ಯುವಕನ ಬಂಧನಕ್ಕೆ ಆಗ್ರಹ

ಇಳಕಲ್ಲ: ಪಾಕಿಸ್ತಾನ ಪರ ಹಾಗೂ ಪ್ರಧಾನಿ ನರೇಂದ್ರ ಮೋದಿ, ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಯುವಕ ಯೂಸ್ು ಕರಡಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು ಹಿಂದು ಪರ ಸಂಘಟನೆಗಳು ಭಾನುವಾರ ಪ್ರತಿಭಟನೆ ನಡೆಸಿದವು.

ನಗರದ ಅಲ್ಲಂಪುರಪೇಟೆ ನಿವಾಸಿ ಯೂಸ್ು ಕರಡಿ, ಪಾಕಿಸ್ತಾನ ಪರವಾಗಿ ಜಯಘೋಷಣೆ ಹಾಗೂ ಪಿಎಂ, ವಿಂಗ್ ಕಮಾಂಡರ್ ಬಗ್ಗೆ ಕೆಟ್ಟಪದಗಳನ್ನು ಬಳಕೆ ಮಾಡಿದ ಸುದ್ದಿ ನಗರದಲ್ಲಿ ಹರಡುತ್ತಿದ್ದಂತೆ ಹಿಂದುಪರ ಸಂಘಟನೆಗಳ ಮುಖಂಡರು ಕಿಡಿಗೇಡಿ ಮನೆ ಮುತ್ತಿಗೆ ಹಾಕಿ ಆಕೋಶ ವ್ಯಕ್ತಪಡಿಸಿದರು. ಆತ ಮನೆಯಲ್ಲಿಲ್ಲದ ಸುದ್ದಿ ಕೇಳಿ ಭಾವಚಿತ್ರಕ್ಕೆ ಚಪ್ಪಲಿ ಹಾಕಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೊಲೀಸ್ ಠಾಣೆಗೆ ಆಗಮಿಸಿ ಠಾಣೆ ಎದುರು ರಸ್ತೆ ಸಂಚಾರ ಬಂದ್ ಮಾಡಿದರು.

ಮುಖಂಡ ಪ್ರದೀಪ ಅಮರಣ್ಣನವರ ಮಾತನಾಡಿ, ದೇಶಕ್ಕೆ ದ್ರೋಹ ಬಗೆಯುತ್ತಿರುವ ಯೂಸ್ು ಕರಡಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆ ಸ್ಥಳಕ್ಕಾಗಮಿಸಿದ ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣಿ ಪಿಎಸ್‌ಐ ಶಿವಾನಂದ ಗುಡಗನಟ್ಟಿ ಹಾಗೂ ನಗರಸಭೆ ಸದಸ್ಯ ಮಲ್ಲಪ್ಪ ಬಂಡಿವಡ್ಡರ, ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತದೆ. ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗುವುದು ಎಂದು ಭರವಸೆ ನೀಡಿದರೂ ಪ್ರತಿಭಟನಾಕಾರರು ಮಣಿಯಲಿಲ್ಲ. ನಂತರ ಪಿಎಸ್‌ಐ ಪೊಲೀಸ್ ಠಾಣೆ ಒಳಗೆ ಬಂದು ಕುಳಿತುಕೊಳ್ಳಿ. ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದಾಗ ಪ್ರತಿಭಟನಾಕಾರರು ಪೊಲೀಸ್ ಠಾಣಿ ಆವರಣದಲ್ಲಿ ಪ್ರತಿಭಟನೆ ಮುಂದುವರಿಸಿದರು.

ಮುಖಂಡರಾದ ಪರಶುರಾಮ ಬಿಸಲದಿನ್ನಿ, ವಿಜಯ ಗೌಡರ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಇಳಕಲ್ಲ ನಗರ ಪಿಎಸ್‌ಐ ಅನೀಲ ರಾಠೋಡ, ಹುನಗುಂದ, ಅಮೀನಗಡ ಪೊಲೀಸ್ ಠಾಣೆ ಪಿಎಸ್‌ಐ ಮಾರ್ಗದರ್ಶನದಲ್ಲಿ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಂದ್ ಬಸ್ತ್ ಮಾಡಲಾಗಿತ್ತು.

ಪ್ರತಿಭಟನೆ ವಾಪಸ್
ಪೊಲೀಸರು ಸ್ವಯಂ ಪ್ರೇರಣೆಯಿಂದ ಯೂಸ್ು ಕರಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಹುನಗುಂದ ಸಿಪಿಐ ಸಂಜೀವ ಬಳಿಗಾರ ತಿಳಿಸಿದಾಗ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.