More

  ದಾಖಲೆಗಳಿಲ್ಲದ ವಾಹನಗಳನ್ನು ಜಪ್ತಿ ಮಾಡಿ

  ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸಂಚರಿಸುತ್ತಿರುವ ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಜಪ್ತಿ ಮಾಡುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
  ಜಿಲ್ಲೆಯ ಪ್ರವಾಸಿ ತಾಣವಾದ ದತ್ತಪೀಠ, ಮುಳ್ಳಯ್ಯನಗಿರಿ ಭಾಗದಲ್ಲಿ ಪ್ರತಿನಿತ್ಯ ಸುಮಾರು 120ಕ್ಕೂ ಹೆಚ್ಚು ಜೀಪುಗಳು ಪ್ರವಾಸಿಗರನ್ನು ಅನೇಕ ಸ್ಥಳಗಳಿಗೆ ಕರೆದೊಯ್ಯುತ್ತಿದ್ದು, ಈ ವಾಹನಗಳ ಚಾಲಕರು ಪ್ರವಾಸಿಗರಿಗೆ ದಬ್ಬಾಳಿಕೆ ಮಾಡಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
  ಈ ವಾಹನಗಳಿಗೆ ಯಾವುದೇ ದಾಖಲೆಗಳಿಲ್ಲ ಹಾಗೂ ಸಂಚಾರಕ್ಕೆ ಸೂಕ್ತವಲ್ಲದ ವಾಹನಗಳ ಬಗ್ಗೆ ಶ್ರೀರಾಮಸೇನೆಯಿಂದ ಕಳೆದ 2 ವರ್ಷದ ಹಿಂದೆ ಹೋರಾಟ ಮಾಡಿದ ಫಲವಾಗಿ 40 ವಾಹನಗಳನ್ನು ಪೊಲೀಸ್ ಇಲಾಖೆ ಜಪ್ತಿ ಮಾಡಿತ್ತು. ಮತ್ತೆ ದಾಖಲೆಯಿಲ್ಲದ ವಾಹನಗಳು ಸಂಚರಿಸುವುದು ಗಮನಕ್ಕೆ ಬಂದಿದೆ. ಪ್ರವಾಸಿಗರು ಹಾಗೂ ಸ್ಥಳೀಯರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಜಪ್ತಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
  ಹಿಂದು ಧರ್ಮ, ದೇವತೆಗಳು ಹಾಗೂ ಒಕ್ಕಲಿಗ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರೊ.ಭಗವಾನ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಹಿಂದು ಸಮಾಜ ಹಾಗೂ ಒಕ್ಕಲಿಗ ಸಮುದಾಯದ ಭಾವನೆಗೆ ಧಕ್ಕೆಯಾಗುವಂತೆ ಪ್ರೊ.ಭಗವಾನ್ ಹೇಳಿಕೆ ನೀಡಿದ್ದು, ಅವರು ಚಿಕ್ಕಮಗಳೂರು ನಗರಕ್ಕೆ ಬರದಂತೆ ನಿರ್ಬಂದ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
  ಶ್ರೀರಾಮ ಸೇನೆ ವಿಭಾಗ ಅಧ್ಯಕ್ಷ ರಂಜಿತ್ ಶೆಟ್ಟಿ, ಜಿಲ್ಲಾಧ್ಯಕ್ಷ ಜ್ಞಾನೇಂದ್ರ ಜೈನ್, ಯೋಗಿ ಸಂಜೀತ್ ಸುವರ್ಣ, ವೆಂಕಟೇಶ್, ನವೀನಾ ರಂಜಿತ್, ಮೈನಾ, ಚಿತ್ರಾ, ಆರತಿ, ಮೀನಾಕ್ಷಿ, ಕೋಮಲಾ, ಪ್ರತಿಮಾ ಶರತ್‌ಕುಮಾರ್, ಮನೀಶಾ ಶೆಟ್ಟಿ, ವರುಣ್ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts