More

    ತಕ್ಷಣ ಮಧ್ಯಂತರ ಬೆಳೆ ಪರಿಹಾರ ನೀಡಿ

    ಶಿಕಾರಿಪುರ: ಪ್ರಕೃತಿ ವ್ಯತ್ಯಯ, ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು ತಕ್ಷಣ ಮಧ್ಯಂತರ ಬೆಳೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಂಘ(ಕೋಡಿಹಳ್ಳಿ ಚಂದ್ರಶೇಖರ್ ಬಣ)ದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

    ಸಂಘದ ತಾಲೂಕು ಅಧ್ಯಕ್ಷ ಶಿವಮೂರ್ತೆಪ್ಪ ಮಾತನಾಡಿ, ಕೃಷಿಯನ್ನೇ ನಂಬಿ ಬಹುಪಾಲು ಜನರು ಬದುಕುತ್ತಿದ್ದಾರೆ. ಇವತ್ತು ಅಕಾಲಿಕ ಮಳೆಯಿಂದ ಬರಗಾಲ ಬಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣ ರೈತರ ನೆರವಿಗೆ ಬರಬೇಕು. ರೈತ ಜಗತ್ತಿನ ಅನ್ನದಾತ. ಅಂತಹ ಅನ್ನದಾತ, ಬೆಳೆ ಕಳೆದುಕೊಂಡು ಮುಂದೇನು ಎಂಬ ಆತಂಕದಲ್ಲಿದ್ದಾನೆ. ಅವನ ಬವಣೆಯನ್ನು ಜನಪ್ರತಿನಿಧಿಗಳು ಆಲಿಸಬೇಕು ಎಂದು ಆಗ್ರಹಿಸಿದರು.
    ಕೃಷಿ ಸಾಲವನ್ನು ಮನ್ನಾ ಮಾಡಿ, ರೈತರಿಗೆ ಹೊಸ ಸಾಲ ನೀಡಬೇಕು. ಬೆಳೆಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ಮಳೆಯಿಂದ ಆಘಾತವಾಗಿದೆ. ಶಾಶ್ವತ ನೀರಾವರಿ ಯೋಜನೆಯಡಿ ಉಳಿದ ಎಲ್ಲ ಕೆರೆಗಳನ್ನು ತುಂಬಿಸಬೇಕು. ಸರ್ಕಾರ ಸಮರ್ಪಕವಾದ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
    ಗೌರವಾಧ್ಯಕ್ಷ ಪರಮೇಶ್ವರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಪ್ಪ, ತಾಲೂಕು ಕಾರ್ಯದರ್ಶಿ ಮುಚುಡಿ ಪರಮೇಶ್ವರಪ್ಪ, ಪ್ರಮೋದ್, ಚನ್ನಬಸಪ್ಪ, ಈಸೂರು ಶಿವಪ್ಪ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 25

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts