ಕಾರು ಅಪಘಾತ ಚಾಲಕ ಸಾವು

ಇಳಕಲ್ಲ(ಗ್ರಾ): ಸೊಲ್ಲಾಪುರ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗೊರಬಾಳ ಸೇತುವೆ ಬಳಿ ಇನ್ನೋವಾ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚಾಲಕ ಫಕ್ರುದ್ದೀನ್ ಬಾಬುಸಾಬ (27) ಮೃತ ವ್ಯಕ್ತಿ. ಬಳ್ಳಾರಿ ನಿವಾಸಿಗಳು ಹುನಗುಂದ ಮಾರ್ಗವಾಗಿ ಕುಷ್ಟಗಿ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಗುರುವಾರ ರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಗಾಯಾಳುಗಳನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ಲ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *