ಉದ್ಯೋಗ ಒದಗಿಸಲು ಪ್ರಾಮುಖ್ಯತೆ

blank

ಶೃಂಗೇರಿ: ತಾಲೂಕಿನಲ್ಲಿ ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಮೂಲಕ ಉದ್ಯೋಗ ಒದಗಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಯೋಜನೆಯ ಐಇಸಿ ಸಂಯೋಜಕಿ ಸೌಮ್ಯ ಹೇಳಿದರು.
ಬೇಗಾರು ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ನರೇಗಾ ಯೋಜನೆಯಡಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡುವ ಸಮಾರಂಭದಲ್ಲಿ ಮಾತನಾಡಿದ ಅವರು, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಾದ ದನದ ಕೊಟ್ಟಿಗೆ, ಬಚ್ಚಲುಗುಂಡಿ ನಿರ್ಮಾಣ, ಕುರಿ ಹಾಗೂ ಕೋಳಿಶೆಡ್‌ಗಳಿಗೆ ವಿಶೇಷ ಅನುದಾನ ಲಭ್ಯವಿರುತ್ತದೆ. ವೈಯಕ್ತಿಕ ಕಾಮಗಾರಿಗಳಾದ ಎರೆಹುಳ ಘಟಕ, ಕೃಷಿಹೊಂಡ ಇತ್ಯಾದಿಗಳಿಗೂ ಅನುದಾನ ಲಭ್ಯವಿದ್ದು ಸರ್ವರೂ ಸದುಪಯೋಗ ಯೋಜನೆ ಪಡೆಯಬೇಕು ಎಂದರು.
ರೈತರ ಹೊಲಗಳಿಗೆ ಬದು ನಿರ್ಮಾಣ, ಕುರಿದೊಡ್ಡಿ ಮಾಡುವ ಅವಕಾಶವಿದ್ದು ರೈತರ ಮನೆಗೆ ತೆರಳಿ ಸ್ಥಳದಲ್ಲೇ ಅರ್ಜಿ ಪಡೆದು ಅವರಿಗೆ ಅಗತ್ಯ ಕಾಮಗಾರಿ ಆದೇಶ ನೀಡಲಾಗುವುದು ಎಂದರು.
ಮೆಣಸೆ ಗ್ರಾಪಂ ಪಿಡಿಒ ನಾಗಭೂಷಣ್ ಮಾತನಾಡಿ, ಯೋಜನೆಯಿಂದ ಅಡಕೆ ಬೆಳೆ ವಿಸ್ತರಣೆ, ಕಾಳುಮೆಣಸು ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು , ರೈತರು ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.
ಬೇಗಾರು ಗ್ರಾಪಂ ಅಧ್ಯಕ್ಷೆ ಗಾಯತ್ರಿ,ಉಪಾಧ್ಯಕ್ಷ ಲಕ್ಷ್ಮೀಶ್, ಸದಸ್ಯರಾದ ಕೇಶವ್, ಸುಮಿತ್ರಾ. ಪ್ರಕಾಶ್, ಶ್ರೀಲತಾ ಇದ್ದರು.

Share This Article

ಬೇಯಿಸಿದ ಮತ್ತು ಹಸಿ ಬೀಟ್ರೂಟ್: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಗೊತ್ತಾ? Beetroots

Beetroots: ಬೀಟ್‌ರೂಟ್‌ಗಳನ್ನು ಹಸಿಯಾಗಿ ಅಥವಾ ಕುದಿಸಿ ಸೇವಿಸುವ ಅತ್ಯುತ್ತಮ ಮಾರ್ಗವು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.…

ನೀವು ರಾತ್ರಿಯಲ್ಲಿ ಪದೇ ಪದೇ ನೀರು ಕುಡಿಯುತ್ತಿದ್ದೀರಾ? ಇದು ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿವೆ.. ನಿರ್ಲಕ್ಷಿಸಬೇಡಿ Drinking Water

Drinking Water : ಮಾನವನ ಆರೋಗ್ಯಕ್ಕೆ ನೀರು ಅತ್ಯಗತ್ಯ. ಆದರೆ, ನಾವು ಅದನ್ನು ಯಾವಾಗ ಕುಡಿಯುತ್ತೇವೆ…