20.8 C
Bangalore
Sunday, December 8, 2019

ಎಸ್​ಐಟಿ ವಶದಿಂದ ಬೇಗ್ ಬಿಡುಗಡೆ: 19ಕ್ಕೆ ಮತ್ತೆ ಬರುವಂತೆ ನೋಟಿಸ್ ಜಾರಿ, ಅಧಿಕಾರಿಗಳ ಪ್ರಶ್ನೆಗೆ ಶಾಸಕರ ಅಸಹಕಾರ

Latest News

ಪತಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಪತ್ನಿಯ ಸೆರೆ

ಕೆಜಿಎಫ್: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಗೈದ ಪತ್ನಿ ಮತ್ತು ಪ್ರಿಯಕರನನ್ನು ಉರಿಗಾಂ...

ಅರಣ್ಯ ಸರ್ವೆಗೆ ಡ್ರೋನ್: ರಾಜ್ಯದಲ್ಲೇ ಮೊದಲ ಬಾರಿಗೆ ಹೊಸನಗರದಲ್ಲಿ ಪ್ರಾಯೋಗಿಕವಾಗಿ ಜಾರಿ

ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಪ್ರದೇಶ ಗುರುತಿಸಲು ಪ್ರಾಯೋಗಿಕವಾಗಿ ಹೊಸನಗರ ತಾಲೂಕಿನಲ್ಲಿ ಅರಣ್ಯ ಇಲಾಖೆ ಡ್ರೋನ್ (ಏರಿಯಲ್) ಸರ್ವೆ ನಡೆಸಿದ್ದು, ಯಶಸ್ವಿಯಾದರೆ ಇಲಾಖೆಯ...

ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ

ಚಿತ್ರದುರ್ಗ: ಸಾಮಾಜಿಕ ಸಾಮರಸ್ಯ,ರಾಷ್ಟ್ರೀಯ ಏಕತೆಗೆ ತಿಂಗಳಿಗೂ ಹೆಚ್ಚು ಕಾಲ ಜಿಲ್ಲಾದ್ಯಂತ ನಡೆದ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣೆಗೆ ಶನಿವಾರ ಚಿತ್ರದುರ್ಗದ ಹಳೇ...

ಭಗವದ್ಗೀತೆ ಪಠಣದಿಂದ ಅಜ್ಞಾನ ದೂರ

ಚಿಕ್ಕಬಳ್ಳಾಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಾತ್ಮಗಾಂಧಿ ಸೇವಾಟ್ರಸ್ಟ್ ಸಂಸ್ಥಾಪಕ ಶ್ರೀ ವಿನಯ್ ಗುರೂಜಿ ಅಭಿಪ್ರಾಯಪಟ್ಟರು. ತಾಲೂಕಿನ...

ನಾಯಿಂದ್ರಹಳ್ಳಿ ವಿವಾದಿತ ರಸ್ತೆ ಸರ್ವೇ

ಚಿಂತಾಮಣಿ: ತಾಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಿಂದ್ರಹಳ್ಳಿ ರಸ್ತೆ ವಿವಾದ ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳು ಸರ್ವೇ ನಂ.2 ವ್ಯಾಪ್ತಿಯ 5.04...

ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳು ಮಾಜಿ ಸಚಿವ ರೋಷನ್ ಬೇಗ್​ರನ್ನು 14 ಗಂಟೆ ವಿಚಾರಣೆ ನಡೆಸಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ನೀಡಿರುವ ನೋಟಿಸ್​ನಂತೆ ಜು.19ಕ್ಕೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.

ಸೋಮವಾರ ರಾತ್ರಿ 10 ಗಂಟೆಯಲ್ಲಿ ವಿಶೇಷ ವಿಮಾನದಲ್ಲಿ ಪ್ರಯಾಣಿಸಲು ಮುಂದಾಗಿದ್ದ ಬೇಗ್​ರನ್ನು, ಎಸ್​ಐಟಿ ತನಿಖಾಧಿಕಾರಿ ಎಸ್.ಗಿರೀಶ್ ನೇತೃತ್ವದ ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು 2 ಗಂಟೆ ವಿಐಪಿ ಲಾಂಜ್​ನಲ್ಲಿ ವಿಚಾರಣೆ ನಡೆಸಿತ್ತು. ಬಳಿಕ ಬಿಗಿ ಪೊಲೀಸ್ ಭದ್ರತೆಯಲ್ಲಿ ಸಿಐಡಿ ಕಚೇರಿಗೆ ಕರೆತರಲಾಯಿತು. ಮನ್ಸೂರ್ ಖಾನ್ ಜತೆ ನಂಟಿನ ಕುರಿತು ಕೆದಕಿದ ಅಧಿಕಾರಿಗಳ ಪ್ರಶ್ನೆಗೆ ರೋಷನ್ ಬೇಗ್ ಉತ್ತರಿಸದೆ ಅಸಹಕಾರ ತೋರಿಸಿದ್ದಾರೆ.

ನನ್ನ ಮತಕ್ಷೇತ್ರ ಶಿವಾಜಿನಗರದಲ್ಲಿ ಮನ್ಸೂರ್ ಖಾನ್ ದೊಡ್ಡ ಚಿನ್ನಾಭರಣ ಮಾರಾಟ ಮಳಿಗೆ ಆರಂಭಿಸಿದ್ದ. ಅಲ್ಲದೆ, ನನ್ನ ಸಮುದಾಯದಲ್ಲಿ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ. ಹೀಗಾಗಿ ಕ್ಷೇತ್ರದ ಶಾಸಕನಾದ ನನಗೆ ಮನ್ಸೂರ್ ಪರಿಚಯವಾಗಿತ್ತು. ಆದರೆ, ಆತನ ನಡುವೆ ಹಣಕಾಸಿನ ವ್ಯವಹಾರ ಇರಲಿಲ್ಲ ಎಂದು ಬೇಗ್ ಹೇಳಿರುವುದಾಗಿ ತಿಳಿದು ಬಂದಿದೆ.

ಈ ಮಾತಿಗೆ ಅಧಿಕಾರಿಗಳು, ನಿಮ್ಮ ಮಗನ ಮದುವೆಗೆ ಆಗಮಿಸಿದ್ದ ಅತಿಥಿಗಳಿಗೆ ಪಂಚತಾರಾ ಹೋಟೆಲ್​ನಲ್ಲಿ ಆತಿಥ್ಯವನ್ನು ಐಎಂಎ ಕಂಪನಿ ನೋಡಿಕೊಂಡಿದೆ. ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯ ಕೆಲ ಸಾಮಾಜಿಕ ಕೆಲಸಗಳು ಹಾಗೂ ಚುನಾವಣಾ ವೆಚ್ಚಗಳಿಗೆ ಮನ್ಸೂರ್ ಹಣ ವಿನಿಯೋಗಿಸಿರುವ ಕುರಿತು ದಾಖಲೆಗಳು ಸಿಕ್ಕಿವೆಯಲ್ಲ ಎಂದು ಪ್ರಶ್ನಿಸಿದ್ದರು. ಅದಕ್ಕೆ ಬೇಗ್, ನನಗೆ ಮಗನ ಮದುವೆ ಮಾಡಲಾರದಷ್ಟು ದಾರಿದ್ರ್ಯಲ್ಲ. ರಾಜಕೀಯವಾಗಿ ತುಳಿಯಲು ವಿರೋಧಿಗಳು ಸಂಚು ರೂಪಿಸಿದ್ದಾರೆ. ಮನ್ಸೂರ್ ಜತೆ ಬಾಂಧವ್ಯವಿದೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಸ್ಪಷ್ಪಪಡಿಸಿದ್ದಾರೆ.

ಈ ವೇಳೆ ಶಾಸಕತ್ವದ ವಿಚಾರಣೆ ಕುರಿತು ಸ್ಪೀಕರ್ ಕರೆದಿದ್ದಾರೆ ಎಂದು ತನಿಖಾಧಿಕಾರಿಗಳ ಗಮನಕ್ಕೆ ರೋಷನ್ ಬೇಗ್ ತಂದಿದ್ದಾರೆ. ಈ ಬಗ್ಗೆ ಸ್ಪೀಕರ್ ಕಚೇರಿ ಸಂರ್ಪಸಿ ಮಾಹಿತಿ ಪಡೆದ ಅಧಿಕಾರಿಗಳು ಮೊದಲೇ ನೋಟಿಸ್ ನೀಡಿದಂತೆ ಜು.19ಕ್ಕೆ ವಿಚಾರಣೆ ಬರುವಂತೆ ಸೂಚಿಸಿ ಮಧ್ಯಾಹ್ನ ಕಳುಹಿಸಿದ್ದಾರೆ ಎಂದು ಎಸ್​ಐಟಿ ಮೂಲಗಳು ತಿಳಿಸಿವೆ.

ಯಾರ ಮೇಲೂ ಆರೋಪ ಮಾಡಲ್ಲ: ಸೋಮವಾರ ಪುಣೆಗೆ ತೆರಳಬೇಕಿತ್ತು. ಅದಕ್ಕಾಗಿ ಕೆಐಎಗೆ ಹೋದಾಗ ಎಲೊ್ಲೕ ಓಡಿ ಹೋಗುತ್ತೇನೆ ಎಂದು ಕೆಲವರು ನನ್ನ ವಿರುದ್ಧ ಪಿತೂರಿ ಮಾಡಿ ಎಸ್​ಐಟಿ ಅಧಿಕಾರಿಗಳ ಮೂಲಕ ತಡೆದರು. ಈ ಬಗ್ಗೆ ಯಾರ ಮೇಲೂ ಆರೋಪ ಮಾಡಲ್ಲ. ಕೆಲವರಿಗೆ ಇನ್ನೂ ಗೊಂದಲವಿದೆ. ಜು.19ಕ್ಕೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಆ ಪತ್ರ ನನ್ನ ಬಳಿಯೇ ಇದೆ. ಅಂದು ವಿಚಾರಣೆಗೆ ಹಾಜರಾಗುವುದಾಗಿ ಬೇಗ್ ತಿಳಿಸಿದ್ದಾರೆ.

24 ಗಂಟೆ ಕಳೆದರೂ ಸುಳಿವಿಲ್ಲ: 24 ಗಂಟೆ ಒಳಗಾಗಿ ಭಾರತಕ್ಕೆ ಬರುವುದಾಗಿ ಹೇಳಿಕೆ ನೀಡಿದ್ದ ಬಹುಕೋಟಿ ವಂಚನೆ ಪ್ರಕರಣದ ಐಎಂಎ ಕಂಪನಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ಮಾತು ತಪ್ಪಿದ್ದಾನೆ.

ಬಿಜೆಪಿಗೆ ಕುಟುಕಿದ ಕೆಪಿಸಿಸಿ

ರೋಷನ್ ಬೇಗ್ ಮೇಲೆ ಬಿಜೆಪಿಯವರಿಗೆ ಏಕೆ ಅಷ್ಟು ಪ್ರೀತಿ ಅಂತ ಗೊತ್ತಿಲ್ಲ ಎಂದು ಕೆಪಿಸಿಸಿ ವ್ಯಂಗ್ಯವಾಡಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಐಎಂಎ ಪ್ರಕರಣದಲ್ಲಿ ಬಿಜೆಪಿ ಹೋರಾಟ ನಡೆಸಿತ್ತು. ಈಗ ರೋಷನ್ ಬೇಗ್ ಅವರನ್ನು ಬಿಜೆಪಿಯವರೇ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿಸಿದ್ದಾರೆ ಎಂದು ಲೇವಡಿ ಮಾಡಿದರು. ಬೇಗ್ ಅವರಿಗೆ ವಿಶೇಷ ವಿಮಾನ ಸಿದ್ಧಮಾಡಿ, ಬಿಜೆಪಿ ನಾಯಕರೇ ಜತೆಗೆ ನಿಂತಿದ್ದರು. ಇದರಿಂದ ಬಿಜೆಪಿ ಯಾವ ಮಟ್ಟಕ್ಕೆ ಇಳಿದಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅವರಿಗೆ ಅಧಿಕಾರ ಹಿಡಿಯಬೇಕು ಎಂಬುದೊಂದೇ ಉದ್ದೇಶ ಎಂದು ಟೀಕಿಸಿದರು.

ರೋಷನ್ ಬೇಗ್ ಬಂಧಿ ಸಲು ಸ್ಪೀಕರ್ ಅನುಮತಿ ಪಡೆಯಬೇಕೆಂಬ ನಿಯಮವಿಲ್ಲ. ವಶಕ್ಕೆ ಪಡೆದ 24 ಗಂಟೆಯೊಳಗೆ ಕಚೇರಿಗೆ ಮಾಹಿತಿ ನೀಡಬೇಕು. ಆ ಕೆಲಸವನ್ನು ಎಸ್​ಐಟಿ ಮಾಡಿದೆ.

| ರಮೇಶ್​ಕುಮಾರ್ ಸ್ಪೀಕರ್

ಸಿಎಂ ಆರೋಪಕ್ಕೆ ಬಿಜೆಪಿ ಗರಂ

ಶಾಸಕ ರೋಷನ್ ಬೇಗ್ ಜತೆ ಬಿ.ಎಸ್. ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಸಂತೋಷ್ ಪ್ರಯಾಣಿಸುತ್ತಿದ್ದರು ಎಂಬ ಸಿಎಂ ಆರೋಪವನ್ನು ರಾಜ್ಯ ಬಿಜೆಪಿ ಘಟಕ ತಳ್ಳಿಹಾಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ಆಡಳಿತ ಯಂತ್ರ ಬಳಸಿಕೊಳ್ಳುತ್ತಿದ್ದಾರೆ. ಎಸ್​ಐಟಿಗೆ ಹಾಜರಾಗಲು ಬೇಗ್ ಅವರಿಗೆ ಜು.19ರಂದು ದಿನ ನಿಗದಿಯಾಗಿತ್ತು. ಆದರೆ ಬೇಗ್ ಅವರನ್ನು ಸೋಮವಾರ ಬಂಧಿಸಿರುವ ರೀತಿ ಮೈತ್ರಿ ಸರ್ಕಾರ ಶಾಸಕರನ್ನು ಯಾವ ರೀತಿ ಬ್ಲಾ್ಯಕ್​ವೆುೕಲ್ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಬೇಗ್ ತಲೆಮರೆಸಿಕೊಳ್ಳಲು ಸಹಾಯ ಮಾಡುತ್ತಿರುವ ಬಿಜೆಪಿ ಬಣ್ಣ ಬಯಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಬೇಗ್ ಬಂಧನ ಬೆನ್ನಲ್ಲೇ ಟ್ವೀಟ್ ಮಾಡಿದ್ದರು. ಕುಮಾರಸ್ವಾಮಿ ಆರೋಪಕ್ಕೆ ಗರಂ ಆಗಿರುವ ಬಿಜೆಪಿ ರಾಜ್ಯ ಘಟಕ ಸಿಎಂ ವಿರುದ್ಧ ಬರೋಬ್ಬರಿ ಐದು ಸರಣಿ ಟ್ವೀಟ್ ಮಾಡಿದೆ.

ಸಿಎಂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತ ರಾಜ್ಯವನ್ನು ತಪು್ಪ ದಾರಿಗೆ ಎಳೆಯುತ್ತಿದ್ದಾರೆ. ಎಸ್​ಐಟಿ ದಾಳಿ ವೇಳೆ ಬೇಗ್ ಜತೆ ಇನ್ಯಾರೂ ಇರಲಿಲ್ಲ. ನಿಜಾಂಶ ಅರಿಯಲು ಬೋರ್ಡಿಂಗ್ ಪಾಸ್ ಮತ್ತು ಸಿಸಿಟಿವಿ ಫೂಟೇಜ್​ಗಳನ್ನು ಪರಿಶೀಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸಿಎಂ ಕುಮಾರಸ್ವಾಮಿ ಜು.12ರಂದು ರೋಷನ್ ಬೇಗ್ ಅವರನ್ನು ತಾಜ್ ವೆಸ್ಟ್ ಎಂಡ್​ನಲ್ಲಿ ಭೇಟಿಯಾಗಿದ್ದರು. ಒಂದು ವೇಳೆ ಬೇಗ್ ಆರೋಪಿಯಾಗಿದ್ದರೆ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಏಕೆ? ಎಂದು ಪ್ರಶ್ನಿಸಿರುವ ಬಿಜೆಪಿ, ಮುಖ್ಯಮಂತ್ರಿಯವರು ಈ ನಿಗೂಢ ಭೇಟಿಯನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದೆ.

ಬೇಗ್ ಅವರು ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡುವವರೆಗೂ ಎಲ್ಲವೂ ಸರಿಯಿತ್ತು. ಬೆಂಬಲ ವಾಪಸ್ ಪಡೆದ ತಕ್ಷಣವೇ ಶಾಸಕರನ್ನು ಬ್ಲಾ್ಯಕ್ ಮೇಲ್ ಮಾಡಲು ಆರಂಭಿಸಿದರು ಎಂದು ಆರೋಪಿಸಿದೆ.

ಐಎಂಎ ಆರೋಪಿ ಮನ್ಸೂರ್ ಖಾನ್ ಜತೆ ಸಿಎಂ ಕುಮಾರಸ್ವಾಮಿ ಉಪಾಹಾರ ಸೇವಿಸುತ್ತಿರುವ ಫೋಟೋ ಟ್ವೀಟ್ ಮಾಡಿರುವ ಬಿಜೆಪಿ ಘಟಕ, ಎಚ್.ಡಿ.ಕುಮಾರಸ್ವಾಮಿ ಕಾವಲಿನಲ್ಲೇ ಐಎಂಎ ಪ್ರಕರಣದ ಆರೋಪಿ ರಾಜ್ಯದಿಂದ ಪಾರಾಗಿರುವುದನ್ನು ಜೆಡಿಎಸ್ ಮೊದಲು ಬಹಿರಂಗಗೊಳಿಸಬೇಕು. ಐಎಂಎ ಆರೋಪಿಯೊಂದಿಗೆ ಕುಮಾರಸ್ವಾಮಿ ಬಿರಿಯಾನಿ ಸೇವಿಸುತ್ತಿರುವ ಚಿತ್ರ ಆರೋಪಿ ಪರಾರಿಗೆ ಹೇಗೆ ಯೋಜನೆ ರೂಪಿಸಿರಬೇಕು ಎಂಬುದರ ಬಗ್ಗೆ ಅನೇಕ ಉತ್ತರಗಳನ್ನು ನೀಡುತ್ತಿದೆ ಎಂದಿದೆ.

ಸರ್ಕಾರದ ವಿರುದ್ಧ ಕಿಡಿಕಾರಿದ ರೋಷನ್

ಎಸ್​ಐಟಿ ಅಧಿಕಾರಿಗಳು ಸೋಮವಾರ ರಾತ್ರಿ ಏಕಾಏಕಿ ವಿಚಾರಣೆ ನಡೆಸಿದ್ದು ರಾಜಕೀಯ ಪಿತೂರಿ. ನಾನೇನೂ ದೇಶ ಬಿಟ್ಟು ಓಡಿ ಹೋಗುತ್ತಿರಲಿಲ್ಲ ಎಂದು ರೋಷನ್ ಬೇಗ್ ಕಿಡಿಕಾರಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹಜ್ ಯಾತ್ರೆ ಹೋಗಬೇಕೆಂದು ನಿರ್ಧರಿಸಿದ್ದೆ, ಹೋಗಲು ಆಗಲಿಲ್ಲ. ಸೋಮವಾರ ಪೂನಾಗೆ ಹೊರಟಿದ್ದೆ. ರಾಜಕೀಯ ಪಿತೂರಿಯಿಂದ ಹೋಗಲು ಸಾಧ್ಯ ಆಗಲಿಲ್ಲ. ಎಸ್​ಐಟಿ ಅಧಿಕಾರಿಗಳು ಕರೆದುಕೊಂಡು ಬಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏನು ಬೇಕಾದರೂ ವಿಚಾರಣೆ ಮಾಡಲಿ. ನಾನು ಪೂರ್ತಿ ಸಹಕಾರ ಕೊಡುತ್ತೇನೆ. ಇದೀಗ ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಯಾವಾಗ ಕರೆದರೂ ವಿಚಾರಣೆಗೆ ಬರುತ್ತೇನೆ ಎಂದು ಸಿಐಡಿ ಕಚೇರಿ ಬಳಿ ತಿಳಿಸಿದರು.

ಸರ್ಕಾರಕ್ಕೆ ಉಭಯ ಸಂಕಟ

ರೋಷನ್ ಬೇಗ್ ಮೇಲೆ ಎಸ್​ಐಟಿ ಅಸ್ತ್ರ ಪ್ರಯೋಗಿಸಿ ಹಿಡಿದಿಡುವ ಪ್ರಯತ್ನ ಮಾಡಿರುವ ಸರ್ಕಾರಕ್ಕೆ ಉಭಯ ಸಂಕಟ ಎದುರಾಗಿದೆ. ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಬೇಗ್ ಬೆಂಬಲ ಮೈತ್ರಿ ಸರ್ಕಾರಕ್ಕೆ ಅಗತ್ಯವಾಗಿ ಬೇಕು. ಆದರೆ, ಬೇಗ್ ಈಗಾಗಲೇ ರಾಜೀನಾಮೆ ನೀಡಿದ್ದು ಮನವೊಲಿಕೆ ಕಾರ್ಯಕ್ಕೆ ಕಾಂಗ್ರೆಸ್ ಮುಖಂಡರು ಪ್ರಯತ್ನಿಸಿಲ್ಲ. ಜೆಡಿಎಸ್ ಕಡೆಯಿಂದ ಬೇಗ್ ಮನವೊಲಿಸುವ ಕಾರ್ಯ ನಡೆದಿತ್ತು. ಈ ನಡುವೆ ಬೇಗ್ ಬಿಜೆಪಿ ಸೇರುತ್ತಾರೆಂಬ ಆತಂಕಕ್ಕೆ ಒಳಗಾದ ಸರ್ಕಾರ ಎಸ್​ಐಟಿ ಮೂಲಕವೇ ಅವರನ್ನು ಬಗ್ಗಿಸುವ ಯತ್ನ ನಡೆಸಿದೆ. ಆದರೆ ಈ ಕ್ರಮವನ್ನು ಬೇಗ್ ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಜು. 19ರಂದು ವಿಚಾರಣೆಗೆ ಬರುತ್ತೇನೆಂದು ಎಸ್​ಐಟಿಗೆ ತಿಳಿಸಿದ್ದರೂ, ರಾಜಕೀಯ ಪಿತೂರಿ ನಡೆದಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈಗ ಬೇಗ್ ಅವರನ್ನು ಮನವೊಲಿಸುವುದು ಹೇಗೆ ಎಂಬ ಪ್ರಶ್ನೆ ಮೈತ್ರಿ ಪಕ್ಷದ ನಾಯಕರಲ್ಲಿದೆ.

ಸರ್ಕಾರ-ಎಸ್​ಐಟಿಗೆ ನೋಟಿಸ್

ಬೆಂಗಳೂರು: ಐಎಂಎ ಬಹುಕೋಟಿ ರೂ. ಹಗರಣದ ತನಿಖೆ ವಿಚಾರವಾಗಿ ತಮ್ಮ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು ಹಾಗೂ ಮುಕ್ತ ಓಡಾಟಕ್ಕೆ ಅಡ್ಡಿಪಡಿಸಬಾರದು ಎಂದು ಎಸ್​ಐಟಿಗೆ ನಿರ್ದೇಶಿಸಲು ಕೋರಿ ರೋಷನ್ ಬೇಗ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮಂಗಳವಾರ ಬೇಗ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಅವರಿದ್ದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಹಾಗೂ ಎಸ್​ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜು.30ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಶ್ಯಾಮಸುಂದರ್ ವಾದಿಸಿ, ಬೇಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ಸ್ಪೀಕರ್ ಈವರೆಗೂ ಅಂಗೀಕರಿಸಿಲ್ಲ. ಈ ಮಧ್ಯೆ ಐಎಂಎ ವಂಚನೆ ಪ್ರಕರಣ ಸಂಬಂಧ ಅವರ ವಿರುದ್ಧ ಎಸ್​ಐಟಿ ವಿಚಾರಣೆಗೆ ಮುಂದಾಗಿದೆ. ಅದಕ್ಕೆ ಸಹಕರಿಸಲು ಸಿದ್ಧ ಎಂದು ಶಾಸಕರು ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗಲು ಎಸ್​ಐಟಿ 2 ಬಾರಿ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ್ದರಿಂದ ಅರ್ಜಿದಾರರು ಕಾಲಾವಕಾಶ ಕೋರಿದ್ದರು. ಅದರಂತೆ, ಜು.19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಮತ್ತೆ ನೋಟಿಸ್ ನೀಡಿದೆ. ಆದರೆ, ಜು.15ರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇಗ್​ಅವರನ್ನು ಎಸ್​ಐಟಿ ಬಲವಂತವಾಗಿ ವಶಕ್ಕೆ ಪಡೆದಿದೆ ಎಂದು ಆಕ್ಷೇಪಿಸಿದರು.

ಎಸ್​ಐಟಿ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಆಗುತ್ತಿದಂತೆ ಮಧ್ಯಾಹ್ನದ ವೇಳೆಗೆ ಬೇಗ್ ಅವರನ್ನು ಮನೆಗೆ ಕಳಿಸಿಕೊಡಲಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಿರುವ ಎಸ್​ಐಟಿ ಅಧಿಕಾರಿಗಳಾದ ರವಿಕಾಂತೇಗೌಡ, ಗಿರೀಶ್ ಸರ್ಕಾರದ ಅಡಿಯಾಳುಗಳಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ನ್ಯಾಯಪೀಠ, ಅರ್ಜಿದಾರರನ್ನು ಈಗಾಗಲೇ ಬಿಟ್ಟು ಕಳುಹಿಸಲಾಗಿದೆಯಲ್ಲ, ಮತ್ತೇನು ಬೇಕು ಎಂದು ಪ್ರಶ್ನಿಸಿತು.

Stay connected

278,744FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...