ಸಾಸ್ವೆಹಳ್ಳಿ: ಹೋಬಳಿಯ ಲಿಂಗಾಪುರ ಸಮೀಪ ಶುಕ್ರವಾರ ಬೆಳಗ್ಗೆ ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಶಪಡಿಸಿಕೊಂಡು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಪ್ಪಿಸಿರುವುದಾಗಿ ಹೊನ್ನಾಳಿ ಪೊಲೀಸ್ ಠಾಣೆಯ ಪಿಐ (ಸಿಪಿಐ) ಸುನಿಲ್ ಕುಮಾರ್ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ತುಂಗಭದ್ರಾ ನದಿ ಪಾತ್ರದಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಇಟ್ಟು, ಸಾಗಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ ಎಂದರು.
ಪೊಲೀಸ್ ತಂಡದಲ್ಲಿ ಪಿಐ ಸುನಿಲ್‌ಕುಮಾರ್, ಎಎಸ್‌ಐ ಹರೀಶ್, ಪೇದೆಗಳಾದ ಪ್ರಸನ್ನಕುಮಾರ್, ಮಂಜುನಾಥ್ ಇದ್ದರು.
ಈ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಡಿ ರಶ್ಮಿ ವಿಜಯವಾಣಿಗೆೆ ಪ್ರತಿಕ್ರಿಯಿಸಿ, ಅಕ್ರಮವಾಗಿ ಮರಳು ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಪ್ರತಿ ಲಾರಿಗೆ 35 ಸಾವಿರ ರೂ.ನಂತೆ ಎರಡು ಲಾರಿಗೆ ಒಟ್ಟು 70 ಸಾವಿರ ರೂ. ಸಾವಿರ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.