ಮೈತ್ರಿ ಸರ್ಕಾರದಲ್ಲಿ ನಾನಿರುವುದು ದುರದೃಷ್ಟಕರ: ಎಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ನಾನು ಇರುವುದು ನನ್ನ ದುರದೃಷ್ಟ. ನನಗೆ ಜನರ ನೀರೀಕ್ಷಯಂತೆ ಕಾರ್ಯಕ್ರಮ ಕೊಡಲು ಆಸೆ ಇದೆ. ಆದರೆ ಅದನ್ನು ಕೊಡಲು ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮ ರೂಪಿಸಲು ನನಗೆ ಕಾಂಗ್ರೆಸ್ ಬಿಡುತ್ತಿಲ್ಲ ಎಂದು ಪರೋಕ್ಷವಾಗಿ ಕೈ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಹಿಂದೆ‌ 20 ತಿಂಗಳು ಅಧಿಕಾರ ಇತ್ತು. ಆಗಲೂ ಕೂಡ ಸರ್ಕಾರ ಬೀಳುತ್ತದೆ ಎಂದು 17,18 ತಿಂಗಳು ಲೆಕ್ಕ ಹಾಕುತ್ತಿದ್ದರು. ಈಗ ಸರ್ಕಾರದ ರಚನೆ ಆದ ಮೊದಲ ದಿನದಿಂದಲೂ ಸರ್ಕಾರ ಉರುಳೇ ಹೋಯ್ತು, ಬಿದ್ದೇ ಹೋಯ್ತು ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಉರುಳುತ್ತೆ ಎನ್ನುವ ಈ ರಾಜಕೀಯ ಧಾರಾವಾಹಿ ‌ನೋಡಿದ ಜನರಂತೂ ಹೌದೇನೋ ಅಂದುಕೊಳ್ಳುತ್ತಿದ್ದಾರೆ. ಆದರೆ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)