ದೀರ್ಘಕಾಲದ ಪ್ರೇಯಸಿ ಬಾಯಿಗೆ ಬಟ್ಟೆ ಹಾಕಿ ಕೊಲೆ ಮಾಡಿದ ಪ್ರಿಯಕರ ಬಳಿಕ ನೇರವಾಗಿ ಹೋಗಿದ್ದು ಇಲ್ಲಿಗೆ…

ಬೆಂಗಳೂರು: ದೀರ್ಘಕಾಲದ ಪ್ರೇಯಸಿಯ ಬಾಯಿಗೆ ಬಟ್ಟೆ ಹಾಕಿ ಕೊಲೆ ಮಾಡಿದ್ದ ಪ್ರಿಯಕರ ಇದೀಗ ಬಾಣಸವಾಡಿ ಇನ್ಸ್‌ಪೆಕ್ಟರ್ ವಿರೂಪಾಕ್ಷರ ಮುಂದೆ ಸತ್ಯ ಬಿಚ್ಚಿಟ್ಟಿದ್ದಾನೆ.

ಮೇರಿ ಕೊಲೆಯಾದ ದುರ್ದೈವಿ ಮಹಿಳೆ. ಗಂಡನ ಕಳೆದುಕೊಂಡು 15 ವರ್ಷಗಳಿಂದ ಒಬ್ಬಂಟಿಯಾಗಿದ್ದ ಮೇರಿ, ತನ್ನ ಜತೆ ಕೂಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಜತೆ ಸಂಬಂಧ ಹೊಂದಿದ್ದಳು. ಇತ್ತೀಚಿಗೆ ಮತ್ತೆ ಬೇರೊಬ್ಬ ವ್ಯಕ್ತಿಯೊಂದಿಗೆ ಮೇರಿ ಸ್ನೇಹ ಬೆಳಸಿದ್ದಳು. ಇದರಿಂದಾಗಿ ಕುಪಿತಗೊಂಡ ಪ್ರಕಾಶ್ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾನೆ.

ಹೆಣ್ಣೂರು ಠಾಣೆಯಲ್ಲಿ ಮಹಿಳೆ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಪೊಲೀಸರು ಬೆನ್ನತ್ತಿದ್ದರು.

31ನೇ ತಾರೀಕು ಪಾಳು ಮನೆಗೆ ಕರೆದುಕೊಂಡು ಹೋಗಿದ್ದ ಆರೋಪಿ ಮದ್ಯ ಸೇವನೆ ಮಾಡಿಸಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.

ಸದ್ಯ ಕೊಲೆ ಪ್ರಕರಣದಲ್ಲಿ ಪ್ರಕಾಶ್‌ನನ್ನು ಬಂಧಿಸಿರುವ ಬಾಣಸವಾಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *