ಭಾಜಪ ಪರಿವಾರ ಅಭಿಯಾನಕ್ಕೆ ಚಾಲನೆ

ಇಳಕಲ್ಲ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ‘ನಮ್ಮ ಪರಿವಾರ, ಭಾಜಪ ಪರಿವಾರ’ ಅಭಿಯಾನಕ್ಕೆ ಇಳಕಲ್ಲದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ನಿವಾಸದ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಬುಧವಾರ ಚಾಲನೆ ನೀಡಲಾಯಿತು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಶ್ರೀ ಉದ್ನೂರ ಮಾತನಾಡಿ, ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ತಮ್ಮ ನಿವಾಸದ ಮೇಲೆ ಬಿಜೆಪಿ ಧ್ವಜ ಹಾರಿಸಬೇಕು ಎಂದರು.

ನಗರಸಭೆ ಸದಸ್ಯ ಸುಗೂರೇಶ ನಾಗಲೋಟಿ ಮಾತನಾಡಿದರು. ಹುನಗುಂದ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಭಾರತಿ ದೇಸಾಯಿ, ಇಳಕಲ್ಲ ನಗರ ಘಟಕದ ಅಧ್ಯಕ್ಷ ಜ್ಯೋತಿ ಕಾಟಾಪುರ, ನಾಯಕಿಯರಾದ ಅನಿತಾ ಸರೋದೆ, ಯಲ್ಲಮ್ಮ ಭಜಂತ್ರಿ, ಲಕ್ಷ್ಮಿಬಾಯಿ ಇತರರು ಇದ್ದರು.