17.8 C
Bengaluru
Wednesday, January 22, 2020

ರೋಗನಿರೋಧಕಗಳ ಅನುಚಿತ ಬಳಕೆ ತಡೆಯಬೇಕಿದೆ

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಒಂದು ಬೂಷ್ಟು ಹಿಡಿದ ಕರಬೂಜ್ ಹಣ್ಣು ಲಕ್ಷಾಂತರ ಜನರ ಜೀವಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಯಾರಿಗೆ ಗೊತ್ತಿತ್ತು? ವಿಶ್ವದ ಮೊದಲ ಆಂಟಿಬಯಾಟಿಕ್ ಪೆನ್ಸಿಲಿನ್ ಮಾಡಿದ ಕೆಲಸ ಅದೇ! ಬ್ರಿಟಿಷ್ ವಿಜ್ಞಾನಿ ಅಲೆಕ್ಸಾಂಡರ್ ಫ್ಲೆಮಿಂಗ್ 1928ರಲ್ಲೇ ಪೆನ್ಸಿಲಿನ್ ಕಂಡುಹಿಡಿದಿದ್ದರೂ, ಕರಬೂಜ್ ಹಣ್ಣಿಗೆ ಹಿಡಿದ ಬೂಷ್ಟಿನಿಂದ ಪೆನ್ಸಿಲಿನ್​ನ್ನು ಬೇರ್ಪಡಿಸಿ ಬೃಹತ್ ಪ್ರಮಾಣದಲ್ಲಿ ಅದನ್ನು ಉತ್ಪಾದಿಸಿದ ಅಮೆರಿಕದ ಔಷಧ ಉದ್ಯಮಗಳು 2ನೇ ವಿಶ್ವಯುದ್ಧದಲ್ಲಿ ತೊಡಗಿದ್ದ ಸಾವಿರಾರು ಸೈನಿಕರ ಜೀವ ಉಳಿಸಿದವು.

ಮೊದಲ ವಿಶ್ವಯುದ್ಧದ ವೇಳೆ ಕದನದ ಪರಿಣಾಮ ಉಂಟಾದ ಸಾವು-ನೋವುಗಳಿಗಿಂತ ಸಾಂಕ್ರಾಮಿಕ ರೋಗಗಳಿಂದಾಗಿ ಜೀವ ಕಳೆದುಕೊಂಡ ಸೈನಿಕರ ಸಂಖ್ಯೆಯೇ ಹೆಚ್ಚಿತ್ತು. ಎರಡನೇ ವಿಶ್ವಯುದ್ಧದ ಹೊತ್ತಲ್ಲಿ ಸಾಂಕ್ರಾಮಿಕ ರೋಗಗಳಿಂದಾಗಿ ಉಂಟಾಗುವ ಸಾವುನೋವಿನ ಪ್ರಮಾಣ ಹೆಚ್ಚದಂತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದ್ದು ಪೆನ್ಸಿಲಿನ್. ನ್ಯುಮೋನಿಯ ಮತ್ತು ಚರ್ಮ ಸೋಂಕುಗಳಂತಹ ಸಾಮಾನ್ಯ ರೋಗಗಳಿಂದ ಉಂಟಾಗುವ ಮರಣಗಳ ಪ್ರಮಾಣ ಗಣನೀಯವಾಗಿ ಇಳಿಯಿತು. ಸೋಂಕುಗಳು ಹಾಗೂ ಸಾಂಕ್ರಾಮಿಕ ರೋಗಗಳ ವಿರುದ್ಧದ ಸಮರವನ್ನು ಗೆದ್ದೇಬಿಟ್ಟೆವು, ಆರೋಗ್ಯ ವಲಯದಲ್ಲಿ ಹೊಸ ಶಕೆ ಶುರುವಾಯಿತು ಎಂದೇ ಅನೇಕರು ಭಾವಿಸಿದ್ದರು. ಆದರೆ, ಪೆನ್ಸಿಲಿನ್ ಬಲಗುಂದುತ್ತಿದೆ ಎಂಬ ಸೂಚನೆಗಳು ದೊರೆತ ಆರಂಭದಲ್ಲೇ ಹಲವು ಹೊಸ ಆಂಟಿಬಯಾಟಿಕ್​ಗಳನ್ನು ಕಂಡುಕೊಂಡೆವು. ಅದೇ ಹುಮ್ಮಸ್ಸಿನಲ್ಲಿ, 1985ರಲ್ಲಿ ಅಮೆರಿಕದ ಸಾಂಕ್ರಾಮಿಕ ರೋಗಗಳ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಸಾಂಕ್ರಾಮಿಕ ರೋಗಗಳ ತಜ್ಞರ ಅಗತ್ಯವಿದೆಯೇ ಎಂಬುದನ್ನೂ ರ್ಚಚಿಸಲಾಯಿತು.

ಕೆಲಸ ಮಾಡದ ಔಷಧಗಳು: ಇದಾಗಿ 35 ವರ್ಷ ಕಳೆಯುವುದರೊಳಗೇ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಹಿಂದೆ ಸಾವಿರಾರು ಪ್ರಾಣಗಳನ್ನು ರಕ್ಷಿಸಿದ್ದ ಔಷಧಗಳೇ ಈಗ ಪರಿಣಾಮಕಾರಿಯಾಗಿ ಉಳಿದಿಲ್ಲ ಎನ್ನುವ ಕಟುವಾಸ್ತವ ಕಣ್ಣಮುಂದಿದೆ. ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್- ಸಂಕ್ಷಿಪ್ತ ರೂಪದಲ್ಲಿ ಎಎಂಆರ್ (ತಮ್ಮನ್ನು ನಾಶ ಮಾಡಲು ತಯಾರಿಸಲಾದ ಔಷಧಗಳಿಗೆ ಸೂಕ್ಷ್ಮಜೀವಿಗಳು ಪ್ರತಿರೋಧ ಬೆಳೆಸಿಕೊಳ್ಳುವುದು) ಅನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಶ್ವ ಎದುರಿಸುತ್ತಿರುವ ಅತ್ಯಂತ ಪ್ರಮುಖ ಹತ್ತು ಗಂಡಾಂತರಗಳಲ್ಲಿ ಇದೂ ಒಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಎಎಂಆರ್ ಪ್ಯಾಥೊಜೊನ್ಸ್ ಅಥವಾ ‘ಸೂಪರ್ ಬಗ್ಸ್’ ಎಂದೇ ಕರೆಯಲ್ಪಡುವ ಇವುಗಳಿಗೆ ಪ್ರತಿವರ್ಷ ಸರಿಸುಮಾರು 214,000 ನವಜಾತ ಶಿಶುಗಳು ಬಲಿಯಾಗುತ್ತಿವೆ. ಎಎಂಆರ್ ಪ್ರಕರಣಗಳು ವಿಶ್ವಾದ್ಯಂತ ಹೆಚ್ಚುತ್ತಿವೆ. ಪರಿಸ್ಥಿತಿಯ ಗಾಂಭೀರ್ಯ ಅರಿಯದಿದ್ದರೆ, ನಾವು ಮತ್ತೆ ಚಿಕ್ಕಪುಟ್ಟ ಬ್ಯಾಕ್ಟೀರಿಯಲ್ ಸೋಂಕುಗಳಿಗೇ ಜೀವಕಳೆದುಕೊಳ್ಳುತ್ತಿದ್ದ ಕಾಲಕ್ಕೆ ಮರಳುವ ಸಾಧ್ಯತೆಯಿದೆ.

ಸರಳವಾಗಿ ಹೇಳಬೇಕೆಂದರೆ, ನಾವು ರೋಗನಿರೋಧಕಗಳೆಂಬ ಅತ್ಯಮೂಲ್ಯ ಸಂಪನ್ಮೂಲಗಳನ್ನು ಬೇಕಾಬಿಟ್ಟಿ ಬಳಸುತ್ತಿದ್ದೇವೆ. ವೈರಸ್ ಸೋಂಕುಗಳ ಮೇಲೆ ರೋಗನಿರೋಧಕಗಳು ಪ್ರಭಾವ ಬೀರಲಾರವು, ಇದನ್ನು ತಿಳಿದೋ ತಿಳಿಯದೆಯೋ ಸಾಮಾನ್ಯ ಶೀತ, ಜ್ವರಗಳಿಗೂ ಇವುಗಳನ್ನು ಬಳಸಲಾಗುತ್ತದೆ. ಇಂತಹ ತಪ್ಪುತಿಳಿವಳಿಕೆಗಳಿಂದಾಗಿ ರೋಗನಿರೋಧಕಗಳ ಅನುಚಿತ ಬಳಕೆ ಮತ್ತು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಅಂತಾರಾಷ್ಟ್ರೀಯ ಸಮೀಕ್ಷೆಯೊಂದರ ಪ್ರಕಾರ ಆಸ್ಪತ್ರೆಗಳಲ್ಲಿ ಬಳಸುತ್ತಿರುವ ಆಂಟಿಮೈಕ್ರೊಬಿಯಲ್​ಗಳಲ್ಲಿ ಅರ್ಧಕ್ಕೂ ಹೆಚ್ಚು ಅನಗತ್ಯ ಎಂದಿದೆ.

ಪ್ರಾಣಿಗಳಲ್ಲೂ ರೋಗನಿರೋಧಕಗಳ ಅಸಮರ್ಪಕ ಬಳಕೆ ತೀರಾ ಹೆಚ್ಚಾಗಿದೆ. ಲಕ್ಷಾಂತರ ಜೀವಗಳನ್ನು ರಕ್ಷಿಸುವ ರೋಗನಿರೋಧಕಗಳ ಪ್ರಭಾವ ಕುಂದದಂತೆ ಕಾಪಾಡಿಕೊಳ್ಳುವುದು ಮಹತ್ವದ ಕೆಲಸ. ಈ ಔಷಧಗಳನ್ನು ಪ್ರಾಣಿಗಳಲ್ಲಿ ಸೋಂಕು ಹೋಗಲಾಡಿಸಲು ಬಳಸುವುದಕ್ಕಿಂತ ಅವುಗಳ ಬೆಳವಣಿಗೆ ಹೆಚ್ಚಿಸಲು ಬಳಸಲಾಗುತ್ತದೆ. ಇದು ಅತ್ಯಂತ ಆತಂಕಕಾರಿ ಬೆಳವಣಿಗೆ. ಅದರಲ್ಲೂ ಕಳೆದ ನಲವತ್ತು ವರ್ಷಗಳಲ್ಲಿ ಯಾವುದೇ ಹೊಸ ರೋಗನಿರೋಧಕ ಔಷಧಗಳನ್ನು ಅಭಿವೃದ್ಧಿ ಪಡಿಸಲಾಗಿಲ್ಲ ಎಂಬುದು ವಿಪರ್ಯಾಸ.

ಭಾರತ-ಅಮೆರಿಕ ಸಹಕಾರ: ಈ ಎಎಂಆರ್ ಅಪಾಯವನ್ನು ಎದುರಿಸುವ ವಿಷಯದಲ್ಲಿ ಭಾರತ-ಅಮೆರಿಕ ದೇಶಗಳು ಸಮಾನ ಆಸಕ್ತಿ ಹೊಂದಿವೆ. ಅಮೆರಿಕದಲ್ಲಿ ಪ್ರತಿವರ್ಷ 2.8 ಮಿಲಿಯನ್ ಆಂಟಿಬಯಾಟಿಕ್ ನಿರೋಧಕ ಸೋಂಕು ಪ್ರಕರಣಗಳು ಕಂಡುಬರುತ್ತವೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ತಲಾ ರೋಗನಿರೋಧಕ ಔಷಧ ಸೇವನೆ ಪ್ರಮಾಣವನ್ನು ಹೊಂದಿರುವ ದೇಶಗಳಲ್ಲಿ ಅಮೆರಿಕವೂ ಒಂದು. ಭಾರತದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರೋಗನಿರೋಧಕಗಳ ಸರಾಸರಿ ಬಳಕೆ ಹೆಚ್ಚು. ಉಭಯ ದೇಶಗಳಿಗೂ ಇದು ಕ್ಲಿಷ್ಟ ಸವಾಲೇ, ಆದರೆ ಇದು ನಿರರ್ಥಕ ಹೋರಾಟವಲ್ಲ. ವಿಶಿಷ್ಟ ಶಕ್ತಿಸಾಮರ್ಥ್ಯಗಳನ್ನು ಹೊಂದಿರುವ ಎರಡೂ ದೇಶಗಳು ಜತೆಯಾಗಿ ಕೆಲಸ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸುಲಭಸಾಧ್ಯ. ಸಾಂಕ್ರಾಮಿಕ ರೋಗಗಳ ಕಣ್ಗಾವಲು ಮತ್ತು ಔಷಧಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಅಮೆರಿಕ ವಿಶ್ವದ ಮುಂಚೂಣಿಯಲ್ಲಿದೆ. ಭಾರತ ಹುಲುಸಾಗಿ ಬೆಳೆಯುತ್ತಿರುವ ಫಾರ್ವವಲಯ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿದೆ.

ಈ ಸಮಸ್ಯೆ ಎದುರಿಸಲು ಕೆಲ ಕ್ರಮಗಳನ್ನು ಕೈಗೊಳ್ಳಬೇಕಿದೆ.

  • ಆಸ್ಪತ್ರೆಗಳಲ್ಲಿ ಹರಡುವ ಸೋಂಕಿನ ನಿಯಂತ್ರಣ 
  • ಎಂಆರ್ ಸಮಸ್ಯೆ ಎದುರಿಸಲು ಕಣ್ಗಾವಲು ವ್ಯವಸ್ಥೆ ಅಭಿವೃದ್ಧಿ
  • ಎಂಆರ್​ಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿರುವ ವಿಜ್ಞಾನಿಗಳಿಗೆ, ಪರಿಶೋಧಕರಿಗೆ ಸೂಕ್ತ ಬೆಂಬಲ
  • ಅತ್ಯಗತ್ಯವಾಗಿ ಬೇಕಿರುವ ಹೊಸ ಆಂಟಿಮೈಕ್ರೋಬುಗಳ ಅಭಿವೃದ್ಧಿಗೆ ಧನಸಹಾಯ.

ಈ ಎಲ್ಲ ವಲಯಗಳಲ್ಲಿ ಉಭಯದೇಶಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ.

ಕಳೆದ ತಿಂಗಳು ಕೋಲ್ಕತ್ತದಲ್ಲಿ ಎಎಂಆರ್ ಸಂಬಂಧಿ ಸಂಶೋಧನೆ ಮತ್ತು ನೀತಿನಿರೂಪಣೆ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ, ಸೆಕ್ರೆಟರಿ ಬಲರಾಮ್ ಭಾರ್ಗವ ಅವರನ್ನು ಭೇಟಿಯಾದೆ. ಎಎಂಆರ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಜೈವಿಕ ತಂತ್ರಜ್ಞಾನವೂ ಸೇರಿ ಭಾರತದ ಎಲ್ಲ ಸಹಭಾಗಿಗಳೊಡನೆ ಕೆಲಸ ಮಾಡಲು ಅಮೆರಿಕ ಬದ್ಧವಾಗಿದೆ ಎಂದು ಹೇಳಿದೆ.

ನೀವೂ ಕೈಜೋಡಿಸಿ: ನಮ್ಮ ಸರ್ಕಾರಗಳು ಈ ಸಮಸ್ಯೆ ನಿವಾರಣೆಗೆ ಯತ್ನಿಸುತ್ತಿರುವಾಗಲೇ, ಎಎಂಆರ್ ನಿರೋಧ ತಡೆಗಟ್ಟುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟದಲ್ಲಿ ಪ್ರತಿಯೊಬ್ಬರೂ ವೈಯಕ್ತಿಕ ನೆಲೆಯಲ್ಲಿ ಕೈಜೋಡಿಸಬಹುದು. ಆರೋಗ್ಯ ಸೇವೆಗಳ ಬಳಕೆದಾರರಾಗಿ, ಯಾವುದೇ ರೋಗನಿರೋಧಕಗಳನ್ನು ಬಳಸುವ ಮೊದಲು ವೈದ್ಯರನ್ನು ಸಂರ್ಪಸಿ. ಹಾಗೆಯೇ ಸೋಂಕು ಹರಡುವುದನ್ನು ತಡೆಯಲು ಕೈತೊಳೆಯುವುದು, ಕೆಮ್ಮುವಾಗ ಎಚ್ಚರದಿಂದಿರುವುದು, ಅನಾರೋಗ್ಯಪೀಡಿತರಾದಾಗ ಮನೆಯಲ್ಲಿ ಉಳಿಯುವುದು ಸೇರಿ ಆರೋಗ್ಯಕರ ನೈರ್ಮಲ್ಯ ಅಭ್ಯಾಸಗಳನ್ನು ಪಾಲಿಸಿ. ಸೋಂಕು ನಿವಾರಣೆಗೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು, ಅಗತ್ಯವಿದ್ದರಷ್ಟೇ ರೋಗನಿರೋಧಕಗಳನ್ನು ಬಳಸುವುದು, ಸೋಂಕು ರೋಗಗಳ ಹರಡುವಿಕೆ ತಡೆಯಲು ರೋಗನಿರೋಧಕ ಲಸಿಕೆಗಳನ್ನು ತೆಗೆದುಕೊಳ್ಳಲು ಪೋ›ತ್ಸಾಹಿಸುವುದು ಸೇರಿ ಸೋಂಕು ತಡೆಗಟ್ಟುವಿಕೆಗೆ ಇರುವ ಮಾರ್ಗದರ್ಶಿ ಸೂತ್ರಗಳನ್ನು ಆರೋಗ್ಯಸೇವಾ ಕಾರ್ಯಕರ್ತರು ಪಾಲಿಸಬೇಕು. ರೈತರೂ ಪಶುಗಳಿಗೆ ರೋಗನಿರೋಧಕ ಲಸಿಕೆ ಹಾಕಿಸಬೇಕು, ಪಶುವೈದ್ಯರ ನಿಗಾದಲ್ಲಿ ಸೋಂಕು ನಿವಾರಣೆ ಮತ್ತು ನಿಯಂತ್ರಣಕ್ಕಾಗಿ ಮಾತ್ರ ರೋಗನಿರೋಧಕ ಬಳಸಬೇಕು. ಹಾಗೆಯೇ ಉದ್ಯಮಗಳು ಹೊಸ ಆಂಟಿಬಯಾಟಿಕ್​ಗಳನ್ನು ಆವಿಷ್ಕರಿಸಿ ಅಭಿವೃದ್ಧಿ ಪಡಿಸಬೇಕು ಮತ್ತು ಜವಾಬ್ದಾರಿಯುತ ಬಳಕೆಯತ್ತಲೂ ಗಮನ ಹರಿಸಬೇಕು.

ಈ ಸವಾಲಿಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಹಾಗೂ ಸಾಮೂಹಿಕವಾಗಿ ಪ್ರತಿಕ್ರಿಯಿಸಬೇಕಿದೆ. ಎಎಂಆರ್ ತಡೆಗಟ್ಟುವಿಕೆಯಲ್ಲಿನ ನಮ್ಮ ಸಹಭಾಗಿತ್ವವು ಅಮೆರಿಕ-ಭಾರತ ಸಹಭಾಗಿತ್ವದ ಸಂಕೇತವಾಗಲಿದೆ. ಹಾಗೆಯೇ ನಾವು ಜತೆಯಾಗಿ ಇಡೀ ವಿಶ್ವಕ್ಕೆ ಏನು ಕೊಡುಗೆ ನೀಡಬಲ್ಲೆವು ಎಂಬುದರ ಪ್ರತೀಕವಾಗಲಿದೆ.

(ಲೇಖಕರು ಭಾರತದಲ್ಲಿನ ಅಮೆರಿಕ ರಾಯಭಾರಿ)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...