22.5 C
Bengaluru
Sunday, January 19, 2020

ಪಶ್ಚಿಮ ಘಟ್ಟ ಬುಡದಲ್ಲಿ ಕೆಂಪುಕಲ್ಲು ಗಣಿ

Latest News

ಶೇ.95ರಷ್ಟು ಮಕ್ಕಳಿಗೆ ಲಸಿಕೆ

ಮೈಸೂರು: ಮಕ್ಕಳನ್ನು ಮಾರಕ ಪೊಲೀಯೋ ಕಾಯಿಲೆಯಿಂದ ದೂರವಿಡಲು ಜಿಲ್ಲೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯನ್ನು ಪೊಲೀಯೋ ಮುಕ್ತಗೊಳಿಸಲು ಪಣತೊಟ್ಟಿರುವ ಆರೋಗ್ಯ...

ಎಂ.ಎಸ್​. ಧೋನಿ ಹಿಂದಿಕ್ಕಿದ ವಿರಾಟ್​ ಕೊಹ್ಲಿ: ಕೊಹ್ಲಿಗೆ ಸರಿಸಮಾನಾಗಿ ನಿಂತ ರೋಹಿತ್​ ಶರ್ಮ!

ಬೆಂಗಳೂರು: ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಗೆಲುವು...

ಕುಸಿದು ಬಿದ್ದ ಕಾಲುವೆ ಸಂಪರ್ಕ ಸೇತುವೆ ಪರಿಶೀಲನೆ

ಮುದ್ದೇಬಿಹಾಳ: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ...

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಶ್ರೀಪತಿ ಹೆಗಡೆ ಹಕ್ಲಾಡಿ, ಯಡಮೊಗೆ
ಯಡಮೊಗೆ ಗ್ರಾಮ ಪಂಚಾಯಿತಿ, ಹೊಸಂಗಡಿ ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಪಶ್ವಿಮ ಘಟ್ಟದ ಬುಡದಲ್ಲಿ ನಡೆಯುತ್ತಿರುವ ನೂರಾರು ಕೆಂಪುಕಲ್ಲು ಗಣಿಗಾರಿಕೆ ಪಶ್ಚಿಮ ಘಟ್ಟದ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಜನ ಜಾನುವಾರು, ವನ್ಯಜೀವ ಸಂಕುಲಕ್ಕೂ ಸಂಕಷ್ಟ ತಂದಿದೆ. ಅಪಾಯಕಾರಿ ಕಲ್ಲುಕ್ವಾರಿ ಹೊಂಡದ ಸುತ್ತ ಬೇಲಿ ನಿರ್ಮಿಸಿ, ಅಪಾಯ ಸೂಚಕ ಫಲಕ ಹಾಕಬೇಕು ಎಂಬ ಆದೇಶ ಕಡತಕ್ಕೆ ಸೀಮಿತವಾಗಿದೆ.

ಪಟ್ಟ ಜಾಗ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಸ್ಥಳದಲ್ಲಿ ಕೆಂಪುಕಲ್ಲು ಗಣಿ ನಡೆಯುತ್ತಿದ್ದರೂ ಸಂಬಂಧಪಟ್ಟ ಯಾವುದೇ ಇಲಾಖೆ ಅಕ್ರಮಕ್ಕೆ ಕಡಿವಾಣ ಹಾಕಿಲ್ಲ. ಈ ಅತಿಕ್ರಮದ ಹಿಂದೆ ಇಲಾಖೆಗಳು ಕೈಜೋಡಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೊಸಂಗಡಿ ಚೆಕ್‌ಪೋಸ್ಟ್ ಇದ್ದರೂ ಪ್ರತಿದಿನ ಹತ್ತಾರು ವಾಹನ ಅಕ್ರಮ ಕಲ್ಲು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ.

ರಾಮ್‌ಪೈ ಜಡ್ಡಿನ ಶಾಲಾ ಆವರಣದಲ್ಲೇ ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಗಣಿ ವಿಸ್ತರಿಸಿಕೊಂಡಿದೆ. ಯಡೆಮೊಗೆ ಗ್ರಾಮದ ಎಲ್ಲಿ ನೋಡಿದರೂ ಕಲ್ಲು ತೆಗೆದು ಹೊಂಡಗಳೇ ಕಂಡುಬರುತ್ತವೆ.
ಎಲ್ಲೆಲ್ಲಿ ಗಣಿಗಾರಿಕೆ ತೀವ್ರ

ಗಂಗನಾಡು, ತೂದಳ್ಳಿ, ಕಲ್ಲಾಣ್ಕಿ, ಅರೆಶಿರೂರು, ಶಿರೂರು, ಕಾಲ್ತೂಡು, ಹೇರಂಜಾಲು, ಜಡ್ಕಲ್, ಬೀಸನಪಾರೆ, ಸೆಳಕೋಡು, ಮದೂರು, ನೆಂಪು, ಆಜ್ರಿ, ಕೆರಾಡಿ, ಬೆಳ್ಳಾಲ, ಹೊಸೂರು, ಮೇಲ್‌ಹೊಸೂರು, ಬೋಳಂಬಳ್ಳಿ, ಕಮಲಶಿಲೆ, ಹಳ್ಳಿಹೊಳೆ, ಯಡಮೊಗೆ, ರಾಮ್‌ಪೈಜೆಡ್ಡು, ಕುಮ್ಟಿಬೇರು, ಹೊಸಂಗಡಿ, ಉಳ್ಳೂರು, ಆಲೂರು, ನಾಡಾಗುಡ್ಡೆಯಂಗಡಿ, ವಂಡ್ಸೆ, ಹೆಂಗವಳ್ಳಿ, ತೊಂಬಟ್ಟು, ಬೆಳ್ಳಾಲ, ತಾರಿಬೇರು, ಕಟ್‌ಬೇಲ್ತೂರು, ಹೊಸಂಗಡಿ, ಗಂಗನಾಡು ಮೊದಲಾದೆಡೆ ಕೆಂಪುಕಲ್ಲು ಅಕ್ರಮ ಗಣಿಗಾರಿಕೆ ತೀವ್ರವಾಗಿದೆ.

ಅಕ್ರಮ ರಕ್ಷಣೆಗೆ ಯೂನಿಯನ್: ಅಕ್ರಮ ಕಲ್ಲು ಗಣಿ, ಸಾಗಾಟ ರಕ್ಷಣೆ ಹಿನ್ನೆಲೆಯಲ್ಲೇ ಕಲ್ಲು ಗಣಿಗಾರಿಕೆ ಯೂನಿಯನ್‌ಗಳು ಹುಟ್ಟಿಕೊಂಡಿವೆ. ಅತಿಕ್ರಮ ಕಲ್ಲು ಸಾಗಾಟ ಮಾಡುವ ವಾಹನ ಹಿಡಿದರೆ, ಟಿಪ್ಪರ್ ಮಾಲೀಕರ ಸಂಘ ಗುಟುರು ಹಾಕುತ್ತದೆ. ಪರವಾನಗಿ ಇಲ್ಲದ ಮರಳು ಸಾಗಾಟ ಲಾರಿಗೆ ಅಡ್ಡಿ ಮಾಡಿದರೆ ಟಿಪ್ಪರ್ ರಸ್ತೆಯಲ್ಲಿ ನಿಲ್ಲಿಸಿ ಧರಣಿ ನಡೆಯುತ್ತದೆ. ಹಿಡಿದ ವಾಹನ ಬಿಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡುತ್ತೇವೆ ಎಂದು ಧಮ್ಕಿ ಮೂಲಕ ಬ್ಲಾಕ್‌ಮೇಲ್ ಮಾಡಲಾಗುತ್ತದೆ.

ಅಕ್ರಮ ಗಣಿಗಾರಿಕೆ ಬಗ್ಗೆ ಜಿಲ್ಲಾಧಿಕಾರಿ ಜತೆ ಮಾತನಾಡಿ, ಕಂದಾಯ, ಗಣಿ ಹಾಗೂ ಪೊಲೀಸ್ ಇಲಾಖೆ ಜತೆಯಾಗಿ ಪರಿಶೀಲನೆ ಮಾಡುವ ವ್ಯವಸ್ಥೆ ಮಾಡುತ್ತೇನೆ. ಅಕ್ರಮ ಕಲ್ಲು ಸಾಗಾಟ ಮಾಡುವ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಘಟ್ಟದ ಬುಡದಲ್ಲಿ ಗಣಿಗಾರಿಕೆ ನಡೆಸುವುದು ಅಪಾಯಕಾರಿಯಾಗಿದ್ದು, ಕ್ರಮ ತೆಗೆದುಕೊಳ್ಳುತ್ತೇವೆ.
ನಿಶಾ ಜೇಮ್ಸ್, ಪೊಲೀಸ್ ವರಿಷ್ಠಾಧಿಕಾರಿ ಉಡುಪಿ

ಎಲ್ಲೆಲ್ಲಿ ಸರ್ಕಾರಿ ಜಾಗದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ನೀಡುವಂತೆ ಕಂದಾಯ ಇಲಾಖೆಗೆ ಕೇಳಿದ್ದೇವೆ. ಹೊಸಂಗಡಿ ಚೆಕ್‌ಪೋಸ್ ಸಿಸಿ ಕ್ಯಾಮರಾ ಹಾಳಾಗಿದ್ದು, ದುರಸ್ತಿಗೆ ಸೂಚಿಸಲಾಗಿದೆ. ಜಿಲ್ಲಾಮಟ್ಟದ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಗಣಿ ಬಗ್ಗೆ ಸಭೆಯ ಗಮನ ಸೆಳೆಯಲಾಗುತ್ತದೆ.
ಮಹೇಶ್, ಭೂ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ.

ಅಕ್ರಮ ಕಲ್ಲುಗಣಿ ರಕ್ಷಣೆ ಉದ್ದೇಶದಿಂದ ಕಲ್ಲುಗಣಿ ಯೂನಿಯನ್ ಹುಟ್ಟಿಕೊಂಡಿದೆ. ಅಕ್ರಮದ ವಿರುದ್ಧ ಮಾತನಾಡಿದರೆ ಧ್ವನಿ ಉಡುಗಿಸುವ ಕೆಲಸ ಗಣಿ ಧಣಿಗಳು ಮಾಡುತ್ತಾರೆ. ಗಣಿಗಾರಿಕೆ ಹೊಂಡದ ನೀರು ಅಪಾಯಕಾರಿಯಾಗಿದೆ. ಪಶ್ಚಿಮ ಘಟ್ಟದ ಬುಡದಲ್ಲೇ ಅವ್ಯಾಹತ ಗಣಿ ನಡೆಸುವುದರಿಂದ ಘಟ್ಟದ ಪರ್ವತ ಶ್ರೇಣಿಗೂ ಅಪಾಯ ತಟ್ಟಲಿದೆ.
ಆನಂದ ಕಾರೂರು, ದಸಂಸ ಮುಖಂಡರು, ಉಡುಪಿ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...