ಪತಿಯ ಜೀವಕ್ಕೆ ಕುತ್ತು ತಂದ ಪತ್ನಿಯ ಅಕ್ರಮ ಸಂಬಂಧ: ಆರೋಪಿ ಪತ್ನಿಯಿಂದಲೇ ಬಯಲಾಯ್ತು ಸತ್ಯ

ಬೆಂಗಳೂರು: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಆನೇಕಲ್​ನ ಇಗ್ಗಲೂರು ಸಮೀಪದಲ್ಲಿ ಘಟನೆ ನಡೆದಿದೆ. ಬಾಗೇಪಲ್ಲಿ ಮೂಲದ ಶ್ರೀನಿವಾಸ್ ಮೃತ ವ್ಯಕ್ತಿ. ಆರೋಪಿಗಳಾದ ಪತ್ನಿ ಪ್ರತಿಭಾ ಹಾಗೂ ಪ್ರಿಯಕರ ಬಾಲಕೃಷ್ಣ ಶ್ರೀನಿವಾಸ್​ರನ್ನು ಕೊಲೆ ಮಾಡಿ ಬೊಮ್ಮಸಂದ್ರದ ಕೆರೆಗೆ ಶವವನ್ನು ಎಸೆದಿದ್ದರು.

ಈ ಬಗ್ಗೆ ಆರೋಪಿ ಬಾಲಕೃಷ್ಣನ ಪತ್ನಿ ಲಕ್ಷ್ಮಿದೇವಿಯು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಶವವನ್ನು ಇಂದು ಬೆಳಿಗ್ಗೆ ಹೊರ ತೆಗೆದು ಮರಣೊತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಗಳನ್ನು ಸೂರ್ಯಸಿಟಿ‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರಿಂದ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)

ಶ್ರೀನಿವಾಸ್​

Leave a Reply

Your email address will not be published. Required fields are marked *