ಸಿದ್ಧಗಂಗಾ ಶ್ರೀಗಳ ಉಸಿರಾಟದಲ್ಲಿ ಸ್ವಲ್ಪ ಚೇತರಿಕೆ: ಹೆಲ್ತ್‌ ಬುಲೆಟಿನ್‌ ಬಿಡುಗಡೆ

ತುಮಕೂರು: ಸಿದ್ಧಗಂಗಾ ಶ್ರೀಗಳ ಉಸಿರಾಟದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಶ್ರೀಗಳು ಸ್ವಂತ ಉಸಿರಾಟ ನಡೆಸುತ್ತಿದ್ದಾರೆ ಎಂದು ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ವೈದ್ಯ ಡಾ. ರವೀಂದ್ರ ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಾಣುತ್ತಿಲ್ಲ. ಪ್ರೋಟಿನ್ ಸಮಸ್ಯೆ ಇನ್ನು ಕೂಡ ಗುಣಮುಖವಾಗಿಲ್ಲ. ಇಂದು ಕೆಲವೊಂದು ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ತುಂಬಾ ದಿನಗಳಿಂದ ನೀರಿನ ಅಹಾರವನ್ನೇ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಕೆಲವೊಂದು ವಿಟಮಿನ್ಸ್‌ಗಳನ್ನು ಕೊಡುತ್ತಿದ್ದೇವೆ. ಇದರಿಂದ ಕಾನ್ಸಿಯಸ್ ಲೆವೆಲ್ ಹೆಚ್ಚುತ್ತದೆಯಾ ಎಂಬುದನ್ನು ನೋಡಬೇಕಿದೆ. ಪೂಜೆ ಮಾಡುವ ಸಮಯದಲ್ಲಿ ಮಾತ್ರ ಶ್ರೀಗಳು ಸ್ಪಂದಿಸುತ್ತಾರೆ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಶಿವಪೂಜೆ ಸಮಯದಲ್ಲಿ ಹೆಚ್ಚು ಕಾನ್ಶಿಯಸ್ ಆಗಿದ್ದಾರೆ ಎಂದು ಹೇಳಿದರು.

ರಕ್ತದಲ್ಲಿ ಪ್ರೋಟಿನ್ ಅಂಶ ಉತ್ಪತ್ತಿಯಾಗುತ್ತಿಲ್ಲ ಕಡಿಮೆ ಆಗಿದೆ. ಪ್ರೋಟಿನ್ ಅಂಶ ಜಾಸ್ತಿಯಾದರೆ ಚೇತರಿಕೆ ಕಾಣುತ್ತಾರೆ. ವೆಂಟಿಲೇಟರ್ ತೆಗೆದಿದ್ದೆವು. 2 ಗಂಟೆ ಸ್ವತಃ ಊಸಿರಾಟ ನಡೆಸಿದ್ದಾರೆ. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಾಗ ತೊಂದರೆಯಾಗುತ್ತದೆ. ನೀರನ್ನೂ ಕೂಡ ತೆಗೆಯುತ್ತಿದ್ದೇವೆ. ದೇಹಕ್ಕೆ ಬೇಕಾದ ಅಲ್ಬುಮಿನ್ ಉತ್ಪತ್ತಿಯಾಗುತ್ತಿಲ್ಲ. 6 ವಾರಗಳಿಂದ ಚಿಕಿತ್ಸೆ ನೀಡುತ್ತಿದ್ದೇವೆ. ವಯೋಸಹಜವಾಗಿರುವುದರಿಂದ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಕಣ್ಣು ಬಿಡುತ್ತಾರೆ, ಕೈ ಕಾಲು ಆಡಿಸುತ್ತಿದ್ದಾರೆ ಎಂದರು.

ನರರೋಗ ತಜ್ಞ ಡಾ.ವೆಂಕಟರಮಣ ಮಾತನಾಡಿ, ನ್ಯೂಟ್ರಿಷಿಯನ್ ಹೆಚ್ಚಲು ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ. ಇದನ್ನು ಮಾಡುತ್ತಿದ್ದೇವೆ. ನ್ಯೂರಿಯಾಲಿಜಿಕಲಿ ಅವರು ಅಷ್ಟು‌ ಚೆನ್ನಾಗಿ ಸ್ಪಂದಿಸುತ್ತಿಲ್ಲ. ದಿನಕ್ಕೆ ಎರಡು ಮೂರು ಬಾರಿ‌ ಕಣ್ಣು ಬಿಡುತ್ತಾರೆ, ಸ್ಪಂದಿಸುತ್ತಾರೆ. ಮೊದಲನೆಯದು ಅವರು ಅವರ ಆಲ್ಪಮಿನ್ ಪ್ರಮಾಣ ಹೆಚ್ಚಾಗಬೇಕು. ಸ್ವಂತ ಶಕ್ತಿಯಿಂದ ಉಸಿರಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)