17.8 C
Bengaluru
Wednesday, January 22, 2020

ಉಡುಪಿಯಲ್ಲೂ ಅಕ್ರಮ ಪಿಜಿ: ಮಾಹಿತಿ ಇಲ್ಲ ಎನ್ನುತ್ತಿದ್ದಾರೆ ಪೊಲೀಸರು!

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಉಡುಪಿ: ಉಡುಪಿ, ಮಣಿಪಾಲದಲ್ಲಿ ಪೇಯಿಂಗ್ ಗೆಸ್ಟ್‌ಗಳ ಮಾಲೀಕರು ಬಾಡಿಗೆದಾರರ (ಟೆನಂಟ್)ಸರಿಯಾದ ಮಾಹಿತಿಯನ್ನೇ ಕೊಡುತ್ತಿಲ್ಲ ಎನ್ನುತ್ತಾರೆ ಪೊಲೀಸರು.

ಪಿಜಿ ಕೇಂದ್ರಗಳಿಗೆ ‘ಟೆನಂಟ್ ವೆರಿಫಿಕೇಶನ್’ ಕಡ್ಡಾಯ. ಆದರೆ, ಕೆಲವು ಪಿಜಿ ಮಾಲೀಕರು, ಬಾಡಿಗೆ ಮನೆಯವರು ಇದನ್ನು ಪಾಲಿಸುತ್ತಿಲ್ಲ. ಉಡುಪಿ, ಮಣಿಪಾಲದಲ್ಲಿ ಸಾಕಷ್ಟು ಸಂಖ್ಯೆಯ ಪಿಜಿಗಳಿದ್ದರೂ, ಸ್ಥಳೀಯಾಡಳಿತ ಹಾಗೂ ಠಾಣೆಗಳಿಂದ ಅನುಮತಿ ಪಡೆದುಕೊಂಡಿರುವುದು ಕೆಲವು ಮಾತ್ರ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಾಗತಿಕ ಮಟ್ಟದ ಶಿಕ್ಷಣ ಕೇಂದ್ರವಾಗಿ ಗುರುತಿಸಿಕೊಂಡಿರುವ ಮಣಿಪಾಲದಲ್ಲಿ ಅತೀ ಹೆಚ್ಚು ಪಿಜಿ ಸೆಂಟರ್‌ಗಳಿವೆ. ಆದರೆ ಅನುಮತಿ ಪಡೆದುಕೊಂಡಿರುವುದು 10ರಿಂದ 12 ಪಿಜಿಗಳಷ್ಟೇ. ಉಡುಪಿಯಲ್ಲಿ ಏಳೆಂಟು ಪಿಜಿಗಳು ಮಾತ್ರ ಅನುಮತಿ ಪಡೆದಿವೆ ಎನ್ನುತ್ತಾರೆ ಪೊಲೀಸರು. ಕೆಲವರು ಸ್ವಂತ ಮನೆಯಲ್ಲೇ ಪಿಜಿ ನಡೆಸುತ್ತಿದ್ದರೆ, ಇನ್ನೂ ಕೆಲವರು ಬಾಡಿಗೆ ಮನೆ, ಫ್ಲಾೃಟ್‌ಗಳನ್ನು ಬಾಡಿಗೆ ಪಡೆದು ಪಿಜಿ ನಡೆಸುತ್ತಿದ್ದಾರೆ.

ಅಕ್ರಮ ಚಟುವಟಿಕೆಗೆ ದಾರಿ
ಪಿಜಿ ಸೆಂಟರ್ ಆರಂಭಿಸುವ ಮೊದಲು ನಗರಸಭೆ ಮತ್ತು ಸ್ಥಳೀಯ ಪೊಲೀಸ್‌ಠಾಣೆಯಿಂದ ಅನುಮತಿ ಪಡೆದುಕೊಳ್ಳಬೇಕು. ಪಿಜಿ ಕೇಂದ್ರ ಲಾಭದಾಯಕ ಉದ್ಯಮವಾದ ಹಿನ್ನೆಲೆಯಲ್ಲಿ ಕೆಲವು ನಿರುದ್ಯೋಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಅನುಕೂಲ. ಆದರೆ ಇದನ್ನೇ ಕೆಲವರು ದುರಪಯೋಗಪಡಿಸಿಕೊಂಡು ಅನುಮತಿ ಪಡೆಯದೆ ಪಿಜಿ ಸೆಂಟರ್‌ಗಳನ್ನು ನಡೆಸುತ್ತಿದ್ದಾರೆ. ಈ ಮೂಲಕ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ ಎಂಬ ಆರೋಪವಿದೆ. ಉದ್ಯೋಗ ಮತ್ತು ಶಿಕ್ಷಣ ಅರಸಿಕೊಂಡು ಸಾಕಷ್ಟು ಸಂಖ್ಯೆಯಲ್ಲಿ ಜನ ಉಡುಪಿ, ಮಣಿಪಾಲಕ್ಕೆ ಬರುತ್ತಾರೆ. ಹೆಚ್ಚಿನವರು ಆಹಾರ ಮತ್ತು ಬಾಡಿಗೆ ಖರ್ಚಿನ ವ್ಯವಸ್ಥೆ ಅನುಕೂಲಕರವಾಗಿರುವ ಪಿಜಿಗಳನ್ನೇ ಆಯ್ಕೆ ಮಾಡುತ್ತಾರೆ. ಹೀಗೆ ಬಂದವರು 6 ತಿಂಗಳು ಒಂದು ವರ್ಷ, ಎರಡು, ಮೂರು ವರ್ಷ ಇಲ್ಲಿರುತ್ತಾರೆ. ಮಣಿಪಾಲದಲ್ಲಿ ಹೆಚ್ಚಿನ ಸಂಖ್ಯೆಯ ಹೊರ ರಾಜ್ಯ ಮತ್ತು ವಿದೇಶಿಗರು ನೆಲೆಸಿದ್ದಾರೆ. ಪಿಜಿ ಕೇಂದ್ರ ಬಾಡಿಗೆ ಮನೆ ಮಾಲೀಕರು ಟೆನಂಟ್ ವೆರಿಫಿಕೇಶನ್ ವ್ಯವಸ್ಥೆ ಪಾಲಿಸುತ್ತಿಲ್ಲ.

ಏನಿದು ಟೆನಂಟ್ ವೆರಿಫಿಕೇಶನ್?
ಪಿಜಿಗೆ, ಬಾಡಿಗೆ ಮನೆಗಳಿಗೆ ಬರುವ ವ್ಯಕ್ತಿಯ ಆಧಾರ್ ಕಾರ್ಡ್ ಜತೆಗೆ ಇತರೆ ಸರ್ಕಾರಿ ಗುರುತಿನ ಚೀಟಿ, ಪಿಜಿಗೆ ತಂಗಲು ಬಂದಿರುವ ಉದ್ದೇಶ(ಶಿಕ್ಷಣ ಮತ್ತು ಉದ್ಯೋಗ ಸಂಬಂಧಪಟ್ಟ ಅಧಿಕೃತ ದಾಖಲೆಗಳು) ಸಂಬಂಧಪಟ್ಟ ದಾಖಲೆಗಳನ್ನು ಪೊಲೀಸ್ ಇಲಾಖೆಗೆ ನೀಡಬೇಕು. ಇಲಾಖೆ ಆ ವ್ಯಕ್ತಿಗೆ ಅಪರಾಧ ಹಿನ್ನೆಲೆ ಇದೆಯೇ ಎಂಬುದನ್ನು ಪರಿಶೀಲಿಸುತ್ತದೆ.

ಸುರಕ್ಷಾ ಕ್ರಮವೂ ಇಲ್ಲ
ಪಿಜಿ ಕೇಂದ್ರಗಳಿಗೆ ಸರ್ಕಾರ ಪ್ರತ್ಯೇಕ ನಿಯಮಾವಳಿ ರೂಪಿಸದಿದ್ದರೂ ಪೊಲೀಸ್ ಇಲಾಖೆಯೇ ಎನ್‌ಒಸಿ ನೀಡುವಾಗ ಸುರಕ್ಷಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸುತ್ತದೆ. ಸಿಸಿ ಟಿವಿ ಕ್ಯಾಮರಾ, ಸೆಕ್ಯೂರಿಟಿ ಗಾರ್ಡ್ ವ್ಯವಸ್ಥೆ ಇದರಲ್ಲಿ ಸೇರಿದೆ. ಸಾಕಷ್ಟು ಪಿಜಿಗಳಲ್ಲಿ ಇದನ್ನು ಪಾಲಿಸುತ್ತಲೇ ಇಲ್ಲ ಎಂಬ ಆರೋಪವಿದೆ.

ಟೆನಂಟ್ ವೆರಿಫಿಕೇಶನ್ ಕಡ್ಡಾಯ. ಪಿಜಿ ಮಾಲೀಕರು ಇದನ್ನು ಪಾಲಿಸದಿದ್ದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ಠಾಣೆ, ಸ್ಥಳೀಯಾಡಳಿತ ಸಂಸ್ಥೆಗಳಿಂದ ಅನುಮತಿ ಪಡೆಯದೆ ಪಿಜಿಗಳು ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು. ಉಡುಪಿ ನಗರ ವ್ಯಾಪ್ತಿಯಲ್ಲಿ ಮಹಿಳಾ ಪಿಜಿಗೆ ರಾಣಿ ಅಬ್ಬಕ್ಕ ಪೊಲೀಸ್ ಪಡೆ ಆಗಾಗ ಭೇಟಿ ನೀಡಿ ಪರಿಶೀಲಿಸುತ್ತದೆ. ಸ್ಥಳೀಯ ಪೊಲೀಸರು, ಬೀಟ್ ಸಿಬ್ಬಂದಿ ಇತರೆ ಪಿಜಿಗೆ ಭೇಟಿ ನೀಡಿ ಪಿಜಿ ದಾಖಲೆ ಪುಸ್ತಕ ಪರಿಶೀಲಿಸುತ್ತಾರೆ. ಎಲ್ಲ ಪಿಜಿಗಳ ಆವರಣದಲ್ಲಿ ಸಿಸಿ ಟಿವಿ ಕ್ಯಾಮರಾ ಕಡ್ಡಾಯ ಅಳವಡಿಸಬೇಕು.
ನಿಶಾ ಜೇಮ್ಸ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಡುಪಿ.

ಉಡುಪಿ, ಮಣಿಪಾಲ, ಮಲ್ಪೆ ಭಾಗದಲ್ಲಿ ಅನುಮತಿ ಪಡೆಯದೆ ಪಿಜಿ ಕೇಂದ್ರಗಳಿದ್ದರೆ, ಸಾರ್ವಜನಿಕರು ಮಾಹಿತಿ ನೀಡಲಿ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಪಿಜಿ ನಡೆಸುವ ಕೇಂದ್ರ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡು, ಸಮರ್ಪಕ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಿದರೆ ಕಂದಾಯ ಇಲಾಖೆ, ಆರೋಗ್ಯ ನಿರೀಕ್ಷಕರಿಂದ ಪರಿಶೀಲಿಸಿ ಅನುಮತಿ ನೀಡುತ್ತೇವೆ.
ಆನಂದ್ ಸಿ.ಕಲ್ಲೋಳಿಕರ್, ನಗರಸಭೆ, ಉಡುಪಿ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...