ಇಳಕಲ್ಲ: ಇಲ್ಲಿನ ಗೌಳೇರಗುಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕರೊನಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ 15 ಜನ ಸಂಪೂರ್ಣ ಗುಣಮುಖರಾಗಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡರು.
ಜು.20 ರಿಂದ ಕರೊನಾ ಕೇರ್ ಸೆಂಟರ್ ಆರಂಭಗೊಂಡಿದ್ದು, ಒಟ್ಟು 52 ಜನ ಕರೊನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ 9 ಜನ ಪುರುಷರು, 6 ಜನ ಮಹಿಳೆಯರು ಒಟ್ಟು 15 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಅವರೆಲ್ಲ್ಲರನ್ನು ಆರೋಗ್ಯ, ಕಂದಾಯ, ನಗರಸಭೆ, ಪೊಲೀಸ್ ಇಲಾಖೆ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.
ಇಳಕಲ್ಲ ತಹಸೀಲ್ದಾರ್ ವೇದವ್ಯಾಸ ಮುತಾಲಿಕ, ಹುನಗುಂದ ತಹಸೀಲ್ದಾರ್ ಬಸವರಾಜ ನಾಗರಾಳ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ ಗುಣಮುಖರಾದವರಿಗೆ ಪ್ರಮಾಣಪತ್ರ ವಿತರಿಸಿದರು.
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ನವೀನ ಬಿರಾದಾರ, ಡಾ.ಚೇತನ ಶ್ಯಾವಿ,ಡಾ.ಪೋತ್ತಾರ, ಡಾ.ಬಿಂಜವಾಡಗಿ, ಜಿ.ಬಿ. ಭದ್ರಣ್ಣನವರ, ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ಪಿಎಸ್‌ಐ ಆರ್.ವೈ. ಜಲಗೇರಿ, ಸಿದ್ದು ಕೌಲಗಿ ಸೇರಿದಂತೆ ಅನೇಕರು ಇದ್ದರು.