ಬೆಂಗಳೂರು: ಅರೆಕಾಲಿಕ ನೌಕರಿ, ಸಾಲ ಕೊಡಿಸುವುದಾಗಿ ನಂಬಿಸಿ ಆಧಾರ್ ಮತ್ತು ಪಾನ್ ಕಾರ್ಡ್ ಪಡೆಯುವರ ಮೇಲೆ ಎಚ್ಚರವಹಿಸಿ. ಇಲ್ಲವಾದರೆ ಕಾನೂನು ಸಂಕಷ್ಟಕ್ಕೆ ಸಿಲುಕಬೇಕಾದಿತ್ತು.
ಇಲ್ಲೊಬ್ಬ ಯುವಕನಿಗೆ ಅರೆಕಾಲಿಕ ನೌಕರಿ ಕೊಡುವುದಾಗಿ ನಂಬಿಸಿ ಆಧಾರ್, ಪಾನ್ ಕಾರ್ಡ್ ಪಡೆದು ವಿವಿಧ ಬ್ಯಾಂಕ್ಗಳಲ್ಲಿ ಖಾತೆ ತೆರೆದು 2.22 ಕೋಟಿ ರೂ. ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ.
ಎಚ್ಎಎಲ್ ಬಳಿಯ ಶಾಸಿನಗರ ನಿವಾಸಿ ಸೈಯದ್ ಮಾಝ್, ಮೋಸಕ್ಕೆ ಒಳಗಾದ ಯುವಕ. ಈತ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಕೂನಮ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಯದ್, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ 2024ರ ೆಬ್ರವರಿಯಲ್ಲಿ ಕೂನಮ್ ಕರೆ ಮಾಡಿ ಕೆಲಸ ಕೊಡುವುದಾಗಿ ಆಮಿಷವೊಡ್ಡಿದ್ದಾನೆ.
ಆನ್ಲೈನ್ನಲ್ಲಿ ಇಂಟರ್ವ್ಯೆ ಮಾಡಿದ ಕೂನಮ್, ಎಚ್ಎಸ್ಆರ್ ಲೇಔಟ್ನಲ್ಲಿ ಇರುವ ಹೋಟೆಲ್ನಲ್ಲಿ ಸೈಯದ್ ಭೇಟಿ ಮಾಡಿ ಮತ್ತೊಂದು ಇಂಟರ್ ವ್ಯೆ ನಡೆಸಿದ. ಸ್ವಲ್ಪ ಹೊತ್ತಿಗೆ ಅಲ್ಲಿಗೆ ಸ್ಮಾಲ್ ೈನಾನ್ಸ್ ಬ್ಯಾಂಕ್ ವ್ಯವಸ್ಥಾಪಕ ಬಂದು ಆಧಾರ್ ಮತ್ತು ಪಾನ್ ಕಾರ್ಡ್ ಪಡೆದು ಕೆಲವೊಂದು ಬ್ಯಾಂಕ್ ದಾಖಲೆಗಳಿಗೆ ಸಹಿ ಪಡೆದಿದ್ದರು. ಇದಾದ ಮೇಲೆ ಸೈಯದ್ಗೆ ತಿಂಗಳಿಗೆ 3 ಸಾವಿರ ರೂ. ಜಮೆ ಮಾಡುತ್ತಿದ್ದರು. ಆತನಿಂದ ಯಾವುದೇ ಕೆಲಸ ಮಾಡಿಸುತ್ತಿರಲಿಲ್ಲ. ರಾಜಾಜಿನಗರ, ಎಚ್ಎಸ್ಆರ್ ಲೇಔಟ್, ಮಲ್ಲೇಶ್ವರ, ಹಲಸೂರು, ಕಗ್ಗಲಿಪುರ, ಜಯನಗರ ಸೇರಿ ನಗರದಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ಹಲವು ಕಂಪನಿಗಳ ಹೆಸರಿನಲ್ಲಿ ಖಾತೆಗಳನ್ನು ತೆರೆದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದರೆ.
ಇತ್ತೀಚೆಗೆ ಸೈಯದ್ಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿಯೊಂದು ಬ್ಯಾಂಕ್ನಲ್ಲಿ ಖಾತೆ ತೆರೆಯಬೇಕಾದರೆ ಹೊಸ ಕಂಪನಿ ಹೆಸರಿನಲ್ಲಿ ತೆರೆದಿದ್ದು, ಎಲ್ಲ ಕಂಪನಿಗಳಲ್ಲಿ ಸೈಯದ್ನ್ನು ಸಹ ನಿರ್ದೇಶಕನಾಗಿ ಮಾಡಿಕೊಂಡಿದ್ದಾರೆ. ಇದರಲ್ಲಿ ಕೂನಮ್ ಅಲ್ಲದೆ, ಹಲವು ಆರೋಪಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಒಟ್ಟಾರೆ 2.22 ಕೋಟಿ ರೂ. ಅಕ್ರಮ ವಹಿವಾಟು ನಡೆದಿದ್ದು, ಈ ಬಗ್ಗೆ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.