ಕೋಲಾರ: ಅಕ್ರಮ ಸಂಬಂಧದ ವಿಷಯ ಬಹಿರಂಗಪಡಿಸಿದ ವ್ಯಕ್ತಿಯನ್ನು ಬರ್ಬರ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಕೆಜಿಎಫ್ ತಾಲೂಕಿನ ಪೂವಗಾನಹಳ್ಳಿ ಗ್ರಾಮದ ನಿವಾಸಿ ನಾರಾಯಣಸ್ವಾಮಿ(52 ವರ್ಷ) ಕೊಲೆಯಾದ ವ್ಯಕ್ತಿ. ಅಭಿಷೇಕ್ ಕೊಲೆ ಆರೋಪಿ.
ಅಭಿಷೇಕ್ಗೆ ಗ್ರಾಮದ ಮಹಿಳೆಯೊಬ್ಬಳ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯವನ್ನು ಕಣ್ಣಾರೆ ಕಂಡಿದ್ದ ನಾರಾಯಣಸ್ವಾಮಿ, ಅವನಿಗೆ ಬುದ್ದಿವಾದ ಹೇಳಿದ್ದ, ಈ ವೇಳೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಳು. ಆ ಕಾರಣದಿಂದ ತಮ್ಮ ಅಕ್ರಮ ಸಂಬಂಧವನ್ನು ಬಹಿರಂಗ ಪಡಿಸಿದ ನಾರಾಯಣಸ್ವಾಮಿಯನ್ನು ಅಭಿಷೇಕ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ಕೆನ್ನೆಗೆ ಬಾರಿಸಿದ ಮಾಜಿ ಶಾಸಕ! ಸಿದ್ದರಾಮಯ್ಯ ಪ್ರತಿಕೃತಿ ದಹನ
ಬೈಕ್ ಸವಾರನನ್ನು ಬಲಿ ಪಡೆದ ರಸ್ತೆಗುಂಡಿ; ಎಚ್ಚೆತ್ತುಕೊಂಡಿತು ಮಹಾನಗರ ಪಾಲಿಕೆ!