ಬೆಂಗಳೂರು: ಗ್ರಾಪಂಗಳ ಆಡಳಿತವನ್ನು ಡಿಜಿಟಲೀಕರಣ ಗೊಳಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಗ್ರಾಪಂಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಿ ಕಡ್ಡಾಯವಾಗಿ ಬಳಕೆ ಮಾಡುವ ಸಂಬಂಧ ಸುತ್ತೋಲೆ ಹೊರಡಿಸಿದೆ.

ಗ್ರಾಪಂಗಳು ಸಂಬಂಧಪಟ್ಟ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಎಲ್ಲ ಕಡತ ಮತ್ತು ಪತ್ರಗಳನ್ನು ಇ-ಆಫೀಸ್ ಮೂಲಕವೇ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. ಮೇ 26 ರಿಂದ ಕಡ್ಡಾಯವಾಗಿ ಇ-ಆಫೀಸ್ ಜಾರಿಗೆ ಕ್ರಮವಹಿಸುವಂತೆ ಸಿಇಒಗಳಿಗೆ ಸೂಚಿಸಲಾಗಿದೆ.
ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಕಲಬುರಗಿ, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ವಿಜಯನಗರ, ಮತ್ತು ಯಾದಗಿರಿ ಜಿಲ್ಲೆಗಳ ಜಿಪಂಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
2000 ಗ್ರಾಪಂಗೆ ಪಿಒಎಸ್ ವಿತರಣೆ: ಗ್ರಾಪಂಗಳಲ್ಲಿ ತೆರಿಗೆ ವಸೂಲಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಡಿಜಿಟಲ್ ಪಾವತಿ ಉತ್ತೇಜಿಸುವ ಸಲುವಾಗಿ 2000 ಗ್ರಾಪಂಗಳಿಗೆ ಆಂಡ್ರಾಯ್್ಡ ಪಿಒಎಸ್ ಮಷಿನ್ಗಳನ್ನು ಸರ್ಕಾರ ಒದಗಿಸಲಿದೆ. ಈಗಾಗಲೇ ಗ್ರಾಪಂಗಳಿಗೆ ತಲಾ ಒಂದು ಆಂಡ್ರಾಯ್್ಡ ಪಿಒಎಸ್ ಮಷಿನ್ ಒದಗಿಸಿದ್ದು, ಹೆಚ್ಚುವರಿಯಾಗಿ ಮಷಿನ್ಗಳನ್ನು ನೀಡಲಾಗುತ್ತದೆ. 2025ರ ಅಂತ್ಯಕ್ಕೆ ಅತಿ ಹೆಚ್ಚು ಡಿಜಿಟಲ್ ಪಾವತಿಗಳ ಮೂಲಕ ತೆರಿಗೆ ವಸೂಲಿ ಮಾಡಿದ 2000 ಗ್ರಾಪಂಗಳಿಗೆ ಈ ಪಿಒಎಸ್ ಮಷಿನ್ ನೀಡಲಾಗುತ್ತದೆ. ಮೇ 13 ರಂದು ನಿರ್ದೇಶಕರು, ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಚೇರಿಯಲ್ಲಿ ಪಿಒಎಸ್ ಮಷಿನ್ಗಳನ್ನು ವಿತರಿಸಲಾಗುತ್ತದೆ. ಹಾಸನ 162, ತುಮಕೂರು 123, ರಾಮನಗರ 121, ಮೈಸೂರು 107 ಹಾಗೂ ಮಂಡ್ಯ 101 ಹೆಚ್ಚು ಪಿಒಎಸ್ ಮಷಿನ್ ಪಡೆವ ಮೊದಲ ಐದು ಜಿಲ್ಲೆಗಳಾಗಿವೆ.