ಜನೆವರಿಯಲ್ಲಿ ಐಲೈಫ್ ಗ್ಲೋಬಲ್ ಕಾನ್​ಕ್ಲೇವ್, ಮೈಸೂರಿನಲ್ಲಿ ಸಮಾವೇಶ, ವೇದಿಕೆ ಟ್ರಸ್ಟಿ ಅವಿನಾಶ ಪಾಳೇಗಾರ ಮಾಹಿತಿ

blank

ಹುಬ್ಬಳ್ಳಿ: ಉದ್ಯಮಶೀಲತೆ ಬೆಳೆಸಿ, ಯುವ ಜನರ ಸಾಮಾಜಿಕ- ಆರ್ಥಿಕ ಸಬಲೀಕರಣದ ಉದ್ದೇಶ ಹೊಂದಿರುವ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ (ಐಎಲ್​ವೈಎಫ್) ಹುಬ್ಬಳ್ಳಿ ಶಾಖೆ ಸಭೆಯಲ್ಲಿ ಗ್ಲೋಬಲ್ ಬಿಜಿನೆಸ್ ಕಾನ್​ಕ್ಲೇವ್ ತೃತೀಯ ಸಮಾವೇಶ ಸಿದ್ಧತೆ ಕುರಿತು ರ್ಚಚಿಸಲಾಯಿತು ಎಂದು ವೇದಿಕೆ ಟ್ರಸ್ಟಿ ಅವಿನಾಶ ಪಾಳೇಗಾರ ತಿಳಿಸಿದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರುವ ಜನೆವರಿ 17ರಿಂದ ಮೂರು ದಿನಗಳವರೆಗೆ ಮೈಸೂರಿನ ಮಹಾರಾಜ ಮೈದಾನದಲ್ಲಿ ಜಾಗತಿಕ ಸಮಾವೇಶ ನಡೆಯಲಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಮತ್ತು ಮಹಿಳಾ ಉದ್ಯಮಶೀಲತೆ ಕುರಿತು ಸಮಾವೇಶ ಬೆಳಕು ಚೆಲ್ಲಲಿದೆ. ಜತೆಗೆ ಸಂಸ್ಕೃತಿ, ಪರಂಪರೆ, ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಹಾಗೂ ವಿವಿಧ ವಿಷಯ ತಜ್ಞರು ಸಮಾವೇಶದಲ್ಲಿ ಪಾಲ್ಗೊಳ್ಳುವರು. ದೇಶ, ವಿದೇಶದಿಂದ ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

ಹುಬ್ಬಳ್ಳಿಯ ಸಭೆಯಲ್ಲಿ ಸುಮಾರು 121 ಸದಸ್ಯರು ಭಾಗಿಯಾಗಿದ್ದರು. ಪರಸ್ಪರ ವ್ಯಾಪಾರ, ವ್ಯವಹಾರದ ಮಾತುಕತೆಗಳು ನಡೆದವು. ಸುಮಾರು 2.2 ಕೋಟಿ ರೂ. ವ್ಯವಹಾರ ಆಗಿದೆ. ಮೂರು ಸಾವಿರ ಸದಸ್ಯರನ್ನು ಹೊಂದಿರುವ ವೇದಿಕೆಯಿಂದ ಪ್ರತಿ ತಿಂಗಳು ಇಂತಹ ಸಭೆಗಳನ್ನು ನಡೆಸಲಾಗುತ್ತಿದೆ. ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ತಿಳಿಸಿದರು.

ಬೆಂಗಳೂರು, ತುಮಕೂರು, ಮೈಸೂರು, ಚಾಮರಾಜನಗರ, ಹುಬ್ಬಳ್ಳಿ ಶಾಖೆಗಳನ್ನು ಹೊಂದಿರುವ ವೇದಿಕೆ ಮುಂದಿನ ದಿನಗಳಲ್ಲಿ ಬೆಳಗಾವಿ, ಶಿವಮೊಗ್ಗ, ಹಾಸನದಲ್ಲಿ ಹೊಸ ಶಾಖೆ ತೆರೆಯಲಿದೆ. ಶಾಖೆಗಳ ಮೂಲಕ ವೇದಿಕೆ ಸದಸ್ಯರು ಪರಸ್ಪರ ಭೇಟಿ, ತಮ್ಮ ಸಂಪರ್ಕ ಸರಣಿ ವೃದ್ಧಿಸಲು ನಿಯಮಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಳೆದ 11 ವರ್ಷಗಳಲ್ಲಿ ಸದಸ್ಯರ ಮಧ್ಯೆ ಸುಮಾರು 5 ಸಾವಿರ ಕೋಟಿ ರೂ. ವ್ಯವಹಾರ ನಡೆದಿದೆ ಎಂದರು.

ವೇದಕೆಯ ಧಾರ್ವಿುಕ ಟ್ರಸ್ಟ್​ನ ಪ್ರಗತಿಪರ ಯುವ ಉದ್ಯಮಿಗಳು ಚಿತ್ರದುರ್ಗ ಹಾಗೂ ಹರಿಹರದಲ್ಲಿ ಕೌಶಲ ಕೇಂದ್ರಗಳನ್ನು ಸ್ಥಾಪಿಸಿದ್ದು, ಇದರಲ್ಲಿ 1,800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆದು ಉದ್ಯೋಗಸ್ಥರಾಗಿದ್ದಾರೆ. ಪ್ರಕೃತಿ ಸಂರಕ್ಷಣೆಗೆ ಸಸಿ ನೆಡುವುದು, ಆರೋಗ್ಯ ತಪಾಸಣೆ, ಹೆಣ್ಣು ಮಕ್ಕಳ ಶಿಕ್ಷಣ ಮುಂತಾದವುಗನ್ನು ಕೈಗೊಳ್ಳುತ್ತ ಬರಲಾಗಿದೆ. ಉದ್ಯಮಿಗಳ ಅನುಕೂಲಕ್ಕಾಗಿ ಐಪ್ಲೇ, ಐಲೀಡ್, ಐಬಾಂಡ್, ಐನೆಟ್, ಐಶೇರ್, ಐಬ್ರಾ್ಯಂಡ್, ಐಕೇರ್, ಐಎಕ್ಸಪೋಸ್ ಮುಂತಾದ ಕಾರ್ಯಕ್ರಮ ನಡೆಸುವ ಗುರಿ ಇದೆ ಎಂದರು.

ಪದಾಧಿಕಾರಿಗಳು:

ಹುಬ್ಬಳ್ಳಿ ಶಾಖೆಗೆ ಜಗದೀಶ ನಾಯಕ್ ಅಧ್ಯಕ್ಷ, ಗುರು ಅಂಗಡಿ ಉಪಾಧ್ಯಕ್ಷ, ಸುಜೀತ್ ಹಕ್ಕಪಕ್ಕಿ ಕಾರ್ಯದರ್ಶಿ, ನಾಗರಾಜ ಮಹಾಕವಿ ಖಜಾಂಚಿ, ಕಾರ್ಯಕಾರಿ ಸಮಿತಿಗೆ ಶರಣ್ ಪಾಟೀಲ್, ನಂದೀಶ ಯಾವಗಲ್ಲ, ಯಶಸ್ವಿನಿ ಪಾವಲಿ, ಸಂತೋಷ ಕೊಟ್ಲಿ, ಗುರುನಗೌಡ ಕುರಾಗುಂದ್, ಗಿರೀಶ ಮತ್ತಿಕೊಪ್ಪ, ಚನ್ನು ಹೊಸಮನಿ, ಶಶಿಧರ ಶೆಟ್ಟರ್ ಅವರು ಅಧಿಕಾರ ವಹಿಸಿಕೊಂಡರು.

Share This Article

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…