ಇಲ್ಯಾಸ್​ ಹತ್ಯೆ: ಕೊಲೆಯಾದ ವ್ಯಕ್ತಿಯ ಹಿನ್ನೆಲೆ ತಿಳಿಯುವುದು ಮುಖ್ಯ ಎಂದ ಖಾದರ್​

ಧಾರವಾಡ: ಇಲ್ಯಾಸ್​ ಹತ್ಯೆಗೆ ಪ್ರತಿಕ್ರಿಯಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯುಟಿ ಖಾದರ್​, ಯಾವುದೇ ಹತ್ಯೆಯಾದಾಗ ಆ ವ್ಯಕ್ತಿಯ ಹಿನ್ನೆಲೆಯನ್ನು ಮೊದಲು ನೋಡುವುದು ಮುಖ್ಯ ಎಂದಿದ್ದಾರೆ.

ಹತ್ಯೆಯಾಗಿರುವ ಇಲ್ಯಾಸ್​ ಕಾಂಗ್ರೆಸ್​ನ ಕಾರ್ಯಕರ್ತ ಹಾಗೂ ಟಾರ್ಗೆಟ್​ ಗ್ರೂಪ್​​ನ ಸದಸ್ಯರಾಗಿದ್ದವರು. ಈ ಬಗ್ಗೆ ಮಾತನಾಡಿದ ಖಾದರ್​, ಕಾಂಗ್ರೆಸ್​​ನ​​ ಎಲ್ಲ ಕಾರ್ಯಕರ್ತರು ನಮ್ಮ ಸಹಚರರೆ ಆದರೆ ಈ ಟಾರ್ಗೆಟ್​ ಗ್ರೂಪ್​ ಏನು ಮಾಡುತ್ತಿತ್ತು ಎಂಬುದನ್ನು ನೋಡ ಬೇಕಿದೆ. ಯಾವುದೇ ಹತ್ಯೆಯಾದಾಗ ಆ ವ್ಯಕ್ತಿಯ ಹಿನ್ನೆಲೆ ನೋಡ ಬೇಕು. ಯಾರೆಲ್ಲಾ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ತಿಳಿಯ ಬೇಕಾಗುತ್ತದೆ ಎಂದರು.

ಯಾರೇ ತಪ್ಪು ಮಾಡಿದರೂ ಅದನ್ನು ಸಹಿಸುವುದಿಲ್ಲ. ಅಶಾಂತಿ ಸೃಷ್ಟಿಸುವ ಸಂಘಟನೆಗಳನ್ನು ಬ್ಯಾನ್​ ಮಾಡ ಬೇಕು. ಕೆಲ ಸಂಘಟನೆಗಳನ್ನು ನಿಷೇಧಿಸ ಬೇಕು ಎಂದು ಕೇಳುವ ಬಿಜೆಪಿ ಕೇಂದ್ರದಲ್ಲಿರುವ ತಮ್ಮ ಸರ್ಕಾರದ ಮೂಲಕ ತಾವೇ ಈ ಕೆಲಸ ಮಾಡ ಬೇಕು ಎಂದರು. ರಾಜ್ಯ ಸರ್ಕಾರದಿಂದ ನಾವು ನಿಷೇಧ ಮಾಡಿದರೂ, ಅವರು ಬೇರೆ ರಾಜ್ಯದಲ್ಲಿ ಕುಳಿತು ಕಾರ್ಯನಿರ್ವಹಿಸಿದರೇ ಕೇಂದ್ರ ಸರ್ಕಾರ ಅಂಥವರನ್ನು ಗುರುತಿಸಬೇಕು ಎಂದರು.

Leave a Reply

Your email address will not be published. Required fields are marked *