22.5 C
Bengaluru
Sunday, January 19, 2020

ಕಡಲ್ಕೊರೆತ ಕಾಮಗಾರಿಗಳೇ ಅಕ್ರಮ!

Latest News

ಕುಸಿದು ಬಿದ್ದ ಕಾಲುವೆ ಸಂಪರ್ಕ ಸೇತುವೆ ಪರಿಶೀಲನೆ

ಮುದ್ದೇಬಿಹಾಳ: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ...

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ...

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

<ದ.ಕ, ಉಡುಪಿ ಜಿಲ್ಲೆಯ ಹಲವೆಡೆ ಅವೈಜ್ಞಾನಿಕ ಯೋಜನೆ * ಸಿಆರ್‌ಜಡ್ ನಿಯಮ ಉಲ್ಲಂಘನೆ>

ಪ್ರಕಾಶ್ ಮಂಜೇಶ್ವರ ಮಂಗಳೂರು
ಕೆಲವೇ ಕಾಮಗಾರಿಗಳು ಹೊರತುಪಡಿಸಿದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಕರಾವಳಿಯಲ್ಲಿ ನಡೆಯುವ ಬಹುಪಾಲು ಸಮುದ್ರ ಕೊರೆತ ಕಾಮಗಾರಿಗಳು ಅಕ್ರಮವಾಗಿವೆ!

ಕರಾವಳಿ ನಿಯಂತ್ರಣ ವಲಯ(ಸಿಆರ್‌ಜಡ್) ಅನುಮತಿ ಇಲ್ಲದೆಯೇ ಉಳ್ಳಾಲ, ಸೋಮೇಶ್ವರ, ಉಚ್ಚಿಲ, ಸಸಿಹಿತ್ಲು, ಮುಂಡ ಮತ್ತಿತರ ಪ್ರದೇಶಗಳ ಪರಿಸರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿ ನಡೆಯುತ್ತಿದೆ.

ಕಾಮಗಾರಿ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳೇ ಸರ್ಕಾರದ ನಿಯಮ ಉಲ್ಲಂಘಿಸಿವೆ. ಸಣ್ಣ ನೀರಾವರಿ ಇಲಾಖೆಯಿಂದ ಸುಲ್ತಾನ್ ಬತ್ತೇರಿ ಸಮೀಪ ಕಾಂಡ್ಲವನ ನಾಶಗೊಳಿಸುವ ರೀತಿ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ಇತ್ತೀಚೆಗೆ ಪರಿಸರ ಇಲಾಖೆ ಅಧಿಕಾರಿಗಳೇ ನಿಲ್ಲಿಸಿದ್ದಾರೆ. ಉಳ್ಳಾಲ ನಗರಸಭೆ ಕೂಡ ಸಿಆರ್‌ಜಡ್ ಅನುಮತಿ ಇಲ್ಲದೆಯೇ ಸಮುದ್ರ ತೀರದಲ್ಲಿ ವಸತಿ ನಿರ್ಮಿಸಲು ನಿರಾಕ್ಷೇಪಣಾ ಪತ್ರ ಒದಗಿಸುತ್ತಿದೆ.

ತಡೆಗೋಡೆಯೇ ಅವೈಜ್ಞಾನಿಕ: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯೇ ಸ್ಪಷ್ಟವಾಗಿ ಸೂಚಿಸಿರುವಂತೆ ಸಮುದ್ರ ಕೊರೆತ ತಡೆಯಲು ತಡೆಗೋಡೆ ಪರಿಹಾರವಲ್ಲ. ಇಲಾಖೆಯು ಸಮುದ್ರ ಕೊರೆತ ತಡೆಯಲು ಕೈಗೊಳ್ಳಬಹುದಾದ 12 ಕ್ರಮಗಳನ್ನು ಸೂಚಿಸಿದ್ದು, ಅದರಲ್ಲಿ ಕೊನೆಯ 12ನೇ ಆಯ್ಕೆಯಾಗಿ ಅನಿವಾರ್ಯ ಸಂದರ್ಭದಲ್ಲಿ ಸೂಕ್ತ ಸಮರ್ಥನೆ ನೀಡಿ ತಡೆಗೋಡೆ ನಿರ್ಮಿಸಬಹುದು ಎಂದು ತಿಳಿಸಿದೆ.

ಆದರೆ ಈ ಭಾಗದಲ್ಲಿ ವರ್ಷಂಪ್ರತಿ ಸಮುದ್ರಕ್ಕೆ ತಡೆಗೋಡೆ, ಪರಿಹಾರ ಹಾಗೂ ಪುನರ್ವಸತಿ ಹೆಸರಿನಲ್ಲಿ ಕೋಟ್ಯಂತರ ರೂ. ಸರ್ಕಾರ ವ್ಯಯಿಸುತ್ತಿದೆ. ಸಮುದ್ರ ಸೇರಿದ ಕಲ್ಲುಗಳಿಗೆ ಲೆಕ್ಕವೇ ಇಲ್ಲ.

ಏನು ಮಾಡಬಹುದು?: ವರದಿಯಲ್ಲಿ ಸೂಚಿಸಿರುವ ಆದ್ಯತೆಯ ಆಯ್ಕೆಗಳನ್ನು ಈ ರೀತಿ ಸಂಕ್ಷೇಪಿಸಬಹುದು-
ಪ್ರಥಮ ಹಂತದಲ್ಲಿ ಮರಳು ದಿಬ್ಬದಲ್ಲಿ ಬಳ್ಳಿ, ಪೊದೆಗಿಡಗಳನ್ನು ಬೆಳೆಸುವುದು. ಮರಳು ಸ್ಥಳಾಂತರ. ಕಾಮಗಾರಿ ಅಥವಾ ವಿವಿಧ ಸಂದರ್ಭಗಳಲ್ಲಿ ಲಭ್ಯವಾಗುವ ಮರಳನ್ನು ಅಗತ್ಯವಿರುವ ಕಡೆ ಸ್ಥಳಾಂತರಿಸುವುದು. ಸಮುದ್ರದ ನೀರಿನ ತೆರೆಗಳು ಭೂಮಿ ಕಡೆ ಸಂಚರಿಸಿ ಬ್ರೇಕ್ ಆಗುವಲ್ಲಿ ನೀರಿನ ತಳದಲ್ಲಿ ಕೃತಕ ಫ್ಲಾಟ್‌ಫಾರ್ಮ್ ನಿರ್ಮಿಸುವುದು. ರೀಫ್, ಗ್ರೋಯ್ನೋಸ್(ಸಮುದ್ರಕ್ಕೆ ಅಭಿಮುಖವಾಗಿ ಉದ್ದಕ್ಕೆ ಬ್ರೇಕ್ ವಾಟರ್ ಮಾದರಿ) ರಚನೆ.

ಸಮುದ್ರದ ಅಲೆಗಳು ದಡ ತಲುಪುವುದರೊಳಗೆ ದುರ್ಬಲವಾಗಿ ಕಡಲ್ಕೊರೆತ ತಪ್ಪುತ್ತದೆ. ಅದಕ್ಕಾಗಿ ಸಮುದ್ರ ಬದಿಯಿಂದ ನೆಲದ ಕಡೆ ಏರುಗತಿಯಲ್ಲಿ ಸಾಗುವಂತೆ ಸೂಕ್ತ ಸಸ್ಯ ಸಂಪತ್ತು ಬೆಳೆಸುವುದು. ಉದಾ- ಮೊದಲು ಬಳ್ಳಿ, ಬಳಿಕ ಪೊದೆ, ಕಾಂಡ್ಲಾವನ, ಗಾಳಿಮರ ಇತ್ಯಾದಿ.

ಇಲಾಖೆಯ ವರದಿ ಭೂವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಕರಾವಳಿ ಸಂಶೋಧನೆ ಕೇಂದ್ರ (ಚೆನ್ನೈ) ಸಿದ್ಧಪಡಿಸಿದ ನ್ಯಾಷನಲ್ ಅಸಸ್‌ಮೆಂಟ್ ಆಫ್ ಶೋರ್‌ಲೈನ್ ಚೇಂಜಸ್ ಅಲೋಂಗ್ ಇಂಡಿಯನ್ ಕೋಸ್ಟ್ ಕಳೆದ ಜುಲೈ (2018) ಯಲ್ಲಿ ಬಿಡುಗಡೆಗೊಳಿಸಿದ ವರದಿಗೆ ಪೂರಕವಾಗಿದೆ.

ಹಳೇ ಹಡಗು, ರೈಲು ಬೋಗಿ ಬಳಕೆ: ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ವರದಿಗೆ ಪೂರಕವಾಗಿ ಸಮುದ್ರದಿಂದ ನೀರಿನ ಅಲೆಗಳು ಬಲವಾಗಿ ದಡದತ್ತ ಧಾವಿಸುವ ಸಂದರ್ಭ ನೀರಿನ ತೆರೆಗಳು ಬಲವಾಗಿ ಬ್ರೇಕ್ ಆಗುವ ಸ್ಥಳದಲ್ಲಿ ನೀರಿನ ಅಡಿಭಾಗದಲ್ಲಿ ಒಂದು ರಚನೆ ನಿರ್ಮಿಸಬೇಕು. ಕೃತಕ ರಚನೆ ಸೃಷ್ಟಿಯ ಬದಲು ನಿರುಪಯುಕ್ತ ಹಳೇ ಹಡಗು ಅಥವಾ ಹಳೇ ರೈಲು ಬೋಗಿಗಳನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಮುಳುಗಿಸಬಹುದು. ಇದರಿಂದ ಸಮುದ್ರದಿಂದ ಬರುವ ಬಿರುಸಿನ ಅಲೆಗಳು ಈ ಪ್ರದೇಶದಲ್ಲಿ ದುರ್ಬಲಗೊಂಡು ಶಾಂತವಾಗಿ ನೆಲಭಾಗವನ್ನು ಸ್ಪರ್ಶಿಸುವುದು. ಸಮುದ್ರದ ಅಲೆಗಳನ್ನು ದಡ ತಲುಪುವ ಮೊದಲೇ ದುರ್ಬಲಗೊಳಿಸುವುದು ಮುಖ್ಯ ಎಂದು ಪರಿಸರ ಇಲಾಖೆ ಪ್ರಾದೇಶಿಕ ನಿರ್ದೇಶಕ ಡಾ.ದಿನೇಶ್ ಕುಮಾರ್ ಎಂದು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಇದು ಮೀನು ಸಂತಾನೋತ್ಪತ್ತಿಗೆ ಕೂಡ ಪೂರಕ. ಹಡಗು ಅಥವಾ ರೈಲು ಬೋಗಿ ಒಳಗೆ ಬಲೆ ಹಾಕಲು ಅಸಾಧ್ಯವಾದ ಕಾರಣ ಆ ಪ್ರದೇಶದಲ್ಲಿ ಮೀನುಗಳು ನಿರಾತಂಕವಾಗಿ ಓಡಾಡಬಹುದು. ಸಂತಾನ ವೃದ್ಧಿ ಮಾಡಬಹುದು. ಮಂಗಳೂರು ತಣ್ಣೀರುಬಾವಿ ಬಳಿ ಸಮುದ್ರ ಬದಿ ಡೆಂಡನ್ ಹಡಗು ಮುಳುಗಿದ ಕಡೆ ಕಡಲ್ಕೊರೆತ ನಿಂತಿದ್ದು, ಬೀಚ್ ಅಭಿವೃದ್ಧಿಗೊಂಡಿದೆ ಎಂದವರು ಉದಾಹರಣೆ ನೀಡುತ್ತಾರೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...