತ್ತು ಅದರ ಸಂಭಾವ್ಯ ಫಲಿತವೇ ಈಗ ಸಮಸ್ಯೆಯಾಗಿಬಿಟ್ಟಿದೆ, ಎಲ್ಲರ ಚರ್ಚೆಯ ವಸ್ತುವಾಗಿಬಿಟ್ಟಿದೆ. ಕೆಲಸಕ್ಕೆ ಬಾರದ ರಾಜಕೀಯ ಮೈತ್ರಿಕೂಟ ಮತ್ತು ಅದರಲ್ಲಿ ಅಂತರ್ಗತವಾಗಿರುವ ವಿರೋಧಾಭಾಸಗಳು, ಅಸಂಬದ್ಧತೆಗಳು ನಾನು ಪ್ರಸ್ತಾಪಿಸಿರುವ ಚರ್ಚಾವಿಷಯದ ಮನೋಧರ್ಮ, ಹುರುಪು ಮತ್ತು ಗತಿಗೆ ತಣ್ಣೀರು ಎರಚಿಬಿಡಬಹುದು. ಮತ್ತೊಂದೆಡೆ, ಹೊಸತೊಂದು ವ್ಯವಸ್ಥೆಯ ಆಡಳಿತ ಕ್ರಮವು, ಈ ನಿಟ್ಟಿನಲ್ಲಿ ಸಮರ್ಥಿಸಿಕೊಂಡು ಸದರಿ ಪ್ರಕ್ರಿಯೆಗೆ ವೇಗತುಂಬಬಹುದು. ಒಟ್ಟಿನಲ್ಲಿ, ಯಾವುದೇ ಆಯಾಮದಲ್ಲಿ ನೋಡಿದರೂ ಮುಂಬರುವ ದಿನಗಳು ಸ್ವಾರಸ್ಯಕರವಾಗಿರುತ್ತವೆ ಎಂಬುದಂತೂ ಖರೆ.

ಈ ಎಲ್ಲ ಸದ್ದುಗದ್ದಲಗಳ ನಡುವೆಯೂ, ಪ್ರಯತ್ನದ ತೀವ್ರತೆಯನ್ನು ತಗ್ಗಿಸದೆಯೇ ದೇಶದ ಆರ್ಥಿಕತೆಗೆ ನೆರವಾಗುವಂಥ ಮತ್ತು ಅದನ್ನು ಸುಧಾರಿಸುವಂಥ ಕಸರತ್ತುಗಳನ್ನು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಮುಂದುವರಿಸಿವೆ. ಬಾಹ್ಯ ವಾಣಿಜ್ಯ ಸಾಲಗಳು (ಉಠಿಛ್ಟಿ್ಞ್ಝ ಇಟಞಞಛ್ಟಿ್ಚಚ್ಝ ಆಟ್ಟ್ಟಡಿಜ್ಞಿಜಠ) ಎಂದೇ ಕರೆಯಲ್ಪಡುವ, ಅಂತಾರಾಷ್ಟ್ರೀಯ ಮೂಲಗಳಿಂದ ದಕ್ಕುವ ವಿದೇಶಿ ಕರೆನ್ಸಿಯ ಸಾಲಗಳ ಎತ್ತುವಳಿಗೆ ಸಂಬಂಧಿಸಿದ ರೂಢಮಾದರಿಗಳು/ನಿಯಮಗಳನ್ನು ಆರ್​ಬಿಐ ಸಡಿಲಿಸಿರುವುದು ಇತ್ತೀಚಿನ ಗಮನಾರ್ಹ ಬೆಳವಣಿಗೆಗಳಲ್ಲೊಂದು ಎನ್ನಬೇಕು. ಇದು ಇತ್ತೀಚಿನ ವರ್ಷಗಳಲ್ಲಿ ತಳೆಯಲಾದ ನಿಲುವುಗಳಲ್ಲಿನ ಒಂದು ಆಮೂಲಾಗ್ರ ಬದಲಾವಣೆ ಎಂದರೆ ತಪ್ಪಾಗಲಾರದು. ಇಂಥ ಸಾಲವನ್ನು ಎತ್ತುವುದರ ಹಿಂದಿರುವ ಉದ್ದೇಶ, ಅನುಸರಿಸಲಾಗುವ ಮಾರ್ಗ ಮತ್ತು ಸಾಲಮೊತ್ತಕ್ಕೆ ಸಂಬಂಧಿಸಿದಂತೆ ಅನೇಕ ನಿರ್ಬಂಧಗಳನ್ನು ಹೇರಲಾಗುತ್ತಿತ್ತು. ಇಂಥ ಅನೇಕ ಕಟ್ಟುನಿಟ್ಟಿನ ಷರತ್ತುಗಳನ್ನು ಆರ್​ಬಿಐ ಹ್ರಾಸಗೊಳಿಸಿರುವುದು ಗಮನಾರ್ಹ. ಈ ಬದಲಾವಣೆಗಳ ನಂತರ, ಕಂಪನಿಯೊಂದು ವಿದೇಶಿ ಕರೆನ್ಸಿಯೊಂದರಲ್ಲಿ ನಿರಂತರವಾಗಿ ಕಾರ್ಯೋಪಯುಕ್ತ ಬಂಡವಾಳವನ್ನು ತಾತ್ತಿ ್ವವಾಗಿ ಹೊಂದಲು ಸಾಧ್ಯವಿದೆ. ಒಂದೇ ಹೊಡೆತದಲ್ಲಿ ಕೈಗೂಡಿರುವ ಈ ಬದಲಾವಣೆ, ಹಂತಹಂತವಾಗಿರುವ ಸಾಲಸೌಲಭ್ಯ ಪಡೆಯುವಲ್ಲಿನ ಜಟಿಲ ಪ್ರಕ್ರಿಯೆಯನ್ನು ಸರಳೀಕರಿಸಿದೆ ಹಾಗೂ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಬಲ್ಲುದಾಗಿದೆ. ಬಾಹ್ಯ ವಾಣಿಜ್ಯ ಸಾಲದ ವಿಷಯದಲ್ಲಿ, ಸೀಮಿತ ಸಾಲಗಾರರಿಗೆ ಮಾತ್ರವೇ ಅವಕಾಶವಿತ್ತು ಹಾಗೂ ಇದು ತೊಡಕಿನ ಮತ್ತು ಅತೀವ ಸಮಯ ವ್ಯಯವಾಗುವ ಕಾರ್ಯವಿಧಾನವಾಗಿತ್ತು. 750 ದಶಲಕ್ಷ ಡಾಲರ್​ವರೆಗಿನ ಇಂಥ ಎಲ್ಲ ಸಾಲಗಳನ್ನು ಸ್ವಯಂಚಾಲಿತ ಮಾರ್ಗವೊಂದರಡಿಯಲ್ಲಿ ಆರ್​ಬಿಐ ತಂದಿದ್ದು, ವಿದೇಶಿ ವಾಣಿಜ್ಯ ಸಾಲಗಳು ಹೊಂದಿರುವ ಕಡಿಮೆ ವೆಚ್ಚದ ಆಯ್ಕೆಯ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಈ ಕ್ರಮ ಮಧ್ಯಮ ಮತ್ತು ಭಾರಿ ಗಾತ್ರದ ಎಲ್ಲ ಸಂಸ್ಥೆಗಳಿಗೆ ನೆರವಾಗಲಿದೆ.

ಜಾಗತಿಕ ಆರ್ಥಿಕ ವ್ಯವಸ್ಥೆ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಹೀಗೆ ಲಭ್ಯವಾಗುವ ಕಡಿಮೆ ವೆಚ್ಚ ಸಾಲಗಳು, ಸುರಕ್ಷಿತ ಮಾರುಕಟ್ಟೆಗಳನ್ನು ಗಮನಾರ್ಹವಾಗಿ ಸುಧಾರಿಸಲಿವೆ ಮತ್ತು ಇದು ಭಾರತೀಯ ಕಂಪನಿಗಳ ಪಾಲಿಗೆ ಒಂದು ವರದಾನವಾಗಲಿದೆ. ಈ ವಿದ್ಯಮಾನದ ಆಳ-ಅಗಲ ಅರ್ಥವಾಗುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆಯಾದರೂ, ಸಾಲಪಡೆಯ ಬಯಸುವ ಬಹುತೇಕರಿಗೆ ಇದು ಪ್ರಯೋಜನ ನೀಡುವುದಂತೂ ದಿಟ. ಅಷ್ಟೇ ಅಲ್ಲ, ಮಧ್ಯಮಗಾತ್ರದ ಭಾರತೀಯ ಕಂಪನಿಗಳನ್ನು ಜಾಗತಿಕ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಹಾಗೂ ಸುಲಲಿತ ವ್ಯವಹಾರ ಪ್ರಕ್ರಿಯೆಗೆ ಅನುವು ಮಾಡಿಕೊಡುವಲ್ಲಿಯೂ ಇದು ಮತ್ತೊಂದು ಹೆಜ್ಜೆಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಮತ್ತೊಂದೆಡೆ, ಆದಾಯ ತೆರಿಗೆ ಇಲಾಖೆಗೆ ಒತ್ತಾಸೆಯಾಗಿರುವ ತಂತ್ರಜ್ಞಾನ-ಸ್ವರೂಪವನ್ನು ಪರಿಷ್ಕರಿಸಿ ಉತ್ತಮಪಡಿಸಲೆಂದು 4,241 ಕೋಟಿ ರೂಪಾಯಿ ವಿನಿಯೋಗಿಸಲು ಸರ್ಕಾರ ನಿರ್ಧರಿಸಿದೆ. ಆದಾಯತೆರಿಗೆ ರಿಟರ್ನ್ಸ್ ಸಲ್ಲಿಕೆಯನ್ನು ಮತ್ತಷ್ಟು ಸರಳಗೊಳಿಸುವಲ್ಲಿ ಈ ಉಪಕ್ರಮ ನೆರವಾಗಲಿದೆ. ರಿಟರ್ನ್ಸ್ ಸಲ್ಲಿಕೆಯಾದ ನಂತರದ ಒಂದು ದಿನದೊಳಗಾಗಿ ತೆರಿಗೆ ಮರುಪಾವತಿ ಸಂಬಂಧಿತ ವ್ಯವಸ್ಥೆಗಳನ್ನು ಮಾಡುವ ಗುರಿಯೂ ಇದಕ್ಕಿದೆ. ಹೀಗೆ ಸಲ್ಲಿಕೆಯಾದ ರಿಟರ್ನ್ಸ್, ತೆರಿಗೆದಾರರಿಗೆ ಸಂಬಂಧಿಸಿದ ಪೂರ್ವರೂಪಿತ ವಿವರಗಳೊಂದಿಗೆ ಜಾಲತಾಣದಲ್ಲಿ ಲಭ್ಯವಾಗಲಿದೆ ಮತ್ತು ತನ್ಮೂಲಕ ಒಂದಿಡೀ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಸುಲಲಿತವಾಗಲಿದೆ. ಈ ಉಪಕ್ರಮವು ಸಮಯವನ್ನು ಗಮನಾರ್ಹವಾಗಿ ತಗ್ಗಿಸುವುದರ ಜತೆಗೆ, ವ್ಯವಸ್ಥೆಯನ್ನು ಪಾರದರ್ಶಕ, ಕ್ಷಿಪ್ರ ಮತ್ತು ತೆರಿಗೆದಾರ-ಸ್ನೇಹಿಯಾಗಿ ಮಾರ್ಪಡಿಸುತ್ತದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಪದ್ಧತಿಯನ್ನು ಸರ್ಕಾರ ಪರಿಚಯಿಸಿದ್ದರಿಂದಾಗಿ, ಒಂದಿಡೀ ಪರೋಕ್ಷ ತೆರಿಗೆ ವ್ಯವಸ್ಥೆಯ ಅಸ್ತಿತ್ವ ಇಲ್ಲವಾಯಿತು. ಇದೊಂದು ಅಗಾಧ ಕಸರತ್ತೇ ಆಗಿತ್ತು ಮತ್ತು ಈ ಅವಧಿಯಲ್ಲಿ ಸಂಯಮವನ್ನು ಕಾಯ್ದುಕೊಳ್ಳಲು ಸರ್ಕಾರ ಸಂಕಲ್ಪಿಸಿತ್ತು. ಈ ಬಾಬತ್ತಿಗೆ ಸಂಬಂಧಿಸಿದಂತೆ ವ್ಯವಸ್ಥೆಯಲ್ಲಿ ಬಯಸಿದ ಮಟ್ಟದ ದಕ್ಷತೆ/ಪರಿಣಾಮಕಾರಿತ್ವ (ಅಂದರೆ, ‘ಇನ್​ವಾಯ್್ಸ ಮ್ಯಾಚಿಂಗ್’ ಇತ್ಯಾದಿ) ಇನ್ನೂ ಸಾಧನೆಯಾಗಿಲ್ಲವಾದರೂ, ಕಾರ್ಯನೀತಿ ಅನುಸರಣೆ ಸರಳ ಹಾಗೂ ಸುಲಭವಾಗಿಸುವ ಮೂಲಕ ವ್ಯಾಪಾರೋದ್ದಿಮೆಯ ಕಾರ್ಯವಿಧಾನಗಳಲ್ಲಿ ರಾಚನಿಕ ಪರಿವರ್ತನೆಯನ್ನು ಈ ಬದಲಾವಣೆಯೊಂದೇ ತಂದಿದೆ. ಈ ಪದ್ಧತಿಯಲ್ಲಿ ಇನ್ನೂ ಉಳಿದುಕೊಂಡಿರುವ ಕೆಲವೊಂದು ಕೊರತೆಗಳ ಕುರಿತಾಗಿ ಟೀಕಾಕಾರರ ಕೂರಂಬುಗಳು ನಿರಂತರವಾಗಿದ್ದರೂ, ಈ ಸುಧಾರಣಾಕ್ರಮವು ಜಗತ್ತಿನೆಲ್ಲೆಡೆಯ ಗಮನ ಸೆಳೆದಿರುವುದಂತೂ ನಿಜ. ಜಿಎಸ್​ಟಿ ಅನುಷ್ಠಾನದ ಸಂದರ್ಭದಲ್ಲಿ ಕಲಿತಿರುವ ಅನೇಕ ಪಾಠಗಳು, ಈ ಬಾಬತ್ತಿನಲ್ಲಿ ಮತ್ತಷ್ಟು ಉತ್ತಮಿಕೆ ಮೆರೆಯುವಂತಾಗುವುದಕ್ಕೆ ಸರ್ಕಾರಕ್ಕೆ ನೆರವಾಗಲಿವೆ. ತಂತ್ರಜ್ಞಾನ ಪ್ರಪಂಚದ ದಿಗ್ಗಜ ಎನಿಸಿರುವ ಇನ್ಪೋಸಿಸ್ ಈ ನಿಟ್ಟಿನಲ್ಲಿ ಮತ್ತಷ್ಟು ಜಾಗರೂಕನಾಗಿದ್ದುಕೊಂಡು, ಹಿಂದಿಗಿಂತ ಭಿನ್ನವಾಗಿ ಸನ್ನದ್ಧತೆಯನ್ನು ಕಾಯ್ದುಕೊಳ್ಳಲಿದೆಯೇ? ಹಾಗೇ ಆಗುತ್ತದೆ ಎಂದು ಆಶಿಸೋಣ. ಕೇಂದ್ರ ಸರ್ಕಾರದ ಅವಧಿ ಇನ್ನೇನು ಸಂಪನ್ನಗೊಳ್ಳಲಿದೆ; ಅಧಿಕಾರಾವಧಿಯ ಅಂತ್ಯದ ಸಂದರ್ಭದಲ್ಲೂ, ನೇರ ತೆರಿಗೆ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಸುಧಾರಿಸಲೆಂದು ಅದು ಹಮ್ಮಿಕೊಂಡಿರುವ ಉಪಕ್ರಮವು ನಿಜಕ್ಕೂ ಶ್ಲಾಘನೀಯವೇ ಎನ್ನಬೇಕು.

ಇಂದು (ಫೆ.1) ಕೇಂದ್ರದ ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಸುಧಾರಣಾಪರ್ವವನ್ನು ಮುಂದುವರಿಸುವೆಡೆಗಿನ ತನ್ನ ಬದ್ಧತೆಯ ಅಭಿವ್ಯಕ್ತಿಗೆ ಅದಕ್ಕೀಗ ಮತ್ತೊಂದು ಸುಸಂದರ್ಭ ಸಿಕ್ಕಿದೆ ಎನ್ನಬೇಕು. ಈ ಬಾರಿ ಮಂಡನೆಯಾಗಲಿರುವ ಬಜೆಟ್​ನ ಸ್ವರೂಪ ಹೇಗಿರಲಿದೆ ಎಂಬುದರ ಕುರಿತಾಗಿ ಮಾಧ್ಯಮಗಳಲ್ಲಿ ಪುಂಖಾನುಪುಂಖವಾಗಿ ಊಹೆಗಳು ಹೊಮ್ಮುತ್ತಿವೆಯಾದರೂ, ಜನರ ಜೀವನಕ್ರಮ ಸುಲಲಿತಗೊಳಿಸಬೇಕೆಂಬ ತನ್ನ ಉದ್ದೇಶದಿಂದ ಸರ್ಕಾರ ಹಿಂದೆಗೆಯಬಾರದು ಎಂಬುದು ಬಹುತೇಕರ ಆಶಯ. ಸುಧಾರಣೆಗೆ ಸಂಬಂಧಿಸಿದ ಈವರೆಗಿನ ಎಲ್ಲ ಉಪಕ್ರಮಗಳಲ್ಲಿ ತಂತ್ರಜ್ಞಾನದ ಬಳಕೆ ಒಂದು ಸರ್ವೆಸಾಮಾನ್ಯ ಲಕ್ಷಣವಾಗಿದ್ದು, ಸರ್ಕಾರ ಈ ನಿಯಮವನ್ನು ಮುಂದುವರಿಸಿಕೊಂಡು ಹೋಗಬೇಕಾಗುತ್ತದೆ. ನನ್ನ ಮುಂದಿನ ಅಂಕಣ ಪ್ರಕಟವಾಗುವ ಹೊತ್ತಿಗಾಗಲೇ ಗಮನಾರ್ಹ ಮಾಹಿತಿಗಳು ನಿಮ್ಮ ಮುಂದೆ ಅನಾವರಣಗೊಂಡಿರುತ್ತವೆ ಎಂಬುದನ್ನು ನಾನು ಬಲ್ಲೆ. ಉತ್ತಮ ಬೆಳವಣಿಗೆಯೇ ಘಟಿಸಲಿ ಎಂದು ಕಾದುಕೂರುವುದಷ್ಟೇ ನಮ್ಮ ಕೆಲಸ, ಅಲ್ಲವೇ?!

(ಲೇಖಕರು ಆರ್ಥಿಕ ತಜ್ಞರು)