ಪ್ಯಾರಿಸ್: ಸೀನ್ ನದಿಯ ಮೇಲೆ ಯಶಸ್ವಿಯಾಗಿ ಒಲಿಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿ ಬೆರಗು ಮೂಡಿಸಿದ್ದ ಪ್ಯಾರಿಸ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಅಸ್ವಾಭಾವಿಕ ಲಿಂಗತ್ವ ಸ್ಪರ್ಧಿಗೆ ಕಣಕ್ಕಿಳಿಯಲು ಆಯೋಜಕರು ಅವಕಾಶ ನೀಡಿರುವುದು ಇದಕ್ಕೆ ಕಾರಣ ಎನಿಸಿದೆ. ಲಿಂಗತ್ವ ವಿವಾದದ ನಡುವೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಕೊನೇಕ್ಷಣದಲ್ಲಿ ಅನುಮತಿ ಪಡೆದುಕೊಂಡಿದ್ದ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೇಲ್ಿ ವಿರುದ್ಧ ಮಹಿಳೆಯರ 66 ಕೆಜಿ ವಿಭಾಗದ ಮೊದಲ ಸುತ್ತಿನಲ್ಲಿ ಇಟಲಿಯ ಏಂಜೆಲಾ ಕ್ಯಾರಿನಿ ಕೇವಲ 46 ಸೆಕೆಂಡ್‌ಗಳಲ್ಲಿ ಪಂದ್ಯದಿಂದ ಹಿಂದೆ ಸರಿದು ರಿಂಗ್‌ನಲ್ಲೇ ಕಣ್ಣಿರು ಸುರಿಸಿದರು. ಖೇಲ್ಿ ಏಟಿಗೆ ಕ್ಯಾರಿನಿ ತತ್ತರಿಸಿದ ಬೆನ್ನಲ್ಲೇ ಲಿಂಗ ವಿವಾದ ತಾರಕಕ್ಕೇರಿದೆ.
ಈ ಮುನ್ನ 2022ರ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಇಮಾನೆ ಖೇಲ್ಿರನ್ನು ಲಿಂಗತ್ವ ಅರ್ಹತಾ ಪರೀಕ್ಷೆಯಲ್ಲಿ ವಿಲರಾಗಿದ್ದಕ್ಕೆ ಅನರ್ಹಗೊಳಿಸಿ, ಪದಕ ಹಿಂಪಡೆಯಲಾಗಿತ್ತು. ಆದರೆ ಪ್ಯಾರಿಸ್‌ನಲ್ಲಿ ಅವರಿಗೆ ಮಹಿಳಾ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ನಡುವಿನ ಜಟಾಪಟಿಯಿಂದ ಇಮಾನೆ ಈ ಲಾಭ ಪಡೆದಿದ್ದಾರೆ. ಆದರೆ ವಿವಾದದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇಮಾನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಮಾನೆ ಖೇಲಿಫ್ ಎಕ್ಸ್ ವೈ (ಪುರುಷರ) ಕ್ರೋಮೋಸೋಮುಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಸಾಮಾನ್ಯ ಮಹಿಳೆಯರು ಎಕ್ಸ್‌ಎಕ್ಸ್ ಕ್ರೋಮೋಸೋಮುಗಳನ್ನು ಹೊಂದಿರುತ್ತಾರೆ.
‘ಮೂಗಿನ ಭಾಗಕ್ಕೆ ಬಲಬಾದ ಪೆಟ್ಟು ಬಿದ್ದ ಬಳಿಕ ರಕ್ತ ಸುರಿಯಲು ಆರಂಭಿಸಿತು. ಜತೆಗೆ ನನ್ನ ವೃತ್ತಿ ಜೀವನದಲ್ಲಿ ಎದುರಾಳಿಯ ಪಂಚ್ ವಿಭಿನ್ನ ಅನುಭವ ನೀಡಿತು. ಆದ್ದರಿಂದ ಪಂದ್ಯದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಎದುರಾಳಿಗೆ ಮಹಿಳಾ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಇದೆಯೂ, ಇಲ್ಲವೆಂಬುದರ ಬಗ್ಗೆ ನಾನು ನಿರ್ಧರಿಸುವುದಿಲ್ಲ ಎಂದು ಕ್ಯಾರಿನಿ ಪಂದ್ಯದ ಬಳಿಕ ಮಾಧ್ಯಮಗಳಿಗೆ ಇಟಲಿ ಭಾಷೆಯಲ್ಲಿ ಹೇಳಿಕೆ ನೀಡಿದ್ದಾರೆ.