ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ವಶ

ಮದ್ದೂರು: ತಾಲೂಕಿನ ಅರಗಿನಮೇಳೆ ಶಿಂಷಾನದಿ ಪಾತ್ರದಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ್ದ 2 ಲಕ್ಷ ರೂ. ಮೌಲ್ಯದ ಮರಳನ್ನು ಕೊಪ್ಪ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ದಾಳಿ ಮಾಡಿದ ಕೊಪ್ಪ ಪಿಎಸ್‌ಐ ಡಿ.ಆರ್.ಜಯಸ್ವಾಮಿ ಹಾಗೂ ಗ್ರಾಮಲೆಕ್ಕಿಗ ಸಿದ್ದೇಗೌಡ, ಅಕ್ರಮವಾಗಿ ಸಂಗ್ರಹ ಮಾಡಿದ್ದ 5 ಟ್ರ್ಯಾಕ್ಟರ್ ಹಾಗೂ 2 ಟಿಪ್ಪರ್ ಲಾರಿ ಮರಳನ್ನು ವಶಪಡಿಸಿಕೊಂಡದ್ದಾರೆ.

ಜತೆಗೆ ಮರಳು ರಾಶಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *