ತಾಯಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಸ್ನೇಹಿತನಿಗೆ ಚಿತ್ರಹಿಂಸೆ ನೀಡಿ ಕೊಲೆ

ಕಲಬುರಗಿ: ತನ್ನ ತಾಯಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಸ್ನೇಹಿತನನ್ನು ಅಪಹರಿಸಿ ಒಂದು ವಾರ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ಮಿಜಬುರಗಿ ಬಡಾವಣೆಯಲ್ಲಿ ನಡೆದಿದೆ.

ಶಂಶುದ್ದಿನ್ ಲಂಗಡೆ (32) ಮೃತ ದುರ್ದೈವಿ. ಮೊಹಮ್ಮದ್​​ ರಫೀಕ್​​ ಹಾಗೂ ಆತನ ಇಬ್ಬರು ಸ್ನೇಹಿತರು ಕೊಲೆ ಮಾಡಿರುವ ಆರೋಪಿಗಳು. ತನ್ನ ತಾಯಿಯೊಂದಿಗೆ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದ ಶಂಶುದ್ದಿನ್ ವಿರುದ್ಧ ಕೋಪಗೊಂಡ ರಫೀಕ್​​ ತನ್ನ ಇಬ್ಬರು ಸ್ನೇಹಿತರೊಂದಿಗೆ ಶಂಶುದ್ದಿನ್​​​​ನನ್ನು ಜೂನ್​​ 8 ರಂದು ಅಪಹರಿಸಿದ್ದನು. ಬಳಿಕ ಯಾವುದೋ ಹಳೆ ಮನೆಯಲ್ಲಿ ಒಂದು ವಾರ ಕೂಡಿಹಾಕಿ ಚಿತ್ರಹಿಂಸೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಶಂಶುದ್ದಿನ್ ಲಂಗಡೆ ಸೊಲ್ಲಾಪುರ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾನೆ. ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *