ಖಿನ್ನತೆಗೆ ಒಳಗಾಗಿದ್ದೇನೆ…ಸಾವಿಗೆ ತುಂಬ ಹತ್ತಿರವಾಗುತ್ತಿದ್ದೇನೆಂದೆನ್ನಿಸುತ್ತಿದೆ: ಬಾಲಿವುಡ್​ ನಟನ ನೋವು

ಮುಂಬೈ: ಬಾಲಿವುಡ್​ನ ಪ್ರಸಿದ್ಧ ನಿರ್ದೇಶಕ ಯಶ್​ ಚೋಪ್ರಾ ಅವರ ಪುತ್ರ ಆದಿತ್ಯ ಚೋಪ್ರಾ ತೀವ್ರ ಖಿನ್ನತೆಗೆ ಜಾರಿದ್ದು ಅದರಿಂದ ಹೊರಬರಲು ಸಾಧ್ಯವೇ ಆಗುತ್ತಿಲ್ಲವಂತೆ. ಹೀಗಂತ ಅವರೇ ಟ್ವೀಟ್​ ಮಾಡಿದ್ದಾರೆ.

ಪ್ಯಾರ್​ ಇಂಪಾಸಿಬಲ್, ಮೇರೆ ಯಾರ್​ ಕಿ ಶಾದೀ ಹೈ, ಧೂಮ್​, ಮೊಹಬತೀನ್​ ಸಿನಿಮಾಗಳಲ್ಲಿ ನಟಿಸಿದ್ದ ಉದಯ್​ ಚೋಪ್ರಾ, ನಿರ್ದೇಶಕ ಆದಿತ್ಯ ಚೋಪ್ರಾ ಅವರ ಸಹೋದರ. ಅವರೀಗ ಸ್ವಲ್ಪವೂ ಖುಷಿಯಾಗಿ ಇಲ್ಲವಂತೆ. ಆರಾಮಾಗಿ ಇರಲು ಎಷ್ಟೇ ಪ್ರಯತ್ನಿಸಿದರೂ ವಿಫಲರಾಗುತ್ತಿದ್ದಾರಂತೆ.

ಶುಕ್ರವಾರ ಸಂಜೆ ಟ್ವೀಟ್​ ಮಾಡಿದ ಅವರು, ನಾನು ಚೆನ್ನಾಗಿ ಇಲ್ಲ ಎಂದು ಹೇಳಿದ್ದಾರೆ. ನಾನು ಕೆಲವು ತಾಸುಗಳ ಕಾಲ ಟ್ವಿಟರ್​ ಅಕೌಂಟ್​ನ್ನು ಡಿ-ಆ್ಯಕ್ಟಿವೇಟ್​ ಮಾಡಿದ್ದೆ. ಆಗ ನನಗೆ ಸಾವಿಗೆ ತುಂಬ ಹತ್ತಿರವಾದಂತೆ ಭಾಸವಾಯಿತು. ಸಾಮಾಜಿಕ ಜಾಲತಾಣಗಳಿಂದ ವಿಮುಖವಾಗುವುದು ಆತ್ಮಹತ್ಯೆ ಮಾಡಿಕೊಳ್ಳಲು ಇರುವ ಸುಲಭ ದಾರಿ. ಅತಿ ಶೀಘ್ರದಲ್ಲೇ ಇದನ್ನು ಮಾಡುತ್ತೇನೆ ಎಂದು ಬರೆದುಕೊಂಡಿದ್ದರು. ಆದರೆ, ಈ ಟ್ವೀಟ್​ನ್ನು ನಂತರ ಡಿಲೀಟ್​ ಮಾಡಿದ್ದಾರೆ ಎನ್ನಲಾಗಿದೆ.

ಉದಯ್​ ಚೋಪ್ರಾ ಹೀಗೆಲ್ಲ ಟ್ವೀಟ್​ ಮಾಡಿದ್ದು ಇದೇ ಮೊದಲ ಬಾರಿಗೆ ಅಲ್ಲ. ಕಳೆದ 2018ರಲ್ಲಿ ತಾವು ಪ್ರೀತಿಯಲ್ಲಿ ಉತ್ಸಾಹ ಕಳೆದುಕೊಂಡಿದ್ದೇನೆ ಎಂದು ಟ್ವೀಟ್​ ಮಾಡಿದ್ದರು.