ವಿಜಯಪುರ : ಅನ್ಯ ಪುರುಷನೊಂದಿಗೆ ಹೊಂದಿದ ಅಕ್ರಮ ಸಂಬಂಧ ಬಹಿರಂಗವಾದ ಹಿನ್ನೆಲೆಯಲ್ಲಿ ಮಹಿಳೆ ತನ್ನ ಮಗಳ ಜತೆ ಕೃಷ್ಣಾ ನದಿ ಹಿನ್ನೀರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಯಲ್ಲಮ್ಮನ ಬೂದಿಹಾಳ ಗ್ರಾಮದ ಸಾಯಿರಾಬಾನು ಚಪ್ಪರಬಂದ್ ಎಂಬ ಮಹಿಳೆ ತನ್ನ 7 ವರ್ಷದ ಮಗಳ ಜತೆ ರೈಲಿನಿಂದ ಕೃಷ್ಣಾ ನದಿ ಹಿನ್ನೀರಿಗೆ ಹಾರಿದ್ದರು. ಇದನ್ನು ನೋಡಿದ ಸ್ಥಳೀಯರು ಕೂಡಲೇ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದರು, ಆದರೆ ಬಾಲಕಿಯ ಶವ ಪತ್ತೆಯಾಗಿರಲಿಲ್ಲ. ಹುಡುಕಾಟದ ನಂತರ ನದಿ ದಡದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೂ ಮೃತಪಟ್ಟಿದ್ದ. ಹೀಗಾಗಿ ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ವಿಜಯಪುರ ರೈಲ್ವೆ ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)