ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನಿಗೆ ಉಗಿದು ಕಾರಿನ ಮಿರರ್ ಮುರಿದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಆಟೋ ಚಾಲಕನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಮಲೂರು ನಿವಾಸಿ ಕಿರಣ್(೩೪) ಬಂಧಿತ ಆಟೋ ಚಾಲಕ.
ಆ.೫ರಂದು ಮಧ್ಯಾಹ್ನ ೧೨.೫೦ಕ್ಕೆ ಎಚ್‌ಎಎಲ್ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿತ್ತು. ವಿಜ್ಞಾನನಗರ ನಿವಾಸಿ ಅಲೆಕ್ಸ್ ಬಾಬಿ ವೆಂಪಲ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆಟೋ ಚಾಲಕ ಕಿರಣ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಅಲೆಕ್ಸ್ ಬಾಬಿ ಅವರು ತಮ್ಮ ಕಾರಿನಲ್ಲಿ ಎಚ್‌ಎಎಲ್ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ಬದಿ ಆಟೋ ನಿಲ್ಲಿಸಿಕೊಂಡಿದ್ದ ಕಿರಣ್ ಶಾಲಾ ಮಕ್ಕಳನ್ನು ಕೆಳಗೆ ಇಳಿಸಿದ್ದಾನೆ. ಈ ವೇಳೆ ಪಕ್ಕದಲ್ಲಿ ಬಂದ ಅಲೆಕ್ಸ್ ಅವರ ಕಾರನ್ನು ತಡೆದ ಆಟೋ ಚಾಲಕ ಕಿರಣ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಅಷ್ಟರಲ್ಲಿ ಮೊಬೈಲ್ ತೆಗೆದು ವಿಡಿಯೊ ಮಾಡಿಕೊಳ್ಳಲು ಅಲೆಕ್ಸ್ ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಕಿರಣ್, ಅಲೆಕ್ಸ್‌ನತ್ತ ಉಗಿದು, ಕಾರಿನ ಮಿರರ್‌ಗೆ ಕೈಯಿಂದ ಗುದ್ದಿ ಜಖಂಗೊಳಿಸಿದ್ದಾನೆ. ಬಳಿಕ ಅಲೆಕ್ಸ್ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕ ಕಿರಣ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರ್ವತನೆ ತೋರಿದ ಆಟೋ ಚಾಲಕನ ಸೆರೆ
You Might Also Like
ನೈಲ್ ಪಾಲಿಶ್ ಬಳಸಿದ್ರೆ ಬರುತ್ತೆ ಕ್ಯಾನ್ಸರ್! ಯುವತಿಯರೇ ಎಚ್ಚರ
ಬೆಂಗಳೂರು: ಮಹಿಳೆಯರು ತಮ್ಮ ಕೈ ಮತ್ತು ಪಾದದ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಲು ಇಷ್ಟಪಡುತ್ತಾರೆ. ವಿಶೇಷ…
ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್ ಇರಬಹುದು!!
ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…
ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….
ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…