ವಿಶಾಖಪಟ್ಟಣ: ಇಂಪ್ಯಾಕ್ಟ್ ಪ್ಲೇಯರ್ ಆಶುತೋಷ್ ಶರ್ಮ (66* ರನ್, 31 ಎಸೆತ, 5 ಬೌಂಡರಿ, 5 ಸಿಕ್ಸರ್) ಏಕಾಂಗಿ ಸಾಹಸದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 18ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್ ಎದುರು 1 ವಿಕೆಟ್‌ನಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಅಕ್ಷರ್ ಪಟೇಲ್ ಪಡೆ ಶುಭಾರಂಭ ಕಂಡರೆ, ರಿಷಭ್ ಪಂತ್ ಮಾಜಿ ತಂಡದ ಎದುರು ಸೋಲಿನ ನಿರಾಸೆ ಅನುಭವಿಸಿದರು.
ವೈಎಸ್‌ಆರ್ ಸ್ಟ್ರೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಲಖನೌ ಬ್ಯಾಟಿಂಗ್‌ಗೆ ಇಳಿಯಿತು. ಎಡಗೈ ಬ್ಯಾಟರ್ ನಿಕೋಲಸ್ ಪೂರನ್ (75 ರನ್, 30 ಎಸೆತ, 6 ಬೌಂಡರಿ, 7 ಸಿಕ್ಸರ್) ಹಾಗೂ ಆರಂಭಿಕ ಮಿಚೆಲ್ ಮಾರ್ಷ್ (72 ರನ್, 36 ಎಸೆತ, 6 ಬೌಂಡರಿ, 6 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಬಲದಿಂದ ಲಖನೌ 8 ವಿಕೆಟ್‌ಗೆ 209 ರನ್ ಪೇರಿಸಿತು. ಪ್ರತಿಯಾಗಿ ಚೇಸಿಂಗ್‌ನಲ್ಲಿ 66 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಡೆಲ್ಲಿ ಕುಸಿತ ಕಂಡಿತು. ಆಗ 7ನೇ ವಿಕೆಟ್‌ಗೆ ಜತೆಯಾದ ಇಂಪ್ಯಾಕ್ಟ್ ಪ್ಲೇಯರ್ ಆಶುತೋಷ್ ಶರ್ಮ ಹಾಗೂ 20 ವರ್ಷದ ಆಲ್ರೌಂಡರ್ ವಿಪ್ರಜ್ ನಿಗಮ್ (39) 22 ಎಸೆತಗಳಲ್ಲಿ 55 ರನ್‌ಗಳಿಸಿ ಚೇಸಿಂಗ್‌ಗೆ ಬಲ ತುಂಬಿದರು. ಅಂತಿಮ ಮೂರು ಓವರ್‌ಗಳಲ್ಲಿ ಡೆಲ್ಲಿಗೆ 39 ರನ್ ಬೇಕಿದ್ದಾಗ ಆಶುತೋಷ್ ಏಕಾಂಗಿಯಾಗಿ 34 ರನ್ ಬಾರಿಸಿ ಲಖನೌ ಗೆಲುವು ಕಸಿದರು. ಡೆಲ್ಲಿ 19.3 ಓವರ್‌ಗಳಲ್ಲಿ 9 ವಿಕೆಟ್‌ಗೆ 211 ರನ್‌ಗಳಿಸಿ ಶುಭಾರಂಭ ಕಂಡಿದೆ.