ಇಳಕಲ್ಲ ಕುವರನಿಗೆ ಬಂಗಾರದ ಪದಕ

ಇಳಕಲ್ಲ: ಮಲೇಷಿಯಾದ ಫೇರಕಾ ನಗರದಲ್ಲಿ ಮೇ 5 ರಂದು ನಡೆದ 16ನೇ ಒಕಿಸಜಾ ಗುಜರೊ ಅಂತಾರಾಷ್ಟ್ರೀಯ ಒಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆೆಯಲ್ಲಿ ನಗರದ ನಾಗೇಶ ಸಂಗಪ್ಪ ತಳವಾರ ಬಂಗಾರದ ಪದಕ ಗಳಿಸಿದ್ದಾರೆ.

56 ಕೆಜಿ ಕುಮಟೆ ಫೈಟ್ ಕರಾಟೆ ಇಂಟರ್‌ನ್ಯಾಷನಲ್ ಸ್ಪರ್ಧೆೆಯಲ್ಲಿ ದೇಶ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆೆ. 8 ದೇಶಗಳ 800ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಇನ್ನೊಂದು ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಬಡ ಕುಟುಂಬದ ಕ್ರೀಡಾಪಟು
ಮೂಲತಃ ಕೂಡಲಸಂಗಮ ಗ್ರಾಮದ ನಾಗೇಶ ತಳವಾರ ಬಡ ಕುಟುಂಬದವರು. ಹೊಟ್ಟೆ ಪಾಡಿಗಾಗಿ 10 ವರ್ಷಗಳ ಹಿಂದೆ ಇಳಕಲ್ಲ ನಗರಕ್ಕೆ ವಲಸೆ ಬಂದರು. ಬಾಲ್ಯದಿಂದಲೇ ಕರಾಟೆಯಲ್ಲಿ ತರಬೇತಿ ಪಡೆದು ದೇಶದ ವಿವಿಧ ಟೂರ್ನಿಗಳಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ. 2015 ರಲ್ಲಿ ಭೂತಾನ್ ದೇಶದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಹಾಗೂ ಕಂಚು ಪಡೆದಿದ್ದಾರೆ.

ಬೆಂಗಳೂರಿನ ಕರಾಟೆ ಟ್ರಸ್ಟ್ ಮುಖಾಂತರ ಮಲೇಷಿಯಾ ದೇಶಕ್ಕೆ ತೆರಳಿ ಈ ಸಾಧನೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆ ಪ್ರತಿನಿಧಿಸಿದ ಏಕೈಕ ಪ್ರತಿನಿಧಿಯಾಗಿದ್ದಾರೆ.

ಪ್ರೋತ್ಸಾಹ ಅಗತ್ಯ
ವಿಶಿಷ್ಟ ಸಾಧನೆಗೈದಿರುವ ನಾಗೇಶ ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾ ಅಧಿಕಾರಿಗಳು ಈ ಬಡ ಕ್ರೀಡಾಪಟುವಿಗೆ ಸರ್ಕಾರಿ ನೌಕರಿ ಕೊಡಿಸಿ ಪ್ರೋತ್ಸಾಹಿಸಬೇಕಿದೆ.

Leave a Reply

Your email address will not be published. Required fields are marked *