ಬೆಂಗಳೂರು: ಅಕ್ರಮವಾಗಿ 46 ಬಿಪಿಎಲ್ ಕಾರ್ಡ್ ಮಂಜೂರು, ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಸಾವಿರ ರೂ. ನಿಂದ 5 ಸಾವಿರ ರೂ.ವರೆಗೆ ವಸೂಲಿ, ಪ್ರತಿ ಕಾರ್ಡ್ಗೆ ಅಕ್ರಮವಾಗಿ 5 ರೂ.ಸಂಗ್ರಹಣೆ ಮಾಡುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆಹಾರ ಶಿರಸ್ತುದಾರ ಅಧಿಕಾರಿ ತಿಮ್ಮಯ್ಯ ಅವರನ್ನು ಅಮಾನತುಗೊಳಿಸಿ ಆಹಾರ ಇಲಾಖೆ ಆದೇಶಿಸಿದೆ.
ಇಲಾಖೆಯಲ್ಲಿ ಆಹಾರ ಶಿರಸ್ತುದಾರನಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ತಿಮ್ಮಯ್ಯ, ಲಂಚ ಪಡೆದು ವಿಶೇಷ “ವೈದ್ಯಕಿಯ ಕೇಸ್’ ವಿನಾಯಿತಿ ದುರ್ಬಳಕೆ ಮಾಡಿಕೊಂಡು ಬಿಪಿಎಲ್ ಚೀಟಿ ಕೊಟ್ಟಿರುವುದು ವರದಿಯಲ್ಲಿ ಬಹಿರಂಗವಾಗಿತ್ತು. ಅಂಗಡಿ ಮಾಲೀಕರಿಂದ ಬಲವಂತಾಗಿ ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಇಲಾಖೆ ಆಯುಕ್ತರ ಕಚೇರಿಗೆ ಮಾಲೀಕರು ದೂರು ನೀಡಿದ್ದರು.
ಈದ್ಗಾ ಮೈದಾನದಲ್ಲಿ ಪಾಲಿಕೆಯಿಂದಲೇ ಗಣೇಶ ಪ್ರತಿಷ್ಠಾಪಿಸಿ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ನೌಕರ ವಿರುದ್ಧ ಸಾಕಷ್ಟು ದೂರು ದಾಖಲಾಗಿತ್ತು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಕಾರ್ಡ್ಗೆ 5 ರೂ.ನಂತೆ ಹಣ ವಸೂಲಿ ಮಾಡುತ್ತಿದ್ದೇವೆ ಎಂದು ರಾಜಾರೋಷವಾಗಿ ಹೇಳಿದ್ದರು. ಈ ಕುರಿತು ಹಲವು ಬಾರಿ ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದರೂ ತಿಮ್ಮಯ್ಯ ಪದೇಪದೆ ಕರ್ತವ್ಯದಲ್ಲಿ ಪದೇಪದೆ ಲೋಪವೆಸಗುತ್ತಿದ್ದರು. ಹಾಗಾಗಿ, ಕರ್ನಾಟಕ ರಾಜ್ಯ ನಾಗರಿಕ ಸೇವಾ ( ನಡತೆ) ನಿಯಮ ಅನ್ವಯ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಸಸ್ಪೆಂಡ್ ಮಾಡಲಾಗಿದೆ ಎಂದು ಇಲಾಖೆ ಆಯುಕ್ತೆ ವಾಸಿರೆಡ್ಡಿ ವಿಜಯ ಜ್ಯೋತ್ಸ್ನ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.