ಕಲಿಕಾ ಮಟ್ಟ ಸುಧಾರಿಸಿ

Improve learning level

ಬಾದಾಮಿ: ಸಮಾಜ ಕಲ್ಯಾಣ ಹಾಗೂ ಬಿಸಿಎಂ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿರುವ ಮಕ್ಕಳನ್ನು ಎ, ಬಿ, ಸಿ ಕೆಟಗರಿ ಮಾಡಿ ಬಿಆರ್‌ಸಿ ಮತ್ತು ಸಿಆರ್‌ಸಿಗೆ ಪಟ್ಟಿ ಕೊಡಿ. ಅವರು ವಿಶೇಷ ತರಗತಿ ತೆಗೆದುಕೊಂಡು ಕಲಿಕಾ ಮಟ್ಟ ಸುಧಾರಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಎನ್.ವೈ. ಬಸರಿಗಿಡದ ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲೂರಗೆ ಸೂಚಿಸಿದರು.

ತಾಪಂ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಸಿಕ ಕೆಡಿಪಿ ಹಾಗೂ ತಾಪಂ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಸತಿ ಶಾಲೆ ಶಿಕ್ಷಣ ಗುಣಮಟ್ಟ ಹೆಚ್ಚಾಗಬೇಕು. ಇದರ ಬಗ್ಗೆ ನಿಗಾ ವಹಿಸಬೇಕು ಎಂದರು.

ಸಿಡಿಪಿಒ ದಸ್ತಗೀರಸಾಬ ಮುಲ್ಲಾ ಮಾತನಾಡಿ, ತಾಲೂಕಿನಲ್ಲಿ ಒಟ್ಟು 316 ಅಂಗನವಾಡಿ ಕೇಂದ್ರಗಳಿದ್ದು, 297ಕ್ಕೆ ಸ್ವಂತ ಕಟ್ಟಡಗಳಿವೆ. 14 ಕೇಂದ್ರಗಳ ಕಟ್ಟಡ ನಿರ್ಮಾಣ ಪ್ರಗತಿ ಹಂತದಲ್ಲಿದೆ. 3 ಅಂಗನವಾಡಿಗಳಿಗೆ ಮಾತ್ರ ನಿವೇಶನ ಇಲ್ಲ ಎಂದು ಮಾಹಿತಿ ನೀಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ ಮಾತನಾಡಿ, ಜೂನ್‌ನಲ್ಲಿ 52 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು. ಈಗ 186 ಮಿಲಿ ಮೀಟರ್ ಮಳೆಯಾಗಿದೆ. ರೈತರು ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಹೆಸರು, ತೊಗರಿ ಬೆಳೆಯುವ ಬದಲು ಗೋವಿನ ಜೋಳದ ಕಡೆ ರೈತರು ಆಸಕ್ತಿ ಹೊಂದಿದ್ದಾರೆ. ತಾಲೂಕಿನಲ್ಲಿ 63 ಬೀಜದ ಅಂಗಡಿಗಳಿವೆ. ನಾಲ್ಕು ರೈತ ಸಂಪರ್ಕ ಕೇಂದ್ರಗಳಿವೆ ಎಂದರು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಪಿ. ಪಾಟೀಲ ಮಾತನಾಡಿ, ಾರ್ಮ್ 2 ಎಕರೆಯಲ್ಲಿ ಮಲ್ಲಿಗೆ ಬೆಳೆದಿದ್ದು, ನರ್ಸರಿ ಮಾಡಲಾಗಿದೆ ಎಂದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶ್ರೀಕಾಂತ ಸಬನೀಸ್ ಮಾತನಾಡಿ, ಪಶುಪಾಲನಾ ಇಲಾಖೆಯಲ್ಲಿ ಒಟ್ಟು 21 ಪಶು ವೈದ್ಯರ ಹುದ್ದೆ ಮಂಜೂರಿದ್ದು, ಇದರಲ್ಲಿ 8 ಜನರು ಮಾತ್ರ ಇದ್ದಾರೆ. 13 ವೈದ್ಯ ಹುದ್ದೆ ಖಾಲಿ ಇವೆ. 23 ಕುರಿಗಾಹಿಗಳಿಂದ ಗನ್ ಲೈಸೆನ್ಸ್ ಅರ್ಜಿ ಬಂದಿವೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್. ಮಳಿಮಠ ಮಾತನಾಡಿ, 9 ವಸತಿ ನಿಲಯಗಳಿದ್ದು, ಒಂದು ಮಹಿಳಾ ಹಾಸ್ಟೆಲ್ ಇದೆ. ಮೂರು ಕಾಲೇಜು ಹಾಸ್ಟೆಲ್ ಇವೆ. 1070 ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ ಹಾಗೂ 410 ವಿದ್ಯಾರ್ಥಿಗಳು ಮೆಟ್ರಿಕ್ ನಂತರ ವಸತಿ ನಿಲಯದಲ್ಲಿದ್ದಾರೆ ಎಂದು ಹೇಳಿದರು.

ಬಿಸಿಎಂ ಇಲಾಖೆಯ ಹೇಮಲತಾ ಸಿಂಧೆ ಮಾತನಾಡಿ, ತಾಲೂಕಿನಲ್ಲಿ ಒಟ್ಟು 16 ವಸತಿ ನಿಲಯಗಳಿವೆ. 8 ಮೆಟ್ರಿಕ್ ಪೂರ್ವ, 8 ಮೆಟ್ರಿಕ್ ನಂತರದ ವಸತಿ ನಿಲಯಗಳಿವೆ. 7 ಜನ ವಾರ್ಡನ್ ಇದ್ದಾರೆ. 9 ಹುದ್ದೆಗಳು ಖಾಲಿ ಇವೆ. 9 ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಹಾಗೂ 7 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಒಟ್ಟು 1450 ವಿದ್ಯಾರ್ಥಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.
ಬಾದಾಮಿ ತಾಪಂ ಇಒ ಸುರೇಶ ಕೊಕ್ಕರೆ, ಗುಳೇದಗುಡ್ಡ ತಾಪಂ ಇಒ ಮಲ್ಲಿಕಾರ್ಜುನ ಬಡಿಗೇರ, ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ, ಘಟಕ ವ್ಯವಸ್ಥಾಪಕ ಅಶೋಕ ಕೋರಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಹಾಂತೇಶ ನಾರಗಲ್ ಇದ್ದರು.

ಉತ್ತರಿಸಲು ತಡವರಿಸಿದ ಅಧಿಕಾರಿ: ಬಾದಾಮಿ ತಾಲೂಕಿನಲ್ಲಿ ಎಷ್ಟು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ? ನೀರಿನ ಸಮಸ್ಯೆ ಇರುವ ಗ್ರಾಮಗಳು ಯಾವವು? ಜಲಜೀವನ ಮಿಷನ್ ಯೋಜನೆಯಡಿ ಸರಿಯಾದ ಕಾಮಗಾರಿ ನಡೆದಿಲ್ಲ ಎಂಬ ದೂರಿದೆ. ಈ ಎಲ್ಲ ಮಾಹಿತಿ ಇಲ್ಲದೆ ಯಾಕೆ ಸಭೆಗೆ ಬಂದಿದ್ದೀಯಾ? ಎಂದು ಕುಡಿಯುವ ನೀರು ವಿಭಾಗದ ಅಧಿಕಾರಿ ಬಂಡಿ ಅವರನ್ನು ಜಿಪಂ ಉಪಕಾರ್ಯದರ್ಶಿ ಬಸರಿಗಿಡದ ಅವರು ತೀವ್ರ ತರಾಟೆಗೆ ತೆಗೆದುಕೊಂಡರು. 124 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. 4 ಕಡೆಗಳಲ್ಲಿ ಬಾಡಿಗೆ ವಾಹನ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದಾಗ, ಪುನಃ ಪ್ರಶ್ನೆ ಕೇಳಿದಾಗ ಸರಿಯಾದ ಮಾಹಿತಿ ನೀಡಲು ತಡಬಡಿಸಿದರು.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…